Published on: July 19, 2022

ಸಮಗ್ರ (ಏಕೀಕೃತ) ಫುಡ್ ಪಾರ್ಕ್ ಅಭಿವೃದ್ಧಿ

ಸಮಗ್ರ (ಏಕೀಕೃತ) ಫುಡ್ ಪಾರ್ಕ್ ಅಭಿವೃದ್ಧಿ

ಸುದ್ದಿಯಲ್ಲಿ ಏಕಿದೆ?

ನಾಲ್ಕು ರಾಷ್ಟ್ರಗಳ I2U2′ ಶೃಂಗಸಭೆ ಅಂಗವಾಗಿ ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.

ಮುಖ್ಯಾಂಶಗಳು

ಪಾಲ್ಗೊಂಡ ಸದಸ್ಯರು ಮತ್ತು ದೇಶಗಳು

  • ಈ ಗುಂಪಿನ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ- ಬೈಡನ್, ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನಡುವಿನ ಮೊದಲ ವರ್ಚುಯಲ್ ಸಭೆಯ ನಂತರ ಈ ನಿರ್ಧಾರವನ್ನು ಘೋಷಿಸಲಾಗಿದೆ.
  • ಚರ್ಚಿತ ವಿಷಯಗಳು ನಾಲ್ಕು ರಾಷ್ಟ್ರಗಳ ನಾಯಕರ ‘ಆಹಾರ ಭದ್ರತಾ ಬಿಕ್ಕಟ್ಟು, ಶುದ್ಧ ಇಂಧನ, ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಸುದೀರ್ಘ ಅವಧಿವರೆಗೂ ಕಾಪಿಟ್ಟುಕೊಳ್ಳಲು ಇರುವ ನವೀನ ಮಾರ್ಗೋಪಾಯಗಳು ಹಾಗೂ ಆಹಾರ ಪೂರೈಕೆ ವ್ಯವಸ್ಥೆಯ ಕುರಿತು ಸಮ್ಮೇ ಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು’
  • ‘ಜಲ, ಇಂಧನ, ಸಾರಿಗೆ, ಅಂತರಿಕ್ಷ, ಆರೋಗ್ಯ ಮತ್ತು ಆಹಾರ ಭದ್ರತೆಯಂತಹ ಬಹುಮುಖ್ಯ ಕ್ಷೇತ್ರಗಳಲ್ಲಿ ಜಂಟಿ ಹೂಡಿಕೆ ಮಾಡುವ ಸಂಬಂಧ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ.
  • ಪುಡ್ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಸೂಕ್ತವಾದ ಜಮೀನು ಪೂರೈಸಿದರೆ, ಅಮೆರಿಕ ಮತ್ತು ಇಸ್ರೇಲ್ ಖಾಸಗಿ ವಲಯಗಳು ತಾಂತ್ರಿಕ ಪರಿಣಿತಿಯನ್ನು ನೀಡಲಿವೆ ಎಂದು I2U2 ಹೇಳಿಕೆಯಲ್ಲಿ ತಿಳಿಸಿದೆ. ಇಂಧನ ಭದ್ರತೆ, ಆಹಾರ ಭದ್ರತೆ ಹಾಗೂ ಆರ್ಥಿಕತೆಯ ಬೆಳವಣಿಗೆಗೆ ಐ2ಯು2 ಮಹತ್ವದ ಕಾಣಿಕೆ ನೀಡಲಿದೆ

ಉದ್ದೇಶ

  • ಯುಎಇ ಹೂಡಿಕೆಯಿಂದ ದಕ್ಷಿಣ ಏಷ್ಯಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಆಹಾರದ ಅಭದ್ರತೆ ತೊಡೆದು ಹಾಕಲು ನೆರವಾಗಲಿದೆ ಎಂದು I2U2 ಹೇಳಿದೆ.  ಬೆಳೆಯ ಇಳುವರಿ ಹೆಚ್ಚಿಸಲು, ಆ ಮೂಲಕ ದಕ್ಷಿಣ ಏಷ್ಯಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಎದುರಿಸುತ್ತಿರುವ ಆಹಾರದ ಅಭದ್ರತೆ ನಿವಾರಿಸಲು ಈ ಯೋಜನೆ ಸಹಕಾರಿಯಾಗಲಿದೆ’.

I2U2 ಎಂದರೇನು?

  • I2U2 ಭಾರತ, ಇಸ್ರೇಲ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸರ್ಕಾರಗಳನ್ನು ಒಳಗೊಂಡಿರುವ ಹೊಸ ಪಾಲುದಾರಿಕೆಯಾಗಿದೆ. ಇದು ನಾಲ್ಕು ದೇಶಗಳ ಇಂಗ್ಲಿಷ್ ಹೆಸರುಗಳ ಮೊದಲ ಅಕ್ಷರಗಳನ್ನು ಪ್ರತಿನಿಧಿಸುತ್ತದೆ.