Published on: July 28, 2022

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ:

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ:

ಸುದ್ದಿಯಲ್ಲಿ ಏಕಿದೆ?

ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿಯ ಮಕ್ಕಳಿಗೆ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡುವ ಯೋಜನೆಗೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ, ವರ್ಷದ 46 ದಿನಗಳು ಮಾತ್ರ ವಿತರಿಸಲು ಇಲಾಖೆ ಅನುಮೋದನೆ ನೀಡಿದೆ.

ಮುಖ್ಯಾಂಶಗಳು

  • ಕನಿಷ್ಠ 100 ದಿನಗಳ ಕಾಲ ವಿತರಿಸಲು ಅನುಮೋದನೆ ನೀಡುವಂತೆ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿಲ್ಲ.
  • ರಾಜ್ಯದಲ್ಲಿ 1ರಿಂದ 8ನೇ ತರಗತಿಯಲ್ಲಿನ ಅಂದಾಜು 49 ಲಕ್ಷ ಶಾಲಾ ಮಕ್ಕಳಿಗೆ 100 ದಿನಗಳ ಕಾಲ ಮೊಟ್ಟೆ ಅಥವಾ ಚಿಕ್ಕಿ ವಿತರಿಸಲು ಸುಮಾರು ರೂ. 350 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿ ಆರ್ಥಿಕ ಇಲಾಖೆಯ ಅನು ಮತಿ ಕೋರಿ ಪ್ರಸ್ತಾವ ಸಲ್ಲಿಸಲಾಗಿತ್ತು.
  • 46 ದಿನಗಳು ಅಂದರೆ ವಾರದಲ್ಲಿ ಎರಡು ದಿನ ಮಾತ್ರ ಮೊಟ್ಟೆ ನೀಡ ಬಹುದು. ಸದ್ಯ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದೆ.
  • ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆ ಅಡಿ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿಯ ಅಂದಾಜು 15.29 ಲಕ್ಷ ಮಕ್ಕಳಿಗೆ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದೆ.
  • ಮೊದಲು ವಾರದಲ್ಲಿ ಮೂರು ದಿನ ಮಾತ್ರ ಮಕ್ಕಳಿಗೆ ಮೊಟ್ಟೆ ಅಥವಾ ಬಾಳೆಹಣ್ಣು ನೀಡಲಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಗೆ ಅನುದಾನ ಒದಗಿಸಿದ್ದವು. ಈಗ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಿರುವುದರಿಂದ ರಾಜ್ಯ ಸರ್ಕಾರವೇ ಖರ್ಚು ಭರಿಸಬೇಕಾಗುತ್ತದೆ.

ಸೃಷ್ಟಿ ಯೋಜನೆ

  • ಕರ್ನಾಟಕ ರಾಜ್ಯವು 2014 ರಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆ ಗಳಲ್ಲಿನ ಅಪೌಷ್ಟಿಕ ಮಕ್ಕಳಿಗೆ ಮೊಟ್ಟೆಗಳನ್ನು ಒದಗಿಸುವ ಯೋಜನೆಯನ್ನು ಪ್ರಾರಂಭಿಸಿತು.
  • ನಂತರ ಇದನ್ನು ಎಲ್ಲಾ SC/ST ಮಕ್ಕಳಿಗೆ ಜನವರಿ 2017 ರಲ್ಲಿ ವಿಸ್ತರಿಸಲಾಯಿತು.
  • 2017-18 ರಲ್ಲಿ ಈ ಯೋಜನೆಯನ್ನು 3 – 6 ವಯಸ್ಸಿನ ಮಕ್ಕಳಿಗೆ ವಾರದ 6 ದಿನಗಳವರೆಗೆ ಎಲ್ಲಾ ಅಂಗನವಾಡಿಗಳಿಗೆ ವಿಸ್ತರಿಸಲಾಯಿತು.