Published on: October 4, 2023

ವೈದ್ಯಕೀಯ ನೋಬೆಲ್ 2023

ವೈದ್ಯಕೀಯ ನೋಬೆಲ್ 2023

ಸುದ್ದಿಯಲ್ಲಿ ಏಕಿದೆ? ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ 2023 ನೇ ಸಾಲಿನ ನೋಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ಘೋಷಿಸಲಾಗಿದೆ.

ಮುಖ್ಯಾಂಶಗಳು

  • ಎಂ ಆರ್ ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ನೀಡಲಾಗುತ್ತಿದೆ.
  • ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್ಮನ್ ಅವರ ಸಂಶೋಧನೆಗಳು ಕೋವಿಡ್‌ ವೈರಾಣುವನ್ನೂ ಅರ್ಥೈಸಿಕೊಳ್ಳಲು ವೈದ್ಯಕೀಯ ಜಗತ್ತಿಗೆ ನೆರವು ನೀಡಿದೆ. ಕೋವಿಡ್ ವೈರಾಣು ಹೇಗೆ ಮಾನವನ ರೋಗ ನಿರೋಧಕ ಶಕ್ತಿ ಹಾಗೂ ರೋಗದ ವಿರುದ್ಧ ಹೋರಾಡುವ ವ್ಯವಸ್ಥೆಯನ್ನು ಭೇದಿಸುತ್ತದೆ ಅನ್ನೋದ್ರ ಬಗ್ಗೆ ಈ ಇಬ್ಬರೂ ತಜ್ಞರು ವಿಸ್ತೃತ ಅಧ್ಯಯನ ನಡೆಸಿದ್ದಾರೆ. ಈ ಇಬ್ಬರೂ ತಜ್ಞರು ತಮ್ಮ ಅಧ್ಯಯನ ವರದಿಯನ್ನು 2005ರಲ್ಲೇ ಪ್ರಕಟಿಸಿದ್ದರು.
  • ಕತಾಲಿನ್ ಕರಿಕೋ ಅವರು ಹಂಗೆರಿ ದೇಶದವರು. ಡ್ರೀವ್ ವಿಸ್ಮನ್ ಅವರು ಅಮೆರಿಕ ದೇಶದವರಾಗಿದ್ದರೆ.

ನೋಬೆಲ್ ಪ್ರಶಸ್ತಿ

  • ವಿಜ್ಞಾನ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದೇ ಕರೆಯಲಾಗುವ ಈ ಪ್ರಶಸ್ತಿಯ ಆಯ್ಕೆಯನ್ನು ಸ್ವೀಡನ್‌ನಲ್ಲಿರುವ ಕ್ಯಾರೊಲಿನ್‌ಸ್ಕಾ ವೈದ್ಯಕೀಯ ವಿಶ್ವವಿದ್ಯಾಲಯ ನಡೆಸಿದೆ.
  • ಕಳೆದ 12 ತಿಂಗಳಲ್ಲಿ ಮಾನವೀಯತೆಯ ಸುಧಾರಣೆಗಾಗಿ ಅತ್ಯುತ್ತಮ ಕೆಲಸ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
  • ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ ಮತ್ತು ಶಾಂತಿಯಂತಹ ಅನೇಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆಗಳಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
  • ಸ್ವೀಡಿಷ್ ಉದ್ಯಮಿ ಮತ್ತು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
  • ನೊಬೆಲ್ ಪ್ರಶಸ್ತಿಯನ್ನು ಮೊದಲ ಬಾರಿಗೆ 1901 ರಲ್ಲಿ ನೀಡಲಾಯಿತು.
  • 1968 ರಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಸ್ವೀಡನ್ ಇದಕ್ಕೆ ಆರ್ಥಿಕ ವಿಜ್ಞಾನ ಎಂಬ ಇನ್ನೊಂದು ವರ್ಗವನ್ನು ಸೇರಿಸಿತು.
  • ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯಾದ ಡಿಸೆಂಬರ್ 10 ರಂದು ಈ ಪ್ರಶಸ್ತಿಗಳನ್ನು ವಿಜೇತರಿಗೆ ಹಸ್ತಾಂತರಿಸಲಾಗುತ್ತದೆ.

ಪುರಸ್ಕಾರ

  • ನೊಬೆಲ್ ಪ್ರಶಸ್ತಿ ವಿಜೇತರಿಗೆ ಪದಕ ಮತ್ತು 10 ಮಿಲಿಯನ್ ಸ್ವೀಡಿಷ್ ಕ್ರೋನಾ (ಇಂದು ಸುಮಾರು ರೂ. 75764727) ನಗದು ನೀಡಲಾಗುತ್ತದೆ. ಒಂದು ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ವಿಜೇತರು ಇದ್ದರೆ, ಬಹುಮಾನದ ಹಣವನ್ನು ಅವರ ನಡುವೆ ಹಂಚಲಾಗುತ್ತದೆ.