Published on: January 2, 2024

ಸಂಸತ್ ಗೆ ಸಿಐಎಸ್‌ಎಫ್ ಭದ್ರತೆ

ಸಂಸತ್ ಗೆ ಸಿಐಎಸ್‌ಎಫ್ ಭದ್ರತೆ

ಸುದ್ದಿಯಲ್ಲಿ ಏಕಿದೆ? ಸಂಸತ್‌ನಲ್ಲಿ ಸಂಭವಿಸಿದ ಭದ್ರತಾ ಲೋಪದ ಘಟನೆಯ ಬಳಿಕ ಸಂಸತ್ ಆವರಣದ ಭದ್ರತೆಯ ಹೊಣೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಗೆ (ಸಿಐಎಸ್‌ಎಫ್) ವಹಿಸಿದೆ. ಸಂಸತ್ ಭವನದ ಭದ್ರತೆಯ ಉಸ್ತುವಾರಿಯಾಗಿ ದಿಲ್ಲಿ ಪೊಲೀಸರ ಸ್ಥಾನಕ್ಕೆ ಸಿಐಎಸ್‌ಎಫ್ ನೇಮಕಗೊಳ್ಳಲಿದೆ.

ಮುಖ್ಯಾಂಶಗಳು

ಸಂಸತ್‌ಗೆ ಬರುವ ಜನರ ತಪಾಸಣೆಯಿಂದ ಹಿಡಿದು, ಭದ್ರತೆಗೆ ಸಂಬಂಧಿಸಿದ ಎಲ್ಲಾ ಹೊಣೆಗಾರಿಕೆಗಳನ್ನೂ ಅದು ವಹಿಸಿಕೊಳ್ಳಲಿದೆ. ಸಂಸತ್ ಸಂಕೀರ್ಣದ ಒಳಗಿನ ಭದ್ರತೆಯ ಜವಾಬ್ದಾರಿ ಲೋಕಸಭಾ ಕಾರ್ಯಾಲಯದಲ್ಲಿಯೇ ಮುಂದುವರಿಯಲಿದೆ.

ಉದ್ದೇಶ

ಹಲವು ಸಂಸ್ಥೆಗಳ ನಿಯಮಗಳು ಸೇರಿ ಗೊಂದಲ ಉಂಟಾಗುವುದನ್ನು ತಪ್ಪಿಸಲು ಭದ್ರತಾ ಶಿಷ್ಟಾಚಾರಗಳನ್ನು ಸರಳೀಕರಿಸುವ ಪ್ರಯತ್ನವಾಗಿ ಈ ಬದಲಾವಣೆ ಮಾಡಲಾಗುತ್ತಿದೆ.

ಸಿಐಎಸ್‌ಎಫ್

  • ಸ್ಥಾಪನೆ: 10 ಮಾರ್ಚ್ 1969
  • ಸ್ಥಾಪಕರು: ಭಾರತದ ಸಂಸತ್ತು
  • ಆಡಳಿತ ಮಂಡಳಿ: ಗೃಹ ವ್ಯವಹಾರಗಳ ಸಚಿವಾಲಯ (ಭಾರತ)
  • ಪ್ರಧಾನ ಕಛೇರಿ: ನವದೆಹಲಿ, ಭಾರತ
  • ಈ ಪಡೆಯು ಸೂಕ್ಷ್ಮ ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಮಗ್ರ ಭದ್ರತೆಯನ್ನು ಒದಗಿಸುತ್ತದೆ.
  • ಪ್ರಸ್ತುತ ಸಿಐಎಸ್‌ಎಫ್, ನಾಗರಿಕ ವಿಮಾನ ನಿಲ್ದಾಣಗಳು, ದಿಲ್ಲಿ ಮೆಟ್ರೋ ಮತ್ತು ಪರಮಾಣು ಘಟಕಗಳು ಹಾಗೂ ದಿಲ್ಲಿಯ ಅನೇಕ ಕೇಂದ್ರ ಸರ್ಕಾರಿ ಸಚಿವಾಲಯ ಕಟ್ಟಡಗಳು ಸೇರಿದಂತೆ 350ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾವಲು ಕಾಯುತ್ತಿದೆ.