Published on: November 29, 2022
‘ಸರಾಸ್ (ಎಸ್ಎಆರ್ಎಎಸ್) –3’
‘ಸರಾಸ್ (ಎಸ್ಎಆರ್ಎಎಸ್) –3’
ಸುದ್ದಿಯಲ್ಲಿ ಏಕಿದೆ?
ಬ್ರಹ್ಮಾಂಡದ ಉಗಮದ ಹಂತದಲ್ಲಿ ಹುಟ್ಟಿದ ಮೊದಲ ನಕ್ಷತ್ರಗಳು ಮತ್ತು ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ‘ಸರಾಸ್–3’ (ಎಸ್ಎಆರ್ಎಎಸ್–3) ರೇಡಿಯೊ ದೂರದರ್ಶಕ ಸುಳಿವು ನೀಡಿದೆ ಎಂದು ರಾಮನ್ ಸಂಶೋಧನಾ ಸಂಸ್ಥೆ ತಿಳಿಸಿದೆ.
‘ಸರಾಸ್–3’ ರೇಡಿಯೊ ದೂರದರ್ಶಕ
- ನಿರ್ಮಾಣ : ಭಾರತದ ರಾಮನ್ ಸಂಶೋಧನಾ ಸಂಸ್ಥೆ
- ಅಧ್ಯಯನ :ಈ ದೂರದರ್ಶಕ ಮೂಲಕ 20 ಕೋಟಿ ವರ್ಷಗಳ ಹಿಂದೆ ‘ಮಹಾಸ್ಫೋಟದಿಂದಾಗಿ (ಬಿಗ್ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದ ವಿದ್ಯಮಾನ, ಆ ಬಳಿಕ ಹುಟ್ಟಿದ ನಕ್ಷತ್ರಗಳು ಮತ್ತು ಸೃಷ್ಟಿಯಾದ ಆಕಾಶಗಂಗೆಗಳ ಸ್ವರೂಪಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.
- ‘ನೀರಿನ ಮೇಲೆ ತೇಲುವ ಸಾಮರ್ಥ್ಯ ಹೊಂದಿದೆ’.
- ಉದ್ದೇ ಶ : ‘ಹೈಡ್ರೊಜನ್ ಪರಮಾಣುಗಳಿಂದ 21 ಸೆಂಟಿ ಮೀಟರ್ ತರಂಗಾಂತರದಲ್ಲಿ (1.4 ಗಿಗಾ ಹರ್ಟ್ಸ್ ) ಹೊರಹೊಮ್ಮುವ ವಿಕಿರಣಗಳಲ್ಲಿ ಅನ್ವೇ ಷಣೆ ಕೈಗೊಳ್ಳುವುದು ಈ ಉಪಕರಣದ ಮೂಲ ಉದ್ದೇಶವಾಗಿದೆ..
ರೇಡಿಯೊ ದೂರದರ್ಶಕದ ಪರೀಕ್ಷೆ
- ‘ಸರಾಸ್’ ರೇಡಿಯೋ ದೂರದರ್ಶಕವನ್ನು ಹಲವು ಸ್ಥಳಗಳಲ್ಲಿ ಪರೀಕ್ಷೆ ಕೈಗೊಳ್ಳಲಾಯಿತು. ಮೊದಲ ಬಾರಿ ಅನಂತಪುರ ಜಿಲ್ಲೆಯ ಟಿಂಬಕ್ಟುನಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ, ಭಾರತೀಯ ಖಗೋಳ ವೀಕ್ಷಣಾಲಯದ ನೆರವಿನಿಂದ ಲಡಾಕ್ನಲ್ಲಿ ಪ್ರಯೋಗ ಕೈಗೊಳ್ಳಲಾಯಿತು’.
- ಚಿಕ್ಕಬಳ್ಳಾ ಪುರದಲ್ಲಿ ಮೊದಲ ಪರೀಕ್ಷೆ :‘ಸರಾಸ್ ದೂರದರ್ಶಕದ ಪರೀಕ್ಷೆಯನ್ನು 2020ರ ಆರಂಭದಲ್ಲಿ ಚಿಕ್ಕಬಳ್ಳಾಪುರದ ದಂಡಿಗಾನಹಳ್ಳಿ ಕೆರೆ ಪ್ರದೇಶದಲ್ಲಿ ಮತ್ತು ಶರಾವತಿ ಹಿನ್ನೀ ರಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು.. ಆಕಾಶದಿಂದ ಹೊರಹೊಮ್ಮುವ ರೇಡಿಯೊ ತರಂಗಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಈ ಪ್ರಯೋಗಗಳು ನೆರವಾದವು.
ರಾಮನ್ ಸಂಶೋಧನಾ ಸಂಸ್ಥೆ
- ವೈಜ್ಞಾನಿಕ ಸಂಶೋಧನೆಗಾಗಿ ಒಂದು ಸಂಸ್ಥೆಯಾಗಿದೆ
- ಸ್ಥಾಪನೆ:1948
- ಸ್ಥಳ: ಬೆಂಗಳೂರು
- ಸ್ಥಾಪಿಸಿದವರು: ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ. ರಾಮನ್
- ಅಂಗಸಂಸ್ಥೆ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ
- ಇದು ಸರ್ ಸಿ.ವಿ. ರಾಮನ್ ಅವರ ಖಾಸಗಿ ಒಡೆತನದ ಸಂಸ್ಥೆಯಾಗಿ ಪ್ರಾರಂಭವಾದರೂ, ಈಗ ಭಾರತ ಸರ್ಕಾರದಿಂದ ಧನಸಹಾಯ ಪಡೆಯುತ್ತದೆ.