Published on: November 21, 2022

‘ವ್ಯವಸ್ಥಾಪಕ ಸಮಿತಿ’

‘ವ್ಯವಸ್ಥಾಪಕ ಸಮಿತಿ’

ಸುದ್ದಿಯಲ್ಲಿ ಏಕಿದೆ?

ಕರ್ನಾಟಕ ರಾಜ್ಯ ದತ್ತಿ ಇಲಾಖೆಯು ಚಿಕ್ಕಮಗಳೂರಿನ ಗುರು ದತ್ತಾತ್ರೇಯ ಬಾಬಾಬುಡನ್ ದೇಗುಲದಲ್ಲಿನಡೆಯುವ ಧಾರ್ಮಿಕ ವಿಧಿ ವಿಧಾನಗಳ ಮೇಲ್ವಿಚಾರಣೆಗಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿದೆ.

ಮುಖ್ಯಾಂಶಗಳು

  • ಮೂರನೇ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಸಮಿತಿ ರಚಿಸುವ ಪ್ರಸ್ತಾವನೆಯನ್ನು ಮಂಡಿಸಲಾಗಿದ್ದು, ಕರ್ನಾಟಕ ದತ್ತಿ ಇಲಾಖೆಯುತನ್ನ ಸಭೆಯಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ (ತಿದ್ದುಪಡಿ) ಕಾಯಿದೆ, 2011 ರ ಸೆಕ್ಷನ್ 25 ರ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗಿದೆ.
  • ಓರ್ವ ಮುಸ್ಲಿಂ ಸದಸ್ಯ ಸೇರಿ 8 ಮಂದಿಯ ಸಮಿತಿಯನ್ನು ರಚಿಸಲಾಗಿದೆ. ಅವರಲ್ಲಿ ಇಬ್ಬರು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ ಪಂಗಡಗಳಿಗೆ ಸೇರಿದ ಒಬ್ಬರು ಇದ್ದಾರೆ. ಮೂರು ವರ್ಷಗಳ ಅವಧಿಗೆ ಈ ಸಮಿತಿಯು ಕಾರ್ಯನಿರ್ವಹಿಸಲಿದೆ.

ಏನಿದು ವಿವಾದ?

  • ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಿದೆ. ಆದರೆ ಈ ಸ್ಥಳವನ್ನು ಬಾಬಾ ಬುಡನ್‌ ಗಿರಿ ಎಂದೂ ಮತ್ತೆ ಕೆಲವರು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.

ಈ ದತ್ತ ಪೀಠ ಎಲ್ಲಿದೆ?

  • ಚಿಕ್ಕಮಗಳೂರು ತಾಲ್ಲೂಕಿನ ಬಾಬಾಬುಡನ್​ಗಿರಿ,ದತ್ತಾತ್ರೇಯ ಪೀಠ ಎಂದೂ ಕರೆಯಲ್ಪಡುವ ಚಂದ್ರದ್ರೋಣ ಪರ್ವತವು ಭಾರತದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಪರ್ವತವಾಗಿದೆ.
  • ಈ ಪೀಠವು ಹಿಂದೂಗಳು ಮತ್ತು ಮುಸ್ಲಿಮರ ತೀರ್ಥಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಸಂಘ ಪರಿವಾರದ ಸಂಘಟನೆಗಳು 2000 ರ ದಶಕದ ಉತ್ತರಾರ್ಧದಲ್ಲಿ “ಶ್ರೀ ಗುರು” ಎಂಬ ಹೋರಾಟದ ಭಾಗವಾಗಿ “ದತ್ತ ಜಯಂತಿ” ಆಚರಣೆಗಳನ್ನು ಪ್ರಾರಂಭಿಸಿದವು.
  • ಈ ಶ್ರೇಣಿಯ ಮುಖ್ಯ ಶಿಖರಗಳೆಂದರೆ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿ (ಎತ್ತರ 1895 ಮೀ). ಒಟ್ಟಾರೆಯಾಗಿ, ಈ ಶಿಖರಗಳನ್ನು ಚಂದ್ರದ್ರೋಣ ಪರ್ವತ ಶ್ರೇಣಿ ಎಂದು ಕರೆಯಲಾಗುತ್ತದೆ ಏಕೆಂದರೆ ಅವು ನೈಸರ್ಗಿಕವಾಗಿ ಅರ್ಧಚಂದ್ರನ ಆಕಾರವನ್ನು ರೂಪಿಸುತ್ತವೆ.
  • ಮುಳ್ಳಯ್ಯನಗಿರಿ ದತ್ತಾತ್ರೇಯ ಪೀಠ ಶ್ರೇಣಿಯ ಅತ್ಯಂತ ಎತ್ತರದ ಶಿಖರವಾಗಿದೆ. 1930 ಮೀ (6317 ಅಡಿ) ಎತ್ತರವಿರುವ ಇದು ಹಿಮಾಲಯ ಮತ್ತು ನೀಲಗಿರಿಗಳ ನಡುವಿನ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ. ಮತ್ತು ಕರ್ನಾಟಕದ ಅತಿ ಎತ್ತರದ ಶಿಖರವಾಗಿದೆ.