ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಿನ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ದಿನ
ಸುದ್ದಿಯಲ್ಲಿ ಏಕಿದೆ? ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದು 7 ವರ್ಷಗಳಾದವು. ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ವ್ಯಾಪಾರ ಸ್ನೇಹಿಯಾಗಿಸಲು 2017ರ ಜುಲೈ 1ರಂದು ದೇಶದಾದ್ಯಂತ ಏಕಕಾಲಕ್ಕೆ ಜಿಎಸ್ಟಿ ಜಾರಿಗೊಳಿಸಲಾಯಿತು. ಇದರ ಜಾರಿಗೂ ಮೊದಲು ದೇಶದಲ್ಲಿ 17ಕ್ಕಿಂತಲೂ ಹೆಚ್ಚು ವಿವಿಧ ಬಗೆಯ ಪರೋಕ್ಷ ತೆರಿಗೆ ಮತ್ತು ಸುಂಕಗಳಿದ್ದವು.
ಮುಖ್ಯಾಂಶಗಳು
- 2017ರಲ್ಲಿ 65 ಲಕ್ಷವಿದ್ದ ತೆರಿಗೆದಾರರ ಸಂಖ್ಯೆ ಈಗ 1.46 ಕೋಟಿಗೆ ಏರಿಕೆಯಾಗಿದೆ.
- 2017–18ರಲ್ಲಿ ಮಾಸಿಕ ಸರಾಸರಿ ₹90 ಸಾವಿರ ಕೋಟಿ ಇದ್ದ ಜಿಎಸ್ಟಿ ವರಮಾನವು, 2024–25ನೇ ಸಾಲಿನಲ್ಲಿ ₹1.90 ಲಕ್ಷ ಕೋಟಿ ದಾಟಿದೆ.
- ತೆರಿಗೆ ಸಂಗ್ರಹದಲ್ಲಿ ಶೇ 0.72ರಿಂ ದ (ಜಿಎಸ್ಟಿ ಪೂರ್ವ) ಶೇ 1.22ರಷ್ಟಕ್ಕೆ ಏರಿಕೆಯಾಗಿದೆ.
- ಸವಾಲು: ನಕಲಿ ಇನ್ವಾಯ್ಸ್ ಸೃಷ್ಟಿಸಿ ಜಿಎಸ್ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಎಸಗುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.
ಜಿಎಸ್‌ಟಿ ಯ ಶಾಸನಬದ್ಧ ಆಧಾರ
- ಭಾರತದಲ್ಲಿ, ಜಿಎಸ್‌ಟಿ ಮಸೂದೆಯನ್ನು ಮೊದಲು 2014 ರಲ್ಲಿ ಸಂವಿಧಾನ (122 ನೇ ತಿದ್ದುಪಡಿ) ಮಸೂದೆಯಾಗಿ ಪರಿಚಯಿಸಲಾಯಿತು.
- ಇದು 2016 ರಲ್ಲಿ ಅನುಮೋದನೆಯನ್ನು ಪಡೆದುಕೊಂಡಿತು
- ಸಂವಿಧಾನದ 101 ನೇ ತಿದ್ದುಪಡಿ ಕಾಯಿದೆ ಆಗಿದೆ
- ಜಿಎಸ್‌ಟಿಯನ್ನು ಭಾರತೀಯ ಸಂವಿಧಾನದ 279 ನೇ ವಿಧಿಯ ಅಡಿಯಲ್ಲಿ ಜಾರಿಗೊಳಿಸಲಾಗಿದೆ.
- ವಿಧಿ 246A – ರಾಜ್ಯಗಳು ಸರಕು ಮತ್ತು ಸೇವೆಗಳಿಗೆ ತೆರಿಗೆ ವಿಧಿಸುವ ಅಧಿಕಾರವನ್ನು ಹೊಂದಿವೆ.
ಜಿಎಸ್ಟಿ ಕೌನ್ಸಿಲ್
- ಜಿಎಸ್‌ಟಿ ಯನ್ನು ನಿರ್ವಹಿಸಲು ಮತ್ತು ಆಡಳಿತ ಮಾಡಲು ಅಧ್ಯಕ್ಷರು ರಚಿಸುತ್ತಾರೆ.
- ಇದರ ಅಧ್ಯಕ್ಷರು ಭಾರತದ ಕೇಂದ್ರ ಹಣಕಾಸು ಸಚಿವರು ಮತ್ತು ರಾಜ್ಯ ಸರ್ಕಾರಗಳು ಅದರ ಸದಸ್ಯರಾಗಿ ನಾಮನಿರ್ದೇಶನಗೊಂಡ ಮಂತ್ರಿಗಳು.
- ಇದು ಕೇಂದ್ರ, 29 ರಾಜ್ಯಗಳು, ದೆಹಲಿ ಮತ್ತು ಪುದುಚೇರಿಯನ್ನು ಒಳಗೊಂಡಿದೆ.
- ಕೇಂದ್ರವು 1/3ರಷ್ಟು ಮತದಾನದ ಹಕ್ಕುಗಳನ್ನು ಹೊಂದಿದೆ ಮತ್ತು ರಾಜ್ಯಗಳು 2/3ರಷ್ಟು ಮತದಾನದ ಹಕ್ಕುಗಳನ್ನು ಹೊಂದಿವೆ.
- ನಿರ್ಧಾರಗಳನ್ನು 3/4 ಬಹುಮತದಿಂದ ತೆಗೆದುಕೊಳ್ಳಲಾಗುತ್ತದೆ.
- 53ನೇ GST ಕೌನ್ಸಿಲ್ ಸಭೆಯು ಜೂನ್ 2024 ರಂದು ನವದೆಹಲಿಯಲ್ಲಿ ನಡೆಯಿತು.
ಜಿಎಸ್‌ಟಿ ಬಗ್ಗೆ ತಿಳಿಯಬೇಕಾದ ಅಂಶಗಳು
- ಅಸೆಂಬ್ಲಿಯಲ್ಲಿ ಜಿಎಸ್‌ಟಿ ಶಾಸನವನ್ನು ಅಂಗೀಕರಿಸಿದ ಭಾರತದ ಮೊದಲ ರಾಜ್ಯ ಅಸ್ಸಾಂ.
- ಇದರ ಪರಿಕಲ್ಪನೆಯನ್ನು 2005 ರಲ್ಲಿ ಪಿ. ಚಿದಂಬರಂ ಅವರು ಸಂಸತ್ತಿನಲ್ಲಿ ಪರಿಚಯಿಸಿದರು.
- ಇದರ ಅಡಿಯಲ್ಲಿ ವಿವಿಧ ತೆರಿಗೆ ಸ್ಲ್ಯಾಬ್‌ಗಳು 0%, 5%, 12%, 18% ಮತ್ತು 28%.
- ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಎಂಬುದು ಇದರ ಧ್ಯೇಯವಾಗಿದೆ.
- ಭಾರತೀಯ ಜಿಎಸ್‌ಟಿಯು ಕೆನಡಾದ ಮಾದರಿಯನ್ನು ಆಧರಿಸಿದೆ ಮತ್ತು ವಿಜಯ್ ಕೇಳ್ಕರ್ ಸಮಿತಿಯ ಶಿಫಾರಸಿನ ಮೇರೆಗೆ ಮಾಡಲಾಗಿದೆ
- ಇದನ್ನು ಮೊದಲು ಜಾರಿಗೊಳಿಸಿದ ದೇಶ ಫ್ರಾನ್ಸ್
- ಮಹಾರಾಷ್ಟ್ರ ಅತಿ ಹೆಚ್ಚು ಜಿಎಸ್ ಟಿ ಆದಾಯ ಗಳಿಸುವ ರಾಜ್ಯವಾಗಿದ್ದು (ರೂ. 23,536 ಕೋಟಿ), ಎರಡನೇ ಸ್ಥಾನದಲ್ಲಿ ಕರ್ನಾಟಕ (ರೂ. 10,317 ಕೋಟಿ) ಮತ್ತು ಗುಜರಾತ್ (ರೂ. 9,800 ಕೋಟಿ) ಮೂರನೇ ಸ್ಥಾನದಲ್ಲಿದೆ
ವಿಧಗಳು
ಕೇಂದ್ರವು ಕೇಂದ್ರ ಜಿಎಸ್‌ಟಿ(ಸಿ ಜಿಎಸ್‌ಟಿ )ಯನ್ನು ವಿಧಿಸುತ್ತದೆ ಮತ್ತು ಸಂಗ್ರಹಿಸುತ್ತದೆ.
ಒಂದು ರಾಜ್ಯದೊಳಗಿನ ಸರಕು ಮತ್ತು ಸೇವೆಗಳ ಪೂರೈಕೆಯ ಮೇಲೆ ರಾಜ್ಯಗಳು ರಾಜ್ಯ ಜಿಎಸ್‌ಟಿ(ಎಸ ಜಿಎಸ್‌ಟಿ)ಯನ್ನು ವಿಧಿಸುತ್ತವೆ ಮತ್ತು ಸಂಗ್ರಹಿಸುತ್ತವೆ.
ಸರಕು ಮತ್ತು ಸೇವೆಗಳ ಅಂತರರಾಜ್ಯ ಪೂರೈಕೆಯ ಮೇಲೆ ಕೇಂದ್ರವು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ವಿಧಿಸುತ್ತದೆ ಮತ್ತು ಸರಕು ಅಥವಾ ಸೇವೆಯನ್ನು ಬಳಸುವ ರಾಜ್ಯಕ್ಕೆ ರಾಜ್ಯದ ತೆರಿಗೆಯ ಪಾಲನ್ನು ಹಂಚುತ್ತದೆ.