Published on: January 21, 2023

ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕ

ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕ


ಸುದ್ದಿಯಲ್ಲಿ ಏಕಿದೆ? ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿಯಲ್ಲಿ (ಆಸರ್) ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ ಶೈಕ್ಷಣಿಕ ಪ್ರಗತಿಯಲ್ಲಿ ಕರ್ನಾಟಕ ರಾಜ್ಯವೇ ಉತ್ತಮವಾಗಿದೆ ಎಂದು ಹೇಳಲಾಗಿದೆ. ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಇದಕ್ಕೆ ಸುಕನ್ಯಾ ಸಮೃದ್ಧಿಯೋಜನೆ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಮುಂತಾದ ಕಾರ್ಯಕ್ರಮಗಳ ಸಹಯೋಗ ಮತ್ತುಪರಿಣಾಮಕಾರಿ ಜಾರಿಯೂ ಕಾರಣವಾಗಿದೆ.


ಮುಖ್ಯಾಂಶಗಳು

  • ಕಳೆದ ಸೆಪ್ಟೆಂಬರ್ನಿಂದ ನವೆಂಬರ್ ವರೆಗೆ ನಡೆಸಿರುವ ಸಮೀಕ್ಷೆಯಲ್ಲಿಹಲವು ಮಹತ್ವದ ವಿಚಾರಗಳು ಬೆಳಕಿಗೆ ಬಂದಿವೆ. ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳ 900 ಹಳ್ಳಿಗಳಲ್ಲಿ 3 ರಿಂದ 16 ವರ್ಷದೊ ಳಗಿನ 17,814 ಕುಟುಂಬಗಳ 31,854 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
  • ರಾಷ್ಟ್ರೀಯ ಸರಾಸರಿಯಲ್ಲಿ 6 ರಿಂದ 14 ವಯೋಮಾನದವರ ದಾಖಲಾತಿ ಪ್ರಮಾಣ ಶೇ. 95ಕ್ಕಿಂತ ಹೆಚ್ಚಿದೆ. ಕರ್ನಾಟಕದಲ್ಲಿಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಶಾಲೆಗಳ ಬಂದ್ ನಡುವೆಯೂ ಒಟ್ಟಾರೆ ದಾಖಲಾತಿ ಅಂಕಿ-ಅಂಶ ಏರಿಕೆಯಾಗುತ್ತಿದೆ.
  • 2018ರಲ್ಲಿಶೇ.99.3 ಇದ್ದಮಕ್ಕಳ ದಾಖಲಾತಿ ಪ್ರಮಾಣ 2022ರಲ್ಲಿಶೇ.99.8 ಆಗಿದೆ. ಅದರಲ್ಲೂಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳ (6 ರಿಂದ 14 ವರ್ಷ) ಪ್ರಮಾಣ 2018ರಲ್ಲಿಶೇ.69.9 ಇದ್ದರೆ, 2022ರಲ್ಲಿಶೇ.72.6ಕ್ಕೆ ಏರಿಕೆಯಾಗಿದೆ.

ಬಾಲಕಿಯರೇ ಹೆಚ್ಚು: 2006ರಲ್ಲಿಶಾಲೆಯಿಂದ ಹೊರಗುಳಿದ 11-14 ವಯಸ್ಸಿನ ಬಾಲಕಿಯರ ಶೇಕಡವಾರು ಪ್ರಮಾಣ ಶೇ.8.0 ಇತ್ತು. 2018ರಲ್ಲಿಈ ಪ್ರಮಾಣ ಶೇ.1.2ಕ್ಕೆ ಇಳಿದರೆ, 2022ರಲ್ಲಿಈ ಪ್ರಮಾಣ ಶೇ.0.4 ಆಗಿದೆ. ಈ ಮೂಲಕ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡಿಸಬೇಕು ಎನ್ನುವ ಜಾಗೃತಿ ಮೂಡಿರುವುದು ವರದಿಯಲ್ಲಿ ಸ್ಪಷ್ಟವಾಗಿದೆ.

ಅಂಗನವಾಡಿಗಳಲ್ಲೂ ದಾಖಲಾತಿ  ಪ್ರಮಾಣ ಹೆಚ್ಚಳ: ಅಂಗನವಾಡಿ, ಪೂರ್ವ ಪ್ರಾಥಮಿಕ ಶಾಲೆಗಳಿಗೂ ಮಕ್ಕಳ ದಾಖಲಾತಿ ಪ್ರಮಾಣ ಏರಿಕೆಯಾಗಿದೆ. ರಾಷ್ಟ್ರೀಯ ಸರಾಸರಿ ಶೇ.78.3 ದಾಖಲಾತಿ ಇದ್ದರೆ, ಕರ್ನಾಟಕದಲ್ಲಿಇದರ ಪ್ರಮಾಣ ಶೇ.94.3 ಇದೆ. 3 ವರ್ಷದ ಮಕ್ಕಳ ಅಂಗನವಾಡಿ ದಾಖಲಾತಿ ಪ್ರಮಾಣ 2018ರಲ್ಲಿಶೇ. 79.7 ಇದ್ದರೆ, 2022ರಲ್ಲಿಈ ಪ್ರಮಾಣ ಶೇ.88.3 ಆಗಿದೆ.

ಕಲಿಕಾ ಮಟ್ಟ ಇಳಿಕೆ: ಎರಡನೇ ತರಗತಿ ಪಠ್ಯವನ್ನು ಮೂರನೇ ತರಗತಿಯ ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಮಕ್ಕಳಿಗೆ ಓದುವಂತೆ ಹೇಳಿದಾಗ ತಡವರಿಸಿದ ಮಕ್ಕಳ ಸಂಖ್ಯೆಯೇ ಹೆಚ್ಚು.

ಮೂಲ ಸೌಲಭ್ಯ ಸುಧಾರಣೆ:

  • ಶಾಲೆಗಳಲ್ಲಿಮೂಲಸೌಲಭ್ಯ ಸುಧಾರಣೆ ಕಂಡಿದ್ದು, ಬಳಕೆ ಯೋಗ್ಯವಾದ ಹುಡುಗಿಯರ ಶೌಚಗೃಹ ಹೊಂದಿರುವ ಶಾಲೆಗಳ ಪ್ರಮಾಣದಲ್ಲಿಯೂ ಏರಿಕೆ ಕಂಡಿದೆ. ವಿದ್ಯಾರ್ಥಿಗಳು ಬಳಸುತ್ತಿರುವ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಇತರ ಪುಸ್ತಕಗಳನ್ನು ಹೊಂದಿರುವ ಶಾಲೆಗಳ ಪ್ರಮಾಣ 2018ರಲ್ಲಿಶೇ.36.1ರಿಂದ 2022 ರಲ್ಲಿಶೇ. 51.9ಕ್ಕೆ ಏರಿಕೆಯಾಗಿದೆ.
  • ಆದರೆ ಕುಡಿಯುವ ನೀರಿನ ವ್ಯವಸ್ಥೆಹೊಂದಿರುವ ಶಾಲೆಗಳ ಪ್ರಮಾಣ 2018ರಲ್ಲಿಶೇ. 76.8ರಿಂದ 2022 ರಲ್ಲಿಶೇ. 67.8ಕ್ಕೆ ಇಳಿಕೆ ಕಂಡಿದೆ. ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ವಿತರಣೆ, ಅಗತ್ಯ ಶಿಕ್ಷಕರನ್ನು ಹೊಂದಿರುವ ಶಾಲೆಗಳಲ್ಲಿಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ.
  • ಟ್ಯೂಷನ್ಗೆ ಹೋಗೋರ ಸಂಖ್ಯೆ ಇಳಿಕೆ: ಅಖಿಲ ಭಾರತ ಮಟ್ಟದಲ್ಲಿ 1ರಿಂದ 8ನೇ ತರಗತಿ ವರೆಗೆ 2018ರಲ್ಲಿಶೇ.26.4 ವಿದ್ಯಾರ್ಥಿಗಳು ಖಾಸಗಿ ಟ್ಯೂಷನ್ ತೆಗೆದುಕೊಳ್ಳುತ್ತಿದ್ದು, ಈ ಪ್ರಮಾಣ 2022ರ ವೇಳೆಗೆ ಶೇ.30.5ಕ್ಕೆ ಏರಿಕೆಯಾಗಿದೆ. ಆದರೆ, ರಾಜ್ಯದಲ್ಲಿಈ ಪ್ರಮಾಣ 2018ರಲ್ಲಿಶೇ.11.3 ಇದ್ದರೆ, 2022ರಲ್ಲಿಶೇ.9.2ಕ್ಕೆ ಇಳಿದಿದೆ.

ಮುಂದಿನ ಗುರಿ

  • ರಾಜ್ಯದಲ್ಲಿಮಕ್ಕಳ ಹಾಜರಾತಿ ಏರಿಕೆ, ಶಾಲೆ ಬಿಡುವವರ ಸಂಖ್ಯೆ ಇಳಿಕೆ ಆಗಿದ್ದರೂ ಕಲಿಕಾ ಮಟ್ಟ ಸುಧಾರಣೆ ಕಾಣಬೇಕಿರುವುದು ವರದಿಯಿಂದ ತಿಳಿದುಬಂದಿದೆ. ಎನ್ಇಪಿ ಪ್ರಕಾರ 2025ರ ವೇಳೆಗೆ ಮೂರನೇ ತರಗತಿ ಮಕ್ಕಳು ಅಕ್ಷರ ಹಾಗೂ ಅಂಕಿ ಜ್ಞಾನ ಹೊಂದಿರಬೇಕು.

ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಆಸರ್)

  • ಇದು ವಾರ್ಷಿಕ ಸಮೀಕ್ಷೆಯಾಗಿದ್ದು, ಇದು ಭಾರತದ ಪ್ರತಿ ರಾಜ್ಯ ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಮಕ್ಕಳ ಶಾಲಾ ಸ್ಥಿತಿ ಮತ್ತು ಮೂಲಭೂತ ಕಲಿಕೆಯ ಮಟ್ಟಗಳ ವಿಶ್ವಾಸಾರ್ಹ ವಾರ್ಷಿಕ ಅಂದಾಜುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ASER ಅನ್ನು 2005 ರಿಂದ ಪ್ರತಿ ವರ್ಷ ಭಾರತದ ಬಹುತೇಕ ಎಲ್ಲಾ ಗ್ರಾಮೀಣ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಭಾರತದಲ್ಲಿ ಲಭ್ಯವಿರುವ ಮಕ್ಕಳ ಕಲಿಕೆಯ ಫಲಿತಾಂಶಗಳ ವಾರ್ಷಿಕ ಮಾಹಿತಿಯ ಏಕೈಕ ಮೂಲವಾಗಿದೆ.