Published on: November 6, 2021

ವೊಲ್ಬಾಚಿಯಾ ಸೊಳ್ಳೆಗಳು

ವೊಲ್ಬಾಚಿಯಾ ಸೊಳ್ಳೆಗಳು

ಸುದ್ಧಿಯಲ್ಲಿ ಏಕಿದೆ?  ಇಂಡೋನೇಷ್ಯಾ ವಿಜ್ಞಾನಿಗಳು, ಡೆಂಗ್ಯೂ ಸೋಂಕು ಹರಡುವ ಸೊಳ್ಳೆಯನ್ನು ಮಟ್ಟ ಹಾಕಲು ಮತ್ತೊಂದು ಜನ ಸ್ನೇಹಿ ಸೊಳ್ಳೆ ತಳಿ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ.

  • ‘ವೊಲ್ಬಾಚಿಯಾ’ ಇದು ಕೀಟಗಳಲ್ಲಿ ಕಾಣಿಸುವ ಸಾಮಾನ್ಯವಾದ ಬ್ಯಾಕ್ಟಿರಿಯಾ. ಕೆಲವು ಜಾತಿಯ ಸೊಳ್ಳೆ, ನೊಣ, ಚಿಟ್ಟೆ ಮತ್ತು ಪತಂಗದಂತಹ ಕೀಟಗಳಲ್ಲಿ ಇದು ಸಾಮಾನ್ಯವಾಗಿ ಕಾಣಿಸುತ್ತದೆ. ಆದರೆ ಡೆಂಗ್ಯೂ ವೈರಾಣು ಪಸರಿಸುವ ‘ಅಡಿಸ್‌ ಇಜಿಪ್ತಿ’ ಸೊಳ್ಳೆಯಲ್ಲಿ ಮಾತ್ರ ವೊಲ್ಬಾಚಿಯಾ ಬ್ಯಾಕ್ಟಿರಿಯಾ ಕಾಣಿಸುವುದಿಲ್ಲ.
  • ಈ ಗುಟ್ಟನ್ನು ತಿಳಿದ ಇಂಡೋನೇಷ್ಯಾ ವಿಜ್ಞಾನಿಗಳು ಈಗ ವೊಲ್ಬಾಚಿಯಾ ಸೊಳ್ಳೆಗಳನ್ನು ಹೆಚ್ಚಾಗಿ ಅಭಿವೃದ್ಧಿ ಪಡಿಸಿ ಅಡಿಸ್‌ ಇಜಿಪ್ತಿಯನ್ನು ಇಲ್ಲವಾಗಿಸಲು ಹೆಣಗುತ್ತಿದ್ದಾರೆ. ಶೇ.60ರಷ್ಟು ಕೀಟಗಳಲ್ಲಿ ವೊಲ್ಬಾಚಿಯಾ ಬ್ಯಾಕ್ಟಿರಿಯಾ ಕಾಣಿಸುತ್ತದೆ. ಈ ಬ್ಯಾಕ್ಟೀರಿಯಾವನ್ನು ಹೊಂದಿರುವ ಸೊಳ್ಳೆ ಮತ್ತು ಕೀಟಗಳಿಂದ ಪರಿಸರಕ್ಕೆ ಯಾವುದೇ ಅಪಾಯ ಇಲ್ಲ. ಇವು ಮನುಷ್ಯನಿಗೆ ಕಚ್ಚಿದರೂ ಸಮಸ್ಯೆ ಇಲ್ಲ. ಆದರೆ ಅಡಿಸ್‌ ಇಜಿಪ್ತಿ ಸೊಳ್ಳೆಗಳು ಮೈತುಂಬ ಮಾರಕ ವೈರಾಣುಗಳನ್ನೇ ಹೊತ್ತು ತಿರುಗುತ್ತವೆ. ಅವು ನಾಶವಾಗಬೇಕಾದರೆ ಸುಲಭ ಸಂತಾನಾಭಿವೃದ್ಧಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳುವುದೊಂದೇ ಮಾರ್ಗ.
  • ಈ ತಂತ್ರವನ್ನೇ ಈಗ ವೊಲ್ಬಾಚಿಯಾ ಅಭಿವೃದ್ಧಿ ಪಡಿಸುವ ಮೂಲಕ ಮಾಡಲಾಗುತ್ತಿದೆ. ಪಕ್ಕಾ ಪರಿಸರ ಸ್ನೇಹಿ ಎನಿಸಿದ ವೊಲ್ಬಾಚಿಯಾ ಸೊಳ್ಳೆಗಳನ್ನು ಹೇರಳವಾಗಿ ಅಭಿವೃದ್ಧಿ ಪಡಿಸಿದರೆ, ಇಜಿಪ್ತಿ ಸೊಳ್ಳೆಗಳಿಗೆ ಸಂತಾನಾಭಿವೃದ್ಧಿ ಇಕ್ಕಟ್ಟು ಶುರುವಾಗುತ್ತದೆ. ಸಜಾತಿಯ ಸೊಳ್ಳೆಗಳು ಸಿಗದೇ ಅವು ವೊಲ್ಬಾಚಿಯಾದೊಂದಿಗೆ ಸಂಪರ್ಕ ಸಾಧಿಸಿ ಸಂತಾನ ಬೆಳೆಸಬೇಕಾಗುತ್ತದೆ.ಹಾಗಾದಾಗ, ಅಲ್ಲಿ ವೊಲ್ಬಾಚಿಯಾ ಸೊಳ್ಳೆಗಳೇ ಉತ್ಪತ್ತಿಯಾಗುತ್ತವೆ ವಿನಾ ಇಜಿಪ್ತಿಗಳು ಆಗುವುದಿಲ್ಲ
  • ಅಡಿಸ್‌ ಇಜಿಪ್ತಿ ಮತ್ತು ವೊಲ್ಬಾಚಿಯಾ ಸೊಳ್ಳೆಗಳ ನಡುವೆ ಸಮ್ಮಿಲನ ನಡೆದರೆ ಹುಟ್ಟುವುದು ವೊಲ್ಬಾಚಿಯಾ ಸೊಳ್ಳೆಗಳು ಎನ್ನುವ ಸಂಗತಿ 2017ರಿಂದ ನಡೆದ ಸಂಶೋಧನೆಯಿಂದ ಖಚಿತಪಟ್ಟಿದೆ.