Published on: March 6, 2023
ಸಂತ ಶಿಶುನಾಳ ಶರೀಫರ ಥೀಮ್ ಪಾರ್ಕ್
ಸಂತ ಶಿಶುನಾಳ ಶರೀಫರ ಥೀಮ್ ಪಾರ್ಕ್
ಸುದ್ದಿಯಲ್ಲಿ ಏಕಿದೆ? ಶಿಗ್ಗಾವಿ ತಾಲೂಕಿನ ಶಿಶುವಿನಾಳ ಗ್ರಾಮದ ಸಂತ ಶರೀಫ ಶಿವಯೋಗಿ ಮತ್ತು ಗೋವಿಂದಭಟ್ಟರ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶಿಶುನಾಳ ಗ್ರಾಮದಲ್ಲಿ ಸಂತ ಶಿಶುನಾಳ ಶರೀಫರ ತತ್ವ ಪದಗಳ ಭಾವಾರ್ಥ ಅರಿಯುವ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಾಂಶಗಳು
- ಶರೀಫರ ತತ್ವಪದಗಳ ಭಾವಾರ್ಥದ ಮೂಜಿಯಂ ಮಾಡಲಾಗುತ್ತಿದೆ. ಶರೀಫರು ನಡೆದಾಡಿ ಹೋಗಿರುವ ಘಟನೆಗಳನ್ನು ಚಿತ್ರೀಕರಿಸಲಾಗುವದು. ಶರೀಪರ ಜೀವನ ಮೌಲ್ಯಗಳನ್ನ ಸಾಮಾನ್ಯರೂ ತಿಳಿಯುವಂತಾಗ ಬೇಕು.
ಸಂತ ಶಿಶುನಾಳ ಶರೀಫ
- ಗುರು ಗೋವಿಂದಭಟ್ಟರ ಶಿಷ್ಯರಾದ ಶರೀಫ ಸಾಹೇಬರು ಅನುಭಾವಿಗಳು. ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ಶಿಶುನಾಳ ಗ್ರಾಮದ ದೇವಕಾರ ಮನೆತನದಲ್ಲಿ. ಈ ಸಣ್ಣ ಗ್ರಾಮದ ಹಜರತ ಇಮಾಮ ಸಾಹೇಬರು ಹಾಗೂ ಹಜ್ಜುಮಾ ಎಂಬ ಮುಸ್ಲಿಂ ದಂಪತಿಗೆ 1819ನೆಯ ಜುಲೈ 3 ರಂದು ಶರೀಫರು ಜನಿಸಿದರು.
- ತಂದೆ ಹಜರತ ಇಮಾಮರು ಅಲ್ಲಾನ ಆದರ್ಶ ಭಕ್ತರು. ಸಮಾಜಸೇವೆ, ಸಮಾಜಕಲ್ಯಾಣ ಅವರ ಆದರ್ಶ ಜೀವನವಾಗಿತ್ತು. ಹುಲಗೂರಿನ ಖಾದ್ರಿಯವರೇ ‘ಮೊಹಮ್ಮದ್ ಶರೀಫ‘ ಎಂದು ಹೆಸರಿಟ್ಟರು. ಮುಂದೆ ಇದೇ ಹೆಸರು ಶಿಶುನಾಳ ಶರೀಫ ಎಂದು ಜನಪ್ರಿಯವಾಯಿತು.
- `ಶರೀಫ’ ಎಂಬ ಪಾರ್ಸಿ ಭಾಷೆಯ ಪದದ ಅರ್ಥ `ಉದಾತ್ತ ಧ್ಯೇಯ’ಗಳ ಅಥವಾ `ಉತ್ತಮ ಶೀಲ ಸ್ವಭಾವ’ ಹೊಂದಿ ಇತರರಿಂದ ಗೌರವಿಸಲ್ಪಡುವ ವ್ಯಕ್ತಿ.