Published on: February 13, 2024
ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ UPI ಸೇವೆಗಳು
ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ UPI ಸೇವೆಗಳು
ಸುದ್ದಿಯಲ್ಲಿ ಏಕಿದೆ? ಇತ್ತೀಚಿಗೆ, ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ಭಾರತದ UPI ಸೇವೆಗಳು ಮತ್ತು ಮಾರಿಷಸ್‌ನಲ್ಲಿ RuPay ಕಾರ್ಡ್ ಸೇವೆಗಳನ್ನು ಪ್ರಾರಂಭಿಸಲಾಯಿತು.
UPI ಕುರಿತು:
- ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳನ್ನು ವಿಲೀನಗೊಳಿಸಿ, ಡಿಜಿಟಲ್ ಹಣ ವರ್ಗಾವಣೆ ಮತ್ತು ಹಣಕಾಸಿನ ವ್ಯವಹಾರಕ್ಕಾಗಿ ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್ (ಯಾವುದೇ ಭಾಗವಹಿಸುವ ಬ್ಯಾಂಕ್‌ನ) ಅಡಿಯಲ್ಲಿಇದು ತ್ವರಿತ ನೈಜ-ಸಮಯದ ಪಾವತಿ ವ್ಯವಸ್ಥೆಯಾಗಿದೆ.
- ಪ್ರಾರಂಭ: 2016
- ಪ್ರಾರಂಭಿಸಿದವರು: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI).
UPI ಸಾಧನೆ:
UPI ವಹಿವಾಟುಗಳು 10 ಶತಕೋಟಿಗೂ ಹೆಚ್ಚು ಏರಿಕೆಯಾಗಿದೆ ಮತ್ತು
40% ಕ್ಕಿಂತ ಹೆಚ್ಚು ಭಾರತೀಯ ಪಾವತಿಗಳು ಈಗ ಡಿಜಿಟಲ್ ಆಗಿದ್ದು, ಇದರಲ್ಲಿ UPI ಪ್ರಮುಖವಾಗಿದೆ.
RuPay ಬಗ್ಗೆ:
- RuPay ಭಾರತದಿಂದ ಜಾಗತಿಕ ಕಾರ್ಡ್ ಪಾವತಿ ಜಾಲವಾಗಿದ್ದು, ಅಂಗಡಿಗಳು, ATM ಗಳು ಮತ್ತು ಆನ್‌ಲೈನ್‌ನಲ್ಲಿ ವ್ಯಾಪಕ ಸ್ವೀಕಾರವನ್ನು ಹೊಂದಿದೆ.
- Rupee(ರೂಪಾಯಿ) ಮತ್ತು payment(ಪಾವತಿ) ಪದಗಳಿಂದ ಪಡೆದ ಈ ಹೆಸರು ಕಾರ್ಡ್ ಪಾವತಿಗೆ ಇದು ಭಾರತದ ಸ್ವಂತ ಉಪಕ್ರಮವಾಗಿದೆ ಎಂದು ಒತ್ತಿಹೇಳುತ್ತದೆ.
- ಪ್ರಾರಂಭ: ಇದು 2012 ರಲ್ಲಿ ಪ್ರಾರಂಭಿಸಲಾದ ಹಣಕಾಸು ಸೇವೆಗಳು ಮತ್ತು ಪಾವತಿ ಸೇವೆಗಳ ವ್ಯವಸ್ಥೆಯಾಗಿದೆ ಮತ್ತು 2014 ರಲ್ಲಿ ದೇಶಕ್ಕೆ ಸಮರ್ಪಿಸಲಾಯಿತು.
- ಪ್ರಾರಂಭಿಸಿದವರು: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI).
NPCI ಬಗ್ಗೆ
- ಇದು ಭಾರತದಲ್ಲಿ ಚಿಲ್ಲರೆ ಪಾವತಿಗಳು ಮತ್ತು ಠರಾವಣೆ(settltment) ವ್ಯವಸ್ಥೆಗಳನ್ನು ನಿರ್ವಹಿಸುವ ಒಂದು ಆಶ್ರಯ ಸಂಸ್ಥೆಯಾಗಿದೆ.
- 2007 ರ ಪಾವತಿ ಮತ್ತು ಸೆಟಲ್‌ಮೆಂಟ್ ಸಿಸ್ಟಮ್ಸ್ ಆಕ್ಟ್‌ನ ನಿಬಂಧನೆಗಳ ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಭಾರತದಲ್ಲಿ ದೃಢವಾದ ಪಾವತಿ ಮತ್ತು ಸೆಟ್ಲ್‌ಮೆಂಟ್ ಸೌಕರ್ಯವನ್ನು ರಚಿಸಲು ಒಂದು ಉಪಕ್ರಮವಾಗಿದೆ.
- ಕಂಪನಿಗಳ ಕಾಯಿದೆ 1956 ರ ವಿಭಾಗ 25 ರ ನಿಬಂಧನೆಗಳ ಅಡಿಯಲ್ಲಿ ಇದು “ಲಾಭರಹಿತ” ಕಂಪನಿಯಾಗಿದೆ (ಈಗ ಕಂಪನಿಗಳ ಕಾಯಿದೆ 2013 ರ ವಿಭಾಗ 8).
ಪ್ರಯೋಜನಗಳು
- ಶ್ರೀಲಂಕಾ ಮತ್ತು ಮಾರಿಷಸ್‌ನೊಂದಿಗೆ ಸಾಂಸ್ಕೃತಿಕ ಮತ್ತು ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸುವುದು.
- ದ್ವಿಪಕ್ಷೀಯ ಹಣಕಾಸು ಮತ್ತು ಡಿಜಿಟಲ್ ಸಂಪರ್ಕವನ್ನು ಬಲಪಡಿಸುವುದು.
- ಇದು ಜಾಗತಿಕ ದಕ್ಷಿಣದಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.
- ಪರಸ್ಪರ ಲಾಭದ ಆಧಾರದ ಮೇಲೆ ಫಿನ್ಟೆಕ್ ನಾವೀನ್ಯತೆಯನ್ನು ಹೆಚ್ಚಿಸುವುದು.
- ವೇಗವಾದ ಮತ್ತು ತಡೆರಹಿತ ಡಿಜಿಟಲ್ ವಹಿವಾಟಿನ ಅನುಭವವನ್ನು ಬೆಳೆಸಿಕೊಳ್ಳುವುದು
- ದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಯೋಜನವಾಗುತ್ತದೆ.
ನಿಮಗಿದು ತಿಳಿದಿರಲಿ
UPI ಸೇವೆಗಳನ್ನು ಸ್ವೀಕರಿಸಿದ ದೇಶಗಳು: ಭೂತಾನ್ (1 ನೇ ದೇಶ), UAE (1 ನೇ ಗಲ್ಫ್ ದೇಶ), ಸಿಂಗಾಪುರ್, ನೇಪಾಳ, ಓಮನ್, ಫ್ರಾನ್ಸ್ (1 ನೇ ಯುರೋಪಿಯನ್ ದೇಶ), ಶ್ರೀಲಂಕಾ, ಮಾರಿಷಸ್.
ರುಪೇ ಕಾರ್ಡ್ ಸೇವೆಗಳನ್ನು ಸ್ವೀಕರಿಸಿದ ದೇಶಗಳು: ಭೂತಾನ್, ಸಿಂಗಾಪುರ, ಯುಎಇ, ನೇಪಾಳ, ಮಾರಿಷಸ್