Published on: September 30, 2023
ಶೈಕ್ಷಣಿಕ ಆಧಾರ್
ಶೈಕ್ಷಣಿಕ ಆಧಾರ್
ಸುದ್ದಿಯಲ್ಲಿ ಏಕಿದೆ? ಆಧಾರ್ ನಂತೆಯೇ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟ ಗುರುತಿನ ಶೈಕ್ಷಣಿಕ ನಂಬರ್ ನೀಡಲು ಭಾರತ ಸರ್ಕಾರ ಮುಂದಾಗಿದೆ.
ಮುಖ್ಯಾಂಶಗಳು
- ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಈ ಯೋಜನೆಯ ಪ್ರಕಾರ ವಿದ್ಯಾರ್ಥಿಯು ಮೊದಲು ಇದಕ್ಕಾಗಿ ರಿಜಿಸ್ಟ್ರೇಷನ್ ಪಡೆಯಬೇಕು. ಬಳಿಕ ಆ ವಿದ್ಯಾರ್ಥಿ / ವಿದ್ಯಾರ್ಥಿನಿಗೆ ಶೈಕ್ಷಣಿಕ ಗುರುತಿನ ಸಂಖ್ಯೆಯೊಂದನ್ನು ನೀಡಲಾಗುತ್ತದೆ. ವಿದ್ಯಾರ್ಥಿಯ ಉನ್ನತ ಶಿಕ್ಷಣ ಮುಗಿಯುವವರೆಗೂ ಈ ಶೈಕ್ಷಣಿಕ ಆಧಾರ್ ಒಂದೇ ಇರಲಿದೆ.
- ವಿದ್ಯಾರ್ಥಿಯ ಈ ವಿಶೇಷ ಶೈಕ್ಷಣಿಕ ಗುರುತಿನ ಸಂಖ್ಯೆಯನ್ನು ಆಧಾರ್ ಜತೆ ಸಹ ಲಿಂಕ್ ಮಾಡಲಾಗುತ್ತದೆ.
ಏನಿದು ಶೈಕ್ಷಣಿಕ ಆಧಾರ್?
- ಭಾರತೀಯ ವಿದ್ಯಾರ್ಥಿಗಳು ಶಿಶುವಿಹಾರದಿಂದಲೇ (ಪ್ರಿ-ನರ್ಸರಿ) ಈ ಶೈಕ್ಷಣಿಕ ಗುರುತಿನ ಸಂಖ್ಯೆ ಪಡೆಯಲಿದ್ದು, ಇದೇ ನಂಬರ್ ಅನ್ನು ಅವರು ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಅಧ್ಯಯನವರೆಗೂ ಮುಂದುವರೆಸಲು ಅವಕಾಶ ಇರಲಿದೆ. ಈ ಸಂಖ್ಯೆಯು ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ಅವಧಿಯುದ್ದಕ್ಕೂ ಮಾನ್ಯವಾಗಿರುತ್ತದೆ.
ಉದ್ದೇಶ
- ನರ್ಸರಿ ಹಂತದಲ್ಲೇ ವಿದ್ಯಾರ್ಥಿಯ ಪ್ರಾಥಮಿಕ ವೈಯಕ್ತಿಕ ಎಲ್ಲ ಮಾಹಿತಿಗಳನ್ನು ಕಲೆಹಾಕಿ ಈ ವಿಶಿಷ್ಟ ಗುರುತಿನ ಸಂಖ್ಯೆ ನೀಡಿದಲ್ಲಿ, ನಂತರದ ಪ್ರತಿ ಶಿಕ್ಷಣ ಹಂತದಲ್ಲೂ ಎಲ್ಲ ರೀತಿಯ ದಾಖಲೆಗಳ ಹಾರ್ಡ್ ಕಾಪಿ ಪಡೆಯುವುದು, ನಿರ್ವಹಣೆ ಮಾಡುವುದು ತಪ್ಪುತ್ತದೆ. ಇದು ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿ ಖಾತೆಯಾಗಿ ಮುಂದುವರೆಯಲಿದೆ. ಇದರಲ್ಲಿ ಪ್ರತಿ ಹಂತದ ವಿದ್ಯಾರ್ಥಿ ಬಗೆಗಿನ ಸಾಧನೆ, ಕಾರ್ಯಕ್ಷಮತೆ, ಶೈಕ್ಷಣಿಕ ಪ್ರಗತಿ, ಪ್ರತಿ ತರಗತಿಯಲ್ಲಿ ಪಡೆದ ಅಂಕಗಳ ಸಂಪೂರ್ಣ ಮಾಹಿತಿ ಇದರಲ್ಲಿ ಇರಲಿದೆ.
ಆಧಾರ್ ಎಂದರೇನು?
- ಆಧಾರ್ ಭಾರತ ಸರ್ಕಾರದ ಪರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ನೀಡಲಾದ 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ. ಈ ಸಂಖ್ಯೆಯು ಭಾರತದಲ್ಲಿ ಎಲ್ಲಿಯಾದರೂ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
- ಆಧಾರ್ ಸಂಖ್ಯೆಯು ನಿವಾಸಿಗಳಿಗೆ ಬ್ಯಾಂಕಿಂಗ್, ಮೊಬೈಲ್ ಫೋನ್ ಸಂಪರ್ಕಗಳು ಮತ್ತು ಇತರ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳಿಂದ ಒದಗಿಸಲಾದ ವಿವಿಧ ಸೇವೆಗಳನ್ನು ಸರಿಯಾದ ಸಮಯದಲ್ಲಿ ಪಡೆಯಲು ಸಹಾಯ ಮಾಡುತ್ತದೆ.
- ಬಯೋಮೆಟ್ರಿಕ್ (ಕಣ್ಣು ಮತ್ತು ಬೆರಳಚ್ಚು)ಮಾಹಿತಿಯ ಆಧಾರದ ಮೇಲೆ ವ್ಯಕ್ತಿಗಳ ಗುರುತನ್ನು ಸ್ಥಾಪಿಸುತ್ತದೆ.