Published on: December 13, 2021

ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆ

ಶ್ರೀ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆ

ಸುದ್ಧಿಯಲ್ಲಿ ಏಕಿದೆ? ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಭವ್ಯವಾದ ಕಾಶಿ ವಿಶ್ವನಾಥ್ ಧಾಮ ಕಾರಿಡಾರ್ ಅನ್ನು ಉದ್ಘಾಟಿಸುತ್ತಿದ್ದಾರೆ. 2019ರ ಮಾರ್ಚ್ 8ರಂದು ಪ್ರಧಾನಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಇದು ಲೋಕಾರ್ಪಣೆಗೊಳ್ಳುತ್ತಿದೆ.

ಏನಿದು ಯೋಜನೆ?

  • ಈ ಯೋಜನೆಯು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಹರಡಿದ್ದು, 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಮತ್ತು ಹೊಸ ಸೌಂದರ್ಯ ಪಡೆದುಕೊಂಡಿವೆ. ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದ್ದು, ಆಕರ್ಷಕ ಶಿಲ್ಪ ಕಲೆಗಳಿಂದ ಪ್ರವಾಸಿಗರು, ಭಕ್ತರನ್ನು ಸೆಳೆಯುವ ಗುರಿ ಹೊಂದಲಾಗಿದೆ. ಜತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.
  • ಯಾತ್ರಿ ಸುವಿಧಾ ಕೇಂದ್ರಗಳು, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ಭೋಗಶಾಲಾ, ಸಿಟಿ ಮ್ಯೂಸಿಯಂ, ಪ್ರದರ್ಶನ ಗ್ಯಾಲರಿಗಳು, ಆಹಾರ ಮಳಿಗೆ ಮುಂತಾದವು ಇದರಲ್ಲಿ ಸೇರಿವೆ
  • ಕಾಶಿ ವಿಶ್ವನಾಥ ದೇವರ ಸುಗಮ ಮತ್ತು ಸುರಕ್ಷಿತ ದರ್ಶನ ಹಾಗೂ ಪೂಜೆಗಾಗಿ ಮೂರು ಪ್ರಯಾಣಿಕ ಸೌಲಭ್ಯ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಲಾಕರ್‌ಗಳು, ಟಿಕೆಟ್ ಕೌಂಟರ್‌ಗಳು, ಅಂಗಡಿಗಳಂತಹ ಸೌಲಭ್ಯಗಳು ಸಿಗಲಿವೆ.

ಮರ-ಗಿಡಗಳ ಅಲಂಕಾರ

  • ಈ ಮೊದಲು ಆವರಣವು 3000 ಚದರ ಅಡಿಗಳಷ್ಟು ಮಾತ್ರ ವ್ಯಾಪ್ತಿ ಹೊಂದಿತ್ತು. ಅದನ್ನು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿ 5 ಲಕ್ಷ ಚದರ ಅಡಿಯಷ್ಟು ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸದಾಗಿ ನಿರ್ಮಿಸಲಾದ ಕಾಶಿ ಕಾರಿಡಾರ್ ರುದ್ರಾಕ್ಷ, ಪಾರಿಜಾತ, ನೆಲ್ಲಿ, ಅಶೋಕ ಮುಂತಾದ ಮರಗಳನ್ನು ಬೆಳಸಲಾಗುತ್ತದೆ. ದೇವಸ್ಥಾನದ ಆವರಣದ ಸುತ್ತ ಹಾಗೂ ಮಂದಿರ ಚೌಕಗಳುದ್ದಕ್ಕೂ ಮರಗಳನ್ನು ಬೆಳೆಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ಈ ಮೂಲಕ ಪರಿಸರ ಸಂರಕ್ಷಣೆ ಸಂದೇಶ ನೀಡಲಾಗುತ್ತದೆ.