Published on: June 6, 2022

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್

ಸುದ್ಧಿಯಲ್ಲಿ ಏಕಿದೆ?

ಬೈಯಪ್ಪನಹಳ್ಳಿ ಬಳಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೇ ಟರ್ಮಿನಲ್ ನಲ್ಲಿ ಜೂನ್ 6  ರಂದು ರೈಲು ಸಂಚಾರ ಆರಂಭಗೊಳ್ಳಲಿದೆ.

ಮುಖ್ಯಾಂಶಗಳು

  • ಬಾಣಸವಾಡಿ-ಎರ್ನಾಕುಲಂ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ (ರೈಲು ಸಂಖಅಯೆ 12684) ರೈಲು ನೂತನ ಟರ್ಮಿನಲ್ ನಿಂದ ಕಾರ್ಯಾಚರಣೆ ನಡೆಸುವ ಮೊದಲ ರೈಲಾಗಿದೆ.
  • ಸರ್‌. ಎಂ. ವಿ. ಟರ್ಮಿನಲ್ ಮಾದರಿಯಲ್ಲಿ ಮಧ್ಯಪ್ರದೇಶದ ಹಬೀಬ್ ಗಂಜ್ ಮತ್ತು ಗುಜರಾತ್ ನ ಗಾಂಧಿನಗರದಲ್ಲಿ ಟರ್ಮಿನಲ್ ನಿರ್ಮಿಸಲಾಗಿದೆ. ಇವೆರಡು ಟರ್ಮಿನಲ್ ಗಳು ಸರ್‌. ಎಂ. ವಿ. ಟರ್ಮಿನಲ್ ಸಿದ್ಧವಾದ ನಂತರ ನಿರ್ಮಾಣಗೊಂಡಿದ್ದರೂ ಸಹ ಈಗಾಗಲೇ ಉದ್ಘಾಟನೆಗೊಂಡಿವೆ.

ಟರ್ಮಿನಲ್ನ ವಿಶೇಷತೆಗಳು

  • ವಿಮಾನ ನಿಲ್ದಾಣದ ಮಾದರಿಯಲ್ಲಿ ಸರ್‌. ಎಂ. ವಿ. ಟರ್ಮಿನಲ್ ನಿರ್ಮಿಸಲಾಗಿದೆ. 314 ಕೋಟಿ ರೂ. ವೆಚ್ಚದಲ್ಲಿ 4,200 ಚದರ ಅಡಿ ವಿಸ್ತೀರ್ಣದಲ್ಲಿ ಟರ್ಮಿನಲ್ ನಿರ್ಮಾಣಗೊಂಡಿದೆ.
  • ನಿತ್ಯ 50,000 ಪ್ರಯಾಣಿಕರು ತೆರಳಬಹುದಾದ ಸಾಮರ್ಥ್ಯ ಹೊಂದಿದೆ. ಇಲ್ಲಿ ಒಟ್ಟು ಏಳು ಪ್ಲಾಟ್‌ಫಾರ್ಮ್ ಗಳು ಇವೆ.
  • ಪ್ರತಿ ದಿನ 50 ರೈಲುಗಳು ಟರ್ಮಿನಲ್ ನಿಂದ ಕಾರ್ಯನಿರ್ವಹಿಸಬಹುದಾಗಿದೆ.
  • ಬೆಂಗಳೂರು ವಿಮಾನ ನಿಲ್ದಾಣದ ಮಾದರಿಯಲ್ಲಿ ಸೆಂಟ್ರಲೈಸ್ಡ್ ಎಸಿ ಸೌಲಭ್ಯ ಹೊಂದಿದೆ.
  • ಕೆಂಪೇಗೌಡ ವಿಮಾನ ನಿಲ್ದಾಣ ಮಾದರಿಯ ಹೊರವಿನ್ಯಾಸ
  • ದೇಶದ ಮೂರನೇ ವಿಶ್ವ ದರ್ಜೆಯ ಟರ್ಮಿನಲ್ ಎಂಬ ಹೆಗ್ಗಳಿಕೆ
  • ಸಂಗೊಳ್ಳಿ ರಾಯಣ್ಣ, ಯಶವಂತಪುರ ಟರ್ಮಿನಲ್ ಬಳಿಕ ನಗರದ ಮೂರನೇ ರೈಲ್ವೆ ಟರ್ಮಿನಲ್
  • ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯನೀರು ಸಂಸ್ಕರಣಾ ಘಟಕ ಅಳವಡಿಕೆ

ಮಹತ್ವ

  • ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಯಶವಂತಪುರ ಜಂಕ್ಷನ್‌ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬೈಯಪ್ಪನಹಳ್ಳಿ ಮತ್ತು ಬಾಣಸವಾಡಿ ರೈಲು ನಿಲ್ದಾಣಗಳ ನಡುವೆ ಈ ನೂತನ ರೈಲ್ವೆ ಟರ್ಮಿನಲ್‌ ಸ್ಥಾಪಿಸಲಾಗಿದೆ.