Published on: February 27, 2023

ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ ವಿಮಾನ ನಿಲ್ದಾಣ


ಸುದ್ದಿಯಲ್ಲಿ ಏಕಿದೆ? ಶಿವ​ಮೊ​ಗ್ಗದ ಸಮೀಪದ ಸೋಗಾನೆ ಗ್ರಾಮದ ಬಳಿ ನಿರ್ಮಿಸಲಾದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.


ಮುಖ್ಯಾಂಶಗಳು

  • ಏರಿಯಲ್‌ ವ್ಯೂನಲ್ಲಿ ಕಮಲಾಕೃತಿಯಲ್ಲಿ ಕಾಣುವ ವಿಮಾನ ನಿಲ್ದಾಣದ ಒಂದು ಭಾಗವನ್ನು ಹತ್ತಿರದಲ್ಲಿ ವೀಕ್ಷಿಸಿದಾಗಲೂ ಕಮಲದ ದಳಗಳು ಕಾಣುವ ರೀತಿ ವಿನ್ಯಾಸಗೊಳಿಸಲಾಗಿದೆ.
  • ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಕುವೆಂಪು ಹೆಸ​ರಿ​ಡು​ವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.
  • ಪ್ರಧಾನಿ ಮೋದಿ ಅವರು ವಿಮಾನದಲ್ಲಿ ಈ ಏರ್ಪೋರ್ಟ್‌ನಲ್ಲಿ ಬಂದಿ​ಳಿ​ಯುವ ಮೂಲಕ ಶಿವ​ಮೊಗ್ಗ ವಿಮಾನ ನಿಲ್ದಾ​ಣ​ವನ್ನು ಉದ್ಘಾ​ಟಿ​ಸು​ವುದು ವಿಶೇಷ.
  • ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲ​ಬು​ರಗಿ, ಬೀದ​ರ್‌(ಸ​ದ್ಯಕ್ಕೆ ನಾಗ​ರಿಕ ವಿಮಾನ ಓಡಾ​ಡು​ತ್ತಿ​ಲ್ಲ​), ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಗಳು ಕಾರ್ಯಾಚರಿಸುತ್ತಿವೆ.

ವೆಚ್ಚ:  449.22 ಕೋಟಿ ವೆಚ್ಚ ವೆಚ್ಚವಾಗಿದ್ದು, ಮೂಲ ಸೌಕರ್ಯದ ವೆಚ್ಚ ಸೇರಿ ಒಟ್ಟು .600 ಕೋಟಿ ವ್ಯಯ ಮಾಡ​ಲಾ​ಗಿ​ದೆ.

ವಿಶೇಷತೆಗಳು

  • ರಾಜ್ಯದ 9ನೇ ಹಾಗೂ ದೇಶ​ದ 148ನೇ ವಿಮಾನ ನಿಲ್ದಾಣ ಆಗಿ​ದೆ. ರಾಜ್ಯದ ಎರ​ಡನೇ ಅತಿ ಉದ್ದದ ರನ್‌ವೇ ಹೊಂದಿ​ರುವ ಇದು, ಮಧ್ಯ​ಕ​ರ್ನಾ​ಟ​ಕದ ಮೊದಲ ವಿಮಾನ ನಿಲ್ದಾ​ಣ​ ಎಂಬ ಹೆಗ್ಗ​ಳಿಗೂ ಪಾತ್ರ​ವಾ​ಗಿ​ದೆ.
  • 3,200 ಮೀಟರ್‌ ಉದ್ದದ ರನ್‌ ವೇ ಹೊಂದಿದೆ.
  • ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹೊರತುಪಡಿಸಿರೆ ರಾಜ್ಯ​ದಲ್ಲೇ ಇದು ಎರ​ಡನೇ ಅತಿ ಉದ್ದದ ರನ್‌ ವೇ ಹೊಂದಿರುವ ಏರ್ಪೋರ್ಟ್‌ ಆಗಿ​ದೆ.
  • ಇದ​ರಿಂದ ಏರ್‌ಬಸ್‌ನಂತಹ ದೊಡ್ಡ ವಿಮಾನಗಳೂ ಇಲ್ಲಿ ಇಳಿ​ಯು​ವುದು ಸಾಧ್ಯ​ವಾ​ಗ​ಲಿ​ದೆ. ಜೊತೆಗೆ ರಾತ್ರಿಯೂ ಇಲ್ಲಿ ವಿಮಾನಗಳನ್ನು ಲ್ಯಾಂಡ್‌ ಮಾಡ​ಬ​ಹು​ದಾದ ವ್ಯವಸ್ಥೆ ಇದೆ.
  • 4,320 ಚದರಡಿ ವಿಸ್ತೀರ್ಣದ ಪ್ಯಾಸೆಂಜರ್‌ ಟರ್ಮಿನಲ್‌ ಅನ್ನು ಈ ಏರ್ಪೋರ್ಟ್‌ ಹೊಂದಿದೆ.
  • ಒಟ್ಟು 775 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.

ಹಿನ್ನೆಲೆ

  • 2007ರಲ್ಲಿ ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದಾಗ ಸೋಗಾನೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಮೊದಲು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಕಾಮಗಾರಿ ನಿರ್ವಹಣೆಯಿಂದ ಹಿಂದೆ ಸರಿದಿದ್ದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಬದಲಿಸಿತ್ತು. ಬೋಯಿಂಗ್ನಂತಹ ದೊಡ್ಡ ವಿಮಾನ ಇಳಿಯಲು ಅವಕಾಶ ಕಲ್ಪಿಸಿ, ರನ್ ವೇ ಉದ್ದವನ್ನು 2.05 ಕಿ.ಮೀ ಬದಲಿಗೆ, 3.20 ಕಿ.ಮೀ.ಗೆ ಹೆಚ್ಚಿಸಲಾಯಿತು. ರಾತ್ರಿ ವೇಳೆ ವಿಮಾನ ಇಳಿಯುವ ಸೌಲಭ್ಯ ಕಲ್ಪಿಸಲಾಯಿತು.