Published on: August 7, 2021
ಸಾಲ ವಸೂಲಾತಿಯಲ್ಲಿ ಬ್ಯಾಂಕ್ಗಳ ಮುನ್ನಡೆ
ಸಾಲ ವಸೂಲಾತಿಯಲ್ಲಿ ಬ್ಯಾಂಕ್ಗಳ ಮುನ್ನಡೆ
ಸುದ್ಧಿಯಲ್ಲಿ ಏಕಿದೆ ? ಬ್ಯಾಂಕ್ಗಳು ಲಕ್ಷಾಂತರ ಕೋಟಿ ರೂ. ಸುಸ್ತಿ ಸಾಲವನ್ನು (ಎನ್ಪಿಎ) ಮರು ವಸೂಲು ಮಾಡಿಕೊಳ್ಳಲು ಯಶಸ್ವಿಯಾಗಿವೆ.
ಇದು ಹೇಗೆ ಸಾಧ್ಯವಾಯಿತು?
ಐಬಿಸಿ ಕಾಯಿದೆಯ ಅಸ್ತ್ರ
- ಕಳೆದ 2016ರಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ ಕಂಪನಿಗಳ ದಿವಾಳಿ ಕಾಯಿದೆ (ಇನ್ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್ರಪ್ಟಸಿ ಕೋಡ್) ಮತ್ತು ಇತರ ಆಡಳಿತಾತ್ಮಕ ಸುಧಾರಣೆಗಳಿಂದ ಬ್ಯಾಂಕ್ಗಳಿಗೆ ಸುಸ್ತಿ ಸಾಲಗಳ ಮರು ವಸೂಲಾತಿಗೆ ಹಾದಿ ಸುಗಮವಾಗಿದೆ. ಸುಮಾರು 1 ಲಕ್ಷ ಕೋಟಿ ರೂ.ಗಳ ಸುಸ್ತಿ ಸಾಲವನ್ನು ತಾಂತ್ರಿಕವಾಗಿ ರೈಟ್ ಆಫ್ ಎಂದು ವರ್ಗೀಕರಿಸಲಾಗಿದ್ದು, ಅವುಗಳ ಮರು ವಸೂಲಾತಿಯೂ ನಡೆಯಲಿದೆ
ದೊಡ್ಡ ಕಂಪನಿಗಳ ಎನ್ಪಿಎಗೆ ಅಂಕುಶ
- ದೊಡ್ಡ ಕಂಪನಿಗಳ ವಸೂಲಾಗದ ಸಾಲ (ಎನ್ಪಿಎ) ನಿರೀಕ್ಷೆಯಷ್ಟು ಹೆಚ್ಚಳವಾಗದಿರುವುದು ಕಳೆದ ಕೆಲ ವರ್ಷಗಳಲ್ಲಿಉಂಟಾಗಿರುವ ಸಕಾರಾತ್ಮಕ ಬೆಳವಣಿಗೆ. ಹೀಗಾಗಿ ಹೊಸ ಸಾಲ ವಿತರಣೆಗೆ ಬ್ಯಾಂಕ್ಗಳಿಗೆ ನಿಧಿಯ ಕೊರತೆ ಕಡಿಮೆಯಾಗುತ್ತಿದೆ. ಸುಸ್ತಿ ಸಾಲಗಳ ನಿರ್ವಹಣೆಗೆ ಪ್ರತ್ಯೇಕವಾಗಿ ಇಡಬೇಕಾದ ಹಣದ ಮೊತ್ತ ಕಡಿಮೆಯಾಗುತ್ತಿದ್ದು, ಲಾಭಾಂಶದ ಸುಧಾರಣೆಗೆ ಕಾರಣವಾಗಿದೆ
- ಕಿಂಗ್ಫಿಶರ್, ಭೂಷಣ್ ಸ್ಟೀಲ್, ಎಸ್ಸಾರ್ ಸ್ಟೀಲ್ ಮುಂತಾದ ಕಂಪನಿಗಳು ಹೊಂದಿದ್ದ ಸುಸ್ತಿ ಸಾಲ ಮರು ವಸೂಲಾಗಿದೆ.