Published on: September 5, 2021
‘ವೈ-ಬ್ರೇಕ್’ ಯೋಗ ಆ್ಯಪ್
‘ವೈ-ಬ್ರೇಕ್’ ಯೋಗ ಆ್ಯಪ್
ಸುದ್ಧಿಯಲ್ಲಿ ಏಕಿದೆ? ವೃತ್ತಿಪರರು ಕೆಲಸದ ಒತ್ತಡ ನಡುವೆ ಕೇವಲ ಐದು ನಿಮಿಷಗಳ ಯೋಗಾಭ್ಯಾಸ ಮಾಡುವ ಮೂಲಕ ದೇಹ – ಮನಸ್ಸು ಹಗುರಗೊಳಿಸಿಕೊಳ್ಳಲು ನೆರವಾಗುವ ‘ವೈ – ಯೋಗ ಬ್ರೇಕ್’ ಎಂಬ ವಿಶಿಷ್ಟ ಆ್ಯಪ್ ಅನ್ನು ಕೇಂದ್ರ ಆಯುಷ್ ಸಚಿವಾಲಯವು ಬಿಡುಗಡೆ ಮಾಡಿದೆ.
- ಸಂಕ್ಷಿಪ್ತ ಆಸನಗಳು, ಪ್ರಾಣಾಯಾಮ ಹಾಗೂ ಧ್ಯಾನಗಳ ಬಗ್ಗೆ ಕೇವಲ ಐದು ನಿಮಿಷಗಳಲ್ಲಿ ಪೂರ್ಣ ಮಾಹಿತಿಯನ್ನು ಈ ವಿಶೇಷ ಆ್ಯಪ್ನಿಂದ ಪಡೆಯಬಹುದಾಗಿದೆ.
- ಹಲವು ವರ್ಷಗಳ ಸಂಶೋಧನೆ, ಅಭ್ಯಾಸದ ಮೂಲಕ ಯೋಗಾಸನಗಳು, ಪ್ರಾಣಾಯಮದ ಸಂಕ್ಷಿಪ್ತ ಅಭ್ಯಾಸ ಪದ್ಧತಿ ಸಿದ್ಧಪಡಿಸಲಾಗಿದೆ. ಕೂಡಲೇ ಒತ್ತಡ ಕಳೆದುಕೊಳ್ಳಲು ಇವು ಜನರಿಗೆ ಸಹಾಯಕವಾಗಿವೆ. ಕಾರ್ಪೊರೇಟ್ ಉದ್ಯೋಗಿಗಳಿಗಾಗಿಯೇ ಹಲವು ಯೋಗಪಟುಗಳು ಮತ್ತು ಸಂಶೋಧಕರು ಈ ಆ್ಯಪ್ನಲ್ಲಿನ ಮಾಹಿತಿಗಳನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿರುವ ವಿಡಿಯೋಗಳು ಅಭ್ಯಾಸಕ್ಕೆ ಬಹಳ ನೆರವಾಗಲಿವೆ
ಬೆಂಗಳೂರಿನ ನಿಮ್ಹಾನ್ಸ್ ತಂಡ
- ಆ್ಯಪ್ ಸಿದ್ಧಪಡಿಸುವಲ್ಲಿ ಬೆಂಗಳೂರಿನ ನಿಮ್ಹಾನ್ಸ್ ತಜ್ಞರ ತಂಡ ಪ್ರಮುಖ ಪಾತ್ರ ವಹಿಸಿದೆ. ಇವರೊಂದಿಗೆ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಕೇಂದ್ರ (ಎಂಡಿಎನ್ಐವೈ), ಚೆನ್ನೈನ ಕೃಷ್ಣಮಾಚಾರ್ಯ ಯೋಗ ಮಂದಿರಂ, ರಾಮಕೃಷ್ಣ ಮಿಷನ್, ಬೇಲೂರಿನ ವಿವೇಕಾನಂದ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರ, ಲೊನಾವಾಲಾದ ಕೈವಲ್ಯಧಾಮ ಆರೋಗ್ಯ ಮತ್ತು ಯೋಗ ಸಂಶೋಧನಾ ಕೇಂದ್ರಗಳು ಕೂಡ ಸಂಶೋಧನೆಗೆ ನೆರವಾಗಿವೆ.
- 6 – ಮೆಟ್ರೋ ನಗರಗಳಲ್ಲಿ ನಡೆದಿದೆ ಈ ‘ವೈ – ಯೋಗ ಬ್ರೇಕ್’ ಆ್ಯಪ್ನಲ್ಲಿನ ಆಸನಗಳ ಪ್ರಾಯೋಗಿಕ ಅಧ್ಯಯನ
- ಶ್ವಾಸಕೋಶದ ರಂಧ್ರಗಳು ಚೆನ್ನಾಗಿ ತೆರೆದುಕೊಂಡು ಉಸಿರಾಟ ಸರಾಗವಾಗಲು ಆ್ಯಪ್ನಲ್ಲಿ ಇರುವ ಆಸನಗಳು ಸಹಕಾರಿ. ಇದರಿಂದ ಹೆಚ್ಚು ಹೊತ್ತು ಕೆಲಸ ಮಾಡಲು ದೇಹಕ್ಕೆ ಚೈತನ್ಯ ಲಭಿಸುತ್ತದೆ. ನರಗಳ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ನಾಡಿ ಸಂಶೋಧನೆ ಪ್ರಾಣಾಯಾಮ, ಧ್ಯಾನಗಳು ರಕ್ತ ಸಂಚಾರ, ಆಮ್ಲಜನಕ ಪ್ರಮಾಣ ಹೆಚ್ಚಳಕ್ಕೆ ಸಹಕಾರಿ