Published on: December 1, 2022

ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

ಸುದ್ದಿಯಲ್ಲಿ ಏಕಿದೆ?:

ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ ಸಾಧಕರು ಸೇರಿದಂತೆ ವಿವಿಧ ರಾಜ್ಯಗಳ 86 ಮಂದಿಗೆ ‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ಯನ್ನು ಘೋಷಿಸಿದೆ.

ಮುಖ್ಯಾಂಶಗಳು

  • 75 ವರ್ಷ ದಾಟಿದ ಹಾಗೂ ಈವರೆಗೆ ರಾಷ್ಟ್ರೀ ಯ ಪ್ರಶಸ್ತಿಯನ್ನು ಪಡೆಯದ ಕಲಾವಿದರನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
  • ಇದೇ ವೇಳೆ, 2019, 2020, 2021ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ‍ಪ್ರಶಸ್ತಿಯ ಪುರಸ್ಕೃ ತ ಹೆಸರನ್ನು (ಅಕಾಡೆಮಿ ಪುರಸ್ಕಾರ) ಪ್ರಕಟಿಸಲಾಗಿದೆ.
  • ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
  • ಪ್ರಶಸ್ತಿ: ಈ ಪ್ರಶಸ್ತಿಯು ತಲಾ ರೂ. 1 ಲಕ್ಷ ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿದೆ.

ಕರ್ನಾಟಕದಿಂದ ಆಯ್ಕೆಯಾದವರು

  • 2019ನೇ ಸಾಲಿನ ಪ್ರಶಸ್ತಿ : ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ವಿನಾಯಕ ತೊರವಿ (ಹಿಂದೂಸ್ಥಾನಿ ಸಂಗೀತ) , ಮಂಜು ಭಾರ್ಗವಿ (ಕೂಚಿಪುಡಿ), ಆಯ್ಕೆಯಾಗಿದ್ದಾರೆ.
  • 2020ನೇ ಸಾಲಿನ ಪ್ರಶಸ್ತಿಗ: ಎಸ್.ಜಿ.ಲಕ್ಷ್ಮಿ ದೇವಮ್ಮ (ಜನಪದ), ಆರತಿ ಅಂಕಲಿಕರ್ (ಹಿಂದೂಸ್ಥಾನಿ ಸಂಗೀತ) ಆಯ್ಕೆಯಾಗಿದ್ದಾರೆ.
  • 2021ನೇ ಸಾಲಿನ ಪ್ರಶಸ್ತಿ: ರವೀಂದ್ರ ಯಾವಗಲ್ (ತಬಲಾ), ಎಚ್.ಆರ್.ಲೀಲಾವತಿ (ಸುಗಮ ಸಂಗೀತ), ಗರ್ತಿಕೆರೆ ರಾಘಣ್ಣ (ಜನಪದ) ಹಾಗೂ ಡಿ.ಬಾಲಕೃಷ್ಣ (ವೀಣೆ) ಅವರನ್ನು ಆಯ್ಕೆ ಮಾಡಲಾಗಿದೆ.
  • ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ (2019, 2020 ಹಾಗೂ 2021) ಬಿ.ಎಸ್.ಅರುಣ್ ಕುಮಾರ್ (ಸಂಗೀತ ಕ್ಷೇತ್ರ ಕರ್ನಾಟಕದಿಂದ), ಅಮಿತ್ ಎ.ನಾಡಿಗ್ (ಕೊಳಲು), ವಸಂತ್ ಕಿರಣ್ (ಕೂಚಿಪುಡಿ) ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ರೂ.25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
  • ಜೀವಮಾನ ಸಾಧನೆ ಪ್ರಶಸ್ತಿ ಯನ್ನು ಗೌರಿ ಕುಪ್ಪುಸ್ವಾಮಿ (ಕರ್ನಾಟಿಕ್ ಸಂಗೀತ), ಅನುಸೂಯಾ ಕುಲಕರ್ಣಿ, ಲಲಿತಾ ಶ್ರೀನಿವಾಸನ್ (ಭರತನಾಟ್ಯ), ಎಎಸ್ ಜಯತೀರ್ಥ (ರಂಗಭೂಮಿ) ಮತ್ತು ಮಾರಪ್ಪ ದಾಸ್ (ಜಾನಪದ) ಪಡೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ

  • ಸಂಗೀತ ನಾಟಕ ಅಕಾಡೆಮಿ, ಭಾರತದ ರಾಷ್ಟ್ರೀಯ ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ಸಾಧನೆ ಮಾಡಿದವರಿಗೆ ಅಕಾಡೆಮಿ ನೀಡುವ ಪ್ರಶಸ್ತಿಯಾಗಿದೆ. ಇದು ಪ್ರದರ್ಶನ ಕಲೆಯ ಕ್ಷೇತ್ರದಲ್ಲಿ ಜನರಿಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ.
  • ಮೊದಲ ಪ್ರಶಸ್ತಿಯನ್ನು 1952 ರಲ್ಲಿ ನೀಡಲಾಯಿತು.