Published on: April 23, 2022

ಸರ್ಮತ್ ಹೆಸರಿನ ಖಂಡಾಂತರ ಕ್ಷಿಪಣಿ

ಸರ್ಮತ್ ಹೆಸರಿನ ಖಂಡಾಂತರ ಕ್ಷಿಪಣಿ

ಸುದ್ಧಿಯಲ್ಲಿ ಏಕಿದೆ?  ಉಕ್ರೇನ್‌ನೊಂದಿಗೆ ಯುದ್ಧದಲ್ಲಿ ನಿರತವಾಗಿರುವಾಗಲೇ ರಷ್ಯಾ ಅತ್ಯಂತ ವಿಧ್ವಂಸಕಾರಿ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ. ಸರ್ಮತ್ ಹೆಸರಿನ ಈ ಖಂಡಾಂತರ ಕ್ಷಿಪಣಿ, ಪರಮಾಣು ಸಿಡಿತಲೆಗಳನ್ನು ಹೊತ್ತು ಇಡೀ ಭೂಮಿಯನ್ನು ಒಂದು ಸುತ್ತು ಸುತ್ತಬಲ್ಲ ಸಾಮರ್ಥ್ಯ ಹೊಂದಿದೆ.

ಮುಖ್ಯಾಂಶಗಳು

  • ಪಾಶ್ಚಿಮಾತ್ಯ ವಿಶ್ಲೇಷಕರಿಂದ ‘ಸೈತಾನ್(ರಾಕ್ಷಸ) 2’ ಎಂದು ಕರೆಸಿಕೊಂಡಿರುವ ಸರ್ಮತ್ ಖಂಡಾಂತರ ಕ್ಷಿಪಣಿ, ಕಿನ್ಜಾಲ್ ಮತ್ತು ಅವಂಗಾರ್ಡ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಸಹ ಒಳಗೊಂಡಿದೆ. ಪುಟಿನ್ ಈ ಕ್ಷಿಪಣಿಯನ್ನು ‘ಅಜೇಯ’ ಎಂದು ಕರೆದಿದ್ದಾರೆ. ಕಿನ್ಜಾಲ್ ಕ್ಷಿಪಣಿಯನ್ನು ರಷ್ಯಾ ಮೊದಲ ಬಾರಿಗೆ ಉಕ್ರೇನ್ ವಿರುದ್ಧ ಈಗಾಗಲೇ ಬಳಸಿದೆ.
  • ಉತ್ತರ ರಷ್ಯಾದ ಪ್ಲೆಸೆಟ್ಸ್ಕ್ ಕಾಸ್ಮೋಡ್ರೋಮ್‌ನಲ್ಲಿ ಸರ್ಮತ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಲಾಗಿದೆ. ಸರ್ಮತ್ ಕ್ಷಿಪಣಿಯು ರಷ್ಯಾದ ಪೂರ್ವದಲ್ಲಿರುವ ಕಂಚಟ್ಕಾ ಪರ್ಯಾಯ ದ್ವೀಪದ ಕುರಾ ಪರೀಕ್ಷಾ ಶ್ರೇಣಿಗೆ ತರಬೇತಿ ಸಿಡಿತಲೆಗಳನ್ನು ಯಶಸ್ವಿಯಾಗಿ ತಲುಪಿಸಿತು
  • 200 ಟನ್‌ಗಳಿಗಿಂತ ಹೆಚ್ಚು ತೂಕ ಮತ್ತು ಬಹು ಸಿಡಿತಲೆಗಳನ್ನು ಸಾಗಿಸಲು ಸಮರ್ಥವಾಗಿರುವ ಸರ್ಮತ್, ಭೂಮಿಯ ಮೇಲಿನ ಯಾವುದೇ ಭಾಗದಲಲಿರುವ ಗುರಿಯನ್ನು ತಲುಪಬಹುದು