Published on: May 4, 2023
ಸಮಗ್ರ ಗರ್ಭಪಾತ ಆರೈಕೆ
ಸಮಗ್ರ ಗರ್ಭಪಾತ ಆರೈಕೆ
ಸುದ್ದಿಯಲ್ಲಿ ಏಕಿದೆ? ‘ಸಮಗ್ರ ಗರ್ಭಪಾತ ಆರೈಕೆ’ (ಸಿಎಸಿ) ಕಾರ್ಯಕ್ರಮ ಅನುಷ್ಠಾನದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಅತ್ಯುತ್ತಮ ರಾಜ್ಯ ಎಂಬ ಗೌರವಕ್ಕೆ ಭಾಜನವಾಗಿದೆ. ಮೊದಲ ಪ್ರಶಸ್ತಿಯನ್ನು ಛತ್ತಿಸಗಡ್ ಪಡೆದುಕೊಂಡಿದೆ.
ಮುಖ್ಯಾಂಶಗಳು
- ಏಪ್ರಿಲ್ ನಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಮಗ್ರ ಗರ್ಭಪಾತ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಗೆ ಪ್ರಶಸ್ತಿ ಪ್ರದಾನ ಮಾಡಿತು.
- ಲಿಪೇಸ್ ಡೆವಲಪ್‌ಮೆಂಟ್ ಫೌಂಡೇಶನ್ (ಐಡಿಎಫ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸಹಯೋಗದೊಂದಿಗೆ ಈ ಸಲಹಾ ಸಮಾಲೋಚನೆಯನ್ನು ಆಯೋಜಿಸಲಾಗಿತ್ತು
- ಈ ಕಾರ್ಯಕ್ರಮದಲ್ಲಿ ಗರ್ಭಪಾತದ ಆರೈಕೆ ಸುಧಾರಿಸುವ ಸವಾಲುಗಳು ಹಾಗೂ ಆರೈಕೆಯ ಬಗ್ಗೆ ಚರ್ಚಿಸಲಾಯಿತು.
- ಅಸುರಕ್ಷಿತ ಗರ್ಭಪಾತವು ತಾಯಿಯ ಮರಣಕ್ಕೆ ಕಾರಣವಾಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸುರಕ್ಷಿತ ಗರ್ಭಪಾತ ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗಿದೆ.
- ಕಾರ್ಯಕ್ರಮದ ಉದ್ದೇಶ : ಸಿಎಸಿ ಕಾರ್ಯಕ್ರಮವು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತದ ಆರೈಕೆಯ ಕಡೆಗೆ ಬಲವಾದ ಬದ್ಧತೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ ಮತ್ತು ಸುರಕ್ಷಿತ ಗರ್ಭಪಾತ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾಲುದಾರರನ್ನು ತೊಡಗಿಸಿಕೊಳ್ಳುವ ಮೂಲಕ ಸ್ಪಷ್ಟವಾದ ಮಾರ್ಗವನ್ನು ಸ್ಥಾಪಿಸುತ್ತದೆ.
ಕರ್ನಾಟಕದಲ್ಲಿ ಸಮಗ್ರ ಗರ್ಭಪಾತ ಆರೈಕೆ ಕಾರ್ಯಕ್ರಮ
- 2014 ರಲ್ಲಿ ಪ್ರಾರಂಭಿಸಲಾದ ಸಮಗ್ರ ಗರ್ಭಪಾತ ಆರೈಕೆ ಕಾರ್ಯಕ್ರಮವು ಕಾನೂನು ಮತ್ತು ನೀತಿಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ “ಇದು ಗರ್ಭಪಾತ ಮತ್ತು ಗರ್ಭಪಾತದ ನಂತರದ ತೊಡಕುಗಳಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಗಿದೆ.”