ಶಾಂಘೈ ಸಹಕಾರ ಸಂಸ್ಥೆಯ (SCO) 24 ನೇ ಶೃಂಗಸಭೆ
ಶಾಂಘೈ ಸಹಕಾರ ಸಂಸ್ಥೆಯ (SCO) 24 ನೇ ಶೃಂಗಸಭೆ
ಸುದ್ದಿಯಲ್ಲಿ ಏಕಿದೆ? ಕಝಾಕಿಸ್ತಾನ್ (ಅಸ್ತಾನಾ) ಶಾಂಘೈ ಸಹಕಾರ ಸಂಸ್ಥೆಯ (SCO) 24 ನೇ ಶೃಂಗಸಭೆಯನ್ನು ಆಯೋಜಿಸಿತ್ತು.
ಮುಖ್ಯಾಂಶಗಳು
- SCO ಗೆ ಬೆಲಾರಸ್ 10 ನೇ ಸದಸ್ಯ ರಾಷ್ಟ್ರವಾಗಿ ಸೇರಿಕೊಂಡಿದೆ.
- ಇದನ್ನು ಆಸ್ತಾನಾ ಘೋಷಣೆ ಎಂದು ಕರೆಯುತ್ತಾರೆ
- ಘೋಷಣೆಯ ಅಡಿಯಲ್ಲಿ 2025-2027ಕ್ಕೆ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಎದುರಿಸಲು ಸಹಕಾರ ಕಾರ್ಯಕ್ರಮ, 2024-2029 ಕ್ಕೆ ಮಾದಕ ದ್ರವ್ಯ ವಿರೋಧಿ ತಂತ್ರ, 2035 ರವರೆಗೆ SCO ಅಭಿವೃದ್ಧಿ ಕಾರ್ಯತಂತ್ರವನ್ನು ಅಳವಡಿಸಲಾಗಿದೆ.
- 2030 ರವರೆಗಿನ ಆರ್ಥಿಕ ಅಭಿವೃದ್ಧಿ ಕಾರ್ಯತಂತ್ರದ ಕ್ರಿಯಾ ಯೋಜನೆ ಮತ್ತು 2030 ರವರೆಗೆ ಶಕ್ತಿ ಸಹಕಾರಕ್ಕಾಗಿ ಕಾರ್ಯತಂತ್ರಗಳನ್ನು ಅನುಮೋದಿಸಲಾಗಿದೆ.
- SCO ಸದಸ್ಯ ರಾಷ್ಟ್ರಗಳು ವಿಶ್ವ ಸಂಸ್ಥೆಯ ಕೇಂದ್ರ ಸಮನ್ವಯ ಪಾತ್ರದೊಂದಿಗೆ ವಿಶ್ವ ಕ್ರಮವನ್ನು ರಚಿಸುವ ಗುರಿಯನ್ನು ಹೊಂದಿರುವ ‘ಜಸ್ಟ್ ಪೀಸ್, ಹಾರ್ಮನಿ ಮತ್ತು ಡೆವಲಪ್‌ಮೆಂಟ್(ಶಾಂತಿ, ಸಾಮರಸ್ಯ ಮತ್ತು ಅಭಿವೃದ್ಧಿಗೆ)ಗಾಗಿ ವಿಶ್ವ ಏಕತೆ’ (ಕಝಾಕಿಸ್ತಾನ್ ನಿಂದ ಪ್ರಸ್ತಾಪಿಸಲಾಗಿದೆ) ಅನ್ನು ಅನುಮೋದಿಸಿದೆ.
ಭಾರತಕ್ಕೆ SCO ಯ ಪ್ರಾಮುಖ್ಯತೆ
ಸಂಪನ್ಮೂಲಗಳು: ಮಧ್ಯ ಏಷ್ಯಾ ಸಂಪರ್ಕ ನೀತಿಯನ್ನು ಅನುಸರಿಸಲು ಮತ್ತು ಖನಿಜ ಸಂಪನ್ಮೂಲಗಳನ್ನು ಪ್ರವೇಶಿಸಲು ಭಾರತಕ್ಕೆ ಸಹಾಯವಾಗಲಿದೆ (ಕಝಾಕಿಸ್ತಾನ್‌ನಲ್ಲಿ ಯುರೇನಿಯಂ ನಿಕ್ಷೇಪಗಳು).
ಭಯೋತ್ಪಾದನೆ ನಿಗ್ರಹ: SCO ನ ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ರಚನೆ (RATS) ಭಯೋತ್ಪಾದಕರ ಚಲನವಲನಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯಲ್ಲಿ ಪ್ರಮುಖ ಮಾಹಿತಿ ಮತ್ತು ಗುಪ್ತಚರ ಪ್ರವೇಶವನ್ನು ಒದಗಿಸುತ್ತದೆ.
ಇಂಧನ ಭದ್ರತೆ: ಪ್ರದೇಶವು ಪ್ರಪಂಚದ ನೈಸರ್ಗಿಕ ಅನಿಲ ನಿಕ್ಷೇಪಗಳ 4% ಮತ್ತು ತೈಲ ನಿಕ್ಷೇಪಗಳ ಸರಿಸುಮಾರು 3% ಗೆ ನೆಲೆಯಾಗಿದೆ. SCO TAPI ಪೈಪ್‌ಲೈನ್ ಅನ್ನು ಸಹ ಸುಗಮಗೊಳಿಸುತ್ತದೆ.
ಶಾಂಘೈ ಸಹಕಾರ ಸಂಸ್ಥೆ
- ಕೇಂದ್ರ ಕಚೇರಿ: ಬೀಜಿಂಗ್, ಚೀನಾ
- ಇದು ಶಾಂಘೈನಲ್ಲಿ 2001 ರಲ್ಲಿ ಕಝಾಕಿಸ್ತಾನ್, ಚೀನಾ, ಕಿರ್ಗಿಜ್ ರಿಪಬ್ಲಿಕ್, ರಷ್ಯಾ, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಿಂದ ಸ್ಥಾಪಿಸಲಾದ ಶಾಶ್ವತ ಅಂತರ್ ಸರ್ಕಾರಿ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ.
- ಪ್ರಸ್ತುತ ಸದಸ್ಯರು: ಭಾರತ(2017), ಇರಾನ್, ಕಝಾಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ಪಾಕಿಸ್ತಾನ(2017), ರಷ್ಯಾ, ತಜಿಕಿಸ್ತಾನ್, ಮತ್ತು ಉಜ್ಬೇಕಿಸ್ತಾನ್ ಮತ್ತು ಬೆಲಾರಸ್.
- ಅಫ್ಘಾನಿಸ್ತಾನ ಮತ್ತು ಮಂಗೋಲಿಯಾ ವೀಕ್ಷಕ ಸ್ಥಾನಮಾನವನ್ನು ಹೊಂದಿವೆ.
- ಅಧಿಕೃತ ಭಾಷೆ: ರಷ್ಯನ್ ಮತ್ತು ಚೈನೀಸ್.
ಗುರಿ: ಸದಸ್ಯ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆ, ಸ್ನೇಹ ಮತ್ತು ನೆರೆಯ ಸಂಬಂಧಗಳನ್ನು ಬಲಪಡಿಸುವುದು; ರಾಜಕೀಯ, ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಹಕಾರವನ್ನು ಉತ್ತೇಜಿಸುವುದು