Published on: January 20, 2022
‘ಸಾರಥಿ’ಆಪ್
‘ಸಾರಥಿ’ಆಪ್
ಸುದ್ಧಿಯಲ್ಲಿ ಏಕಿದೆ ? ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಈಗ ‘ಸಾರಥಿ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಮುಖ್ಯಾಂಶಗಳು
- ಬಂಡವಾಳ ಮಾರುಕಟ್ಟೆ ಬಗ್ಗೆ ಹೂಡಿಕೆದಾರರಲ್ಲಿ ಸುಲಭವಾಗಿ ಜಾಗೃತಿ ಮೂಡಿಸಲು ಇದನ್ನು ಅಭಿವೃದ್ದಿ ಪಡಿಸಲಾಗಿದೆ.
- ಹೂಡಿಕೆದಾರರಿಗೆ ಭದ್ರತಾ ಮಾರುಕಟ್ಟೆಗಳ ಮೂಲಭೂತ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ, ಜ್ಞಾನವನ್ನು ಇದು ಒದಗಿಸಲಿದೆ
- ಷೇರು ಪೇಟೆಗಳಲ್ಲಿ ಇತ್ತೀಚೆಗೆ ಚಿಲ್ಲರೆ ಹೂಡಿಕೆದಾರರ ಸಂಖ್ಯೆ ಹೆಚ್ಚಳ ಜೊತೆಗೆ, ಹೂಡಿಕೆಯ ಒಳಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ್ಯಪ್ ಬಿಡುಗಡೆಗೊಳಿಸಲಾಗಿದೆ
- ಕೆವೈಸಿ ಪ್ರಕ್ರಿಯೆ, ವಹಿವಾಟು ಮತ್ತು ಇತ್ಯರ್ಥ, ಮ್ಯೂಚುವಲ್ ಫಂಡ್, ಈಚಿನ ಮಾರುಕಟ್ಟೆ ಬೆಳವಣಿಗೆಗಳು, ಹೂಡಿಕೆದಾರರ ಸಮಸ್ಯೆ ಇತ್ಯರ್ಥಪಡಿಸುವ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಈ ಆ್ಯಪ್ ಅರಿವು ಮೂಡಿಸಲಿದೆ. ಈಗ ಈ ಆ್ಯಪ್, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಕೆಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಈ ಆ್ಯಪ್ ಲಭ್ಯವಾಗಲಿದೆ
- ಆ್ಯಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಇದು ಲಭ್ಯವಿದೆ.