Published on: October 7, 2023
ಸಸ್ಯಮೂಲ ಚರ್ಮ ತಂತ್ರಜ್ಞಾನ
ಸಸ್ಯಮೂಲ ಚರ್ಮ ತಂತ್ರಜ್ಞಾನ
ಸುದ್ದಿಯಲ್ಲಿ ಏಕಿದೆ? ನಿಜವಾದ ಚರ್ಮ ಮತ್ತು ಸಿಂಥೆಟಿಕ್ ಚರ್ಮವನ್ನೇ ಹೋಲುವ ಹಾಗೂ ಅಂತಹ ಅನುಭವವನ್ನೇ ನೀಡುವ ‘ಸಸ್ಯಮೂಲ ಚರ್ಮ’ವನ್ನು ಸಿಎಸ್ಐಆರ್ ಅಭಿವೃದ್ಧಿಪಡಿಸಿದೆ.
ಮುಖ್ಯಾಂಶಗಳು
- ಸಿಎಸ್ಐಆರ್ನ ತಿರುವನಂತಪುರದ ಪ್ರಯೋಗಾಲಯದಲ್ಲಿ ಅಂತಹ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ.
- ತಿರುವನಂತಪುರದ ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ಡಿಸಿಪ್ಲಿನರಿ ಸೈನ್ಸ್ ಆ್ಯಂಡ್ ಟೆಕ್ನಾಲಜಿ–ಎನ್ಐಐಎಸ್ಟಿ’ ‘ಸಸ್ಯಮೂಲ ಚರ್ಮ’ದ ತಂತ್ರಜ್ಞಾನವನ್ನು ಪುಣೆ ಮೂಲದ ಕಂಪನಿಯೊಂದಕ್ಕೆ ವರ್ಗಾವಣೆ ಮಾಡಿದೆ. ಜತೆಗೆ ಈ ಸಂಬಂಧ ಬೌದ್ಧಿಕ ಹಕ್ಕುಸ್ವಾಮ್ಯ ಪಡೆಯಲು ಎರಡು ಅರ್ಜಿಗಳನ್ನು ಸಲ್ಲಿಸಿದೆ.
- ನಾರನ್ನು ಪರಸ್ಪರ ಜೋಡಿಸುವ ವಿಧಾನ ಮತ್ತು ಅದಕ್ಕೆ ಬಳಸುವ ವಸ್ತುಗಳ ಸಂಬಂಧ ಒಂದು ಬೌದ್ಧಿಕ ಹಕ್ಕುಸ್ವಾಮ್ಯ ಅರ್ಜಿಯನ್ನು ಸಲ್ಲಿಸಲಾಗಿದೆ. ನಾರಿನ ಹಾಳೆಗಳನ್ನು ಬಿಸಿಮಾಡುವ ಉಷ್ಣಸಾಧನಕ್ಕೆ ಮತ್ತೊಂದು ಬೌದ್ಧಿಕ ಹಕ್ಕುಸ್ವಾಮ್ಯ ಅರ್ಜಿಯನ್ನು ಸಲ್ಲಿಸಲಾಗಿದೆ.
- ‘ಸಸ್ಯಮೂಲ ಚರ್ಮ’ವನ್ನು ದೆಹಲಿಯ ಭಾರತ ಮಂಟಪದಲ್ಲಿ ನಡೆದಿದ್ದ ವಸ್ತುಪ್ರದರ್ಶನದಲ್ಲಿಪ್ರದರ್ಶಿಸಲಾಗಿತ್ತು.
ಇದನ್ನು ಹೇಗೆ ತಯಾರಿಸುವುದು?
- ಕೃಷಿ ತ್ಯಾಜ್ಯ, ಮಾವು, ಪಪ್ಪಾಯ, ಕಳ್ಳಿ, ಕಾಫಿ, ಸೇಬು, ಅನನಾಸು, ಲಾವಂಚಾ, ಭತ್ತದ ಹುಲ್ಲು ಮತ್ತು ಕೆಲವು ಜೊಂಡು ಸಸ್ಯಗಳಿಂದ ನಾರನ್ನು ತೆಗೆದು ಸಂಸ್ಕರಿಸಬಹುದು. ಆ ನಾರನ್ನು ಪರಸ್ಪರ ಜೋಡಿಸುವ ಮೂಲಕ ನಾರಿನ ಹಾಳೆಗಳನ್ನು ತಯಾರಿಸಲಾಗುತ್ತದೆ. ಆ ಹಾಳೆಗಳನ್ನು ಅತಿ ಉಷ್ಣತೆಯಲ್ಲಿ ಬಿಸಿ ಮಾಡಿದಾಗ ‘ಸಸ್ಯಮೂಲ ಚರ್ಮ’ ಸಿದ್ಧವಾಗುತ್ತದೆ.
ಇದರ ವಿಶೇಷತೆ
- ಸಸ್ಯಮೂಲ ಚರ್ಮವು ಹಿಗ್ಗುವ ಗುಣ ಹೊಂದಿದೆ. ಜತೆಗೆ ಇದು ನೀರು, ಅತಿಉಷ್ಣತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಚರ್ಮ ಮತ್ತು ಸಿಂಥೆಟಿಕ್ ಚರ್ಮದಂತೆಯೇ ಕಾಣುತ್ತದೆ.
- ಇದು ಚರ್ಮ ಮತ್ತು ಸಿಂಥೆಟಿಕ್ ಚರ್ಮಕ್ಕಿಂತ ಶೇ 50ರಷ್ಟು ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ.
- ಸಸ್ಯಮೂಲವಾದ್ದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ: ಚರ್ಮ ಮತ್ತು ಸಿಂಥೆಟಿಕ್ ಚರ್ಮದ ಸಂಸ್ಕರಣೆ ಮತ್ತು ತಯಾರಿಕೆಯಲ್ಲಿರಾಸಾಯನಿಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಚರ್ಮವನ್ನು ಹದ ಮಾಡುವಲ್ಲಿ ನೀರನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಸಸ್ಯಮೂಲ ಚರ್ಮವು ಇವೆಲ್ಲವನ್ನೂ ತಪ್ಪಿಸುತ್ತದೆ.
CSIR NIIST ತಿರುವನಂತಪುರಂ
- ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಅಂಡ್ ಟೆಕ್ನಾಲಜಿಯು ಭಾರತದ ಸಿಎಸ್ಐಆರ್‌ನ ಘಟಕ ಪ್ರಯೋಗಾಲಯವಾಗಿದೆ.
- ಕೃಷಿ ಸಂಸ್ಕರಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
- ಸ್ಥಾಪನೆ: 1975
- ಪೋಷಕ ಸಂಸ್ಥೆ: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)