Published on: November 26, 2021

ಸಂವಿಧಾನದ ದಿನ

ಸಂವಿಧಾನದ ದಿನ

ಸುದ್ಧಿಯಲ್ಲಿ ಏಕಿದೆ ?  1949ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನೆಪಿಗಾಗಿ ದೇಶ  ಇಂದು (ನವೆಂಬರ್ 26) ಸಂವಿಧಾನ ದಿನವನ್ನು ಆಚರಿಸುತ್ತಿದೆ.

  • ಪವಿತ್ರ ಸಂವಿಧಾನದ ಮೂಲಕ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದ ದಿನವಿದು. 2015ರಿಂದ ಸಂವಿಧಾನ ದಿನ ಆಚರಣೆ ಆರಂಭವಾಯ್ತು.
  • ಪ್ರತಿಯೊಬ್ಬ ಭಾರತೀಯರ ಶಕ್ತಿಯಾದ, ಎಲ್ಲರ ಪಾಲಿಗೂ ಪವಿತ್ರ ಗ್ರಂಥವಾದ ನಮ್ಮ ಸಂವಿಧಾನವನ್ನು 1949ರ ನವೆಂಬರ್ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ, ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ.
  • ಡಾ. ಬಿ.ಆರ್‌.ಅಂಬೇಡ್ಕರ್‌ ನೇತೃತ್ವದ ಸಂವಿಧಾನ ಕರಡು ರಚನಾ ಸಮಿತಿಯ 2 ವರ್ಷ 11 ತಿಂಗಳ ಕಾಲ ಸತತ ಅಧ್ಯಯನ, ಪರಿಶ್ರಮದ ಫಲವೇ ನಮ್ಮ ಬಲಶಾಲಿ ಸಂವಿಧಾನ. 1949ರ ನವೆಂಬರ್ 26ರಂದು ಎಲ್ಲಾ ಸಂಸತ್ ಸದಸ್ಯರು ಸರ್ವಾನುಮತದಿಂದ ಭಾರತದ ಸಂವಿಧಾನವನ್ನು ಅಂಗೀಕರಿಸಿದರು. ಬಳಿಕ 1950ರ ಜನವರಿ 26 ರಂದು ನಮ್ಮ ಸಂವಿಧಾನವನ್ನು ಅನುಷ್ಠಾನಕ್ಕೆ ತರಲಾಗಿತ್ತು.
  • ಸಂವಿಧಾನ ಭಾರತದ ದೊಡ್ಡ ಬಲ. ಈ ಮಹಾನ್ ಗ್ರಂಥ ದೇಶದ ಜನರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯೊದಗಿದೆ. ಮೂಲಭೂತ ಹಕ್ಕುಗಳು, ಕರ್ತವ್ಯವನ್ನೂ ನೀಡಿದೆ. ಇದರ ದ್ಯೋತಕವಾಗಿಯೇ ಸಂವಿಧಾನ ದಿನವನ್ನೂ ಆಚರಿಸಲಾಗುತ್ತಿದೆ.