Published on: August 9, 2022

ಸಂಕಲ್ಪದಿಂದ ಸಿದ್ಧಿ

ಸಂಕಲ್ಪದಿಂದ ಸಿದ್ಧಿ

ಸುದ್ದಿಯಲ್ಲಿ ಏಕಿದೆ?

ರಾಜಧಾನಿ ಬೆಂಗಳೂರಿನಲ್ಲಿ ‘ಸಂಕಲ್ಪ್ ಸೆ ಸಿದ್ಧಿ'(ಸಂಕಲ್ಪದಿಂದ ಸಿದ್ಧಿ) ಕಾರ್ಯಕ್ರಮ ಸರ್ಕಾರ ವತಿಯಿಂದ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಮುಖ್ಯಾಂಶಗಳು

ಏನಿದು ಸಂಕಲ್ಪ್ ಸೆ ಸಿದ್ದಿ ಯೋಜನೆ? 

  • ದೇಶ ಸ್ವಾತಂತ್ರ್ಯ ಸಿಕ್ಕಿ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಕಲ್ಪದಿಂದ ಸಿದ್ಧಿ ಯೋಜನೆಯನ್ನು ಆರಂಭಿಸಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು 2017ರ ಆಗಸ್ಟ್ 21ರಂದು ಚಾಲನೆ ನೀಡಿದ್ದರು. ಅಂದಿನಿಂದ 5 ವರ್ಷಗಳವರೆಗೆ ಇದೇ ವರ್ಷ ಆಗಸ್ಟ್ 21ರವರೆಗೆ 5 ವರ್ಷಗಳ ಯೋಜನೆಯಿದು.
  • ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಡೀ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುತ್ತದೆ.
  • ಮುಖ್ಯ ಕಾರ್ಯಕ್ರಮಗಳು: ಸಂಕಲ್ಪ್ ಸೇ ಸಿದ್ಧಿ ಯೋಜನೆಯು 5 ವರ್ಷಗಳ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ನವ ಭಾರತ ಚಳವಳಿ (New India Movement) ಕಾರ್ಯಕ್ರಮದಲ್ಲಿ ಸರ್ಕಾರವು ಭಾರತದ ನಾಗರಿಕರ ಒಳಿತಿಗಾಗಿ ರಾಷ್ಟ್ರದಾದ್ಯಂತ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ.
  • ಈ ಯೋಜನೆಯಡಿ ಕಾರ್ಯಕ್ರಮಗಳು ಮತ್ತು ಇತರ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಅಧಿಕಾರಿಗಳು ನಾಗರಿಕರಿಗೆ ಭಾರತದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ, ವಿಶೇಷವಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಮತ್ತು ಅರಿವು ಮೂಡಿಸುತ್ತಾರೆ.
  • ಈ ಕಾರ್ಯಕ್ರಮದಲ್ಲಿ ಜಾತಿ ತಾರತಮ್ಯ, ಧರ್ಮ, ಬಡತನ, ಶಿಕ್ಷಣ, ಸ್ವಚ್ಛತೆ ಹೀಗೆ ಹಲವು ವಿಚಾರಗಳನ್ನು ದೇಶದ ಎಲ್ಲ ರೀತಿಯ ಸಮಸ್ಯೆಗಳನ್ನು ತೊಲಗಿಸಲಾಗುತ್ತದೆ.
  • ಸಂಕಲ್ಪ್ ಸೇ ಸಿದ್ಧಿ ಕಾರ್ಯಕ್ರಮ ಅಥವಾ ಯೋಜನೆಯು ದೇಶದ 6-7 ಪ್ರಮುಖ ವಲಯಗಳು ಅಥವಾ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ. ಸ್ವಚ್ಛ ಭಾರತ, ಸಾಕ್ಷರ ಭಾರತ, ಬಡತನ ಮುಕ್ತ, ಭ್ರಷ್ಟಾಚಾರ ಮುಕ್ತ, ಭಯೋತ್ಪಾದನೆ ಮುಕ್ತ, ಕೋಮುವಾದ ಮುಕ್ತ ಮತ್ತು ಜಾತಿ ತಾರತಮ್ಯ ಮುಕ್ತತೆಗೆ ಒತ್ತು ನೀಡುತ್ತದೆ.