Published on: October 25, 2021
ಸಾಲ್ಮೊನೆಲ್ಲಾ ಸೋಂಕಿನ ಭೀತಿ!
ಸಾಲ್ಮೊನೆಲ್ಲಾ ಸೋಂಕಿನ ಭೀತಿ!
ಸುದ್ಧಿಯಲ್ಲಿ ಏಕಿದೆ? ಅಮೆರಿಕದಲ್ಲಿ ಕಚ್ಚಾ ಈರುಳ್ಳಿ ಸಾಲ್ಮೊನೆಲ್ಲಾ ಸೋಂಕಿನ ಹರಡುವಿಕೆಗೆ ಕಾರಣವಾಗಿದೆ. ಕರುಳಿನ ಕೆಲಸಕ್ಕೆ ಹಾನಿ ಮಾಡುವ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಈ ಕಳಪೆ ಗುಣಮಟ್ಟದ ಈರುಳ್ಳಿಯಿಂದ ಪ್ರಸರಿಸಿದೆ ಎನ್ನಲಾಗಿದೆ.
- ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಕರುಳಿನಲ್ಲಿ ಸೇರಿಕೊಂಡು ಹೊಟ್ಟೆ ಕೆಡಿಸುವುದಕ್ಕೆ ಕಾರಣವಾಗುತ್ತದೆ. ಈ ಸಾಂಕ್ರಾಮಿಕವು ಮೆಕ್ಸಿಕೋದ ಚಿಹೌಹುವಾದಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯಿಂದ ಹರಡಿರುವುದು ಪತ್ತೆಯಾಗಿದೆ.
ಏನಿದು ಸಾಲ್ಮೊನೆಲ್ಲಾ ಸೋಂಕು?
- ಸಾನ್ಮೊನೆಲ್ಲಾಸಿಸ್ ಅಥವಾ ಸಾಲ್ಮೊನೆಲ್ಲಾ ಸೋಂಕು, ಸಾಲ್ಮೊನೆಲ್ಲಾ ಸಮೂಹದ ಬ್ಯಾಕ್ಟೀರಿಯಾದಿಂದ ಹರಡುವ ಕಾಯಿಲೆಯಾಗಿದೆ. ಈ ಬ್ಯಾಕ್ಟೀರಿಯಾ ಸಾಮಾನ್ಯವಾಗಿ ಆಹಾರ ಸೇವನೆಯ ಬಳಿಕದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
- ಅತಿಸಾರ, ಜ್ವರ, ಹೊಟ್ಟೆ ನೋವು ಸೇರಿದಂತೆ ಸಾಲ್ಮೊನೆಲ್ಲಾದ ಲಕ್ಷಣಗಳು ಕಂಡುಬಂದರೆ ಆಸ್ಪತ್ರೆಗೆ ದಾಖಲಾಗುವುದು ಒಳಿತು. ಕಲುಷಿತಗೊಂಡ ಆಹಾರ ಸೇವಿಸಿದ ಆರು ಗಂಟೆಯಿಂದ ಆರು ದಿನಗಳ ಅವಧಿಯಲ್ಲಿ ಈ ಲಕ್ಷಣಗಳು ಕಂಡುಬರಬಹುದು.
- ಈ ಬ್ಯಾಕ್ಟೀರಿಯಾದ ಕೆಲವು ಪ್ರಭೇದಗಳು ಮೂತ್ರ, ರಕ್ತ, ಮೂಳೆಗಳು, ಕೀಲು ಅಥವಾ ನರ ವ್ಯವಸ್ಥೆಗೂ ಹಾನಿ ಮಾಡಬಹುದು ಮತ್ತು ತೀವ್ರ ಕಾಯಿಲೆಗೆ ಎಡೆಮಾಡಿಕೊಡಬಹುದು.