Published on: January 5, 2023

ಸಾವಿತ್ರಿಬಾಯಿ ಫುಲೆ

ಸಾವಿತ್ರಿಬಾಯಿ ಫುಲೆ

ಸುದ್ದಿಯಲ್ಲಿ ಏಕಿದೆ?  ಮಹಿಳಾ ಶಿಕ್ಷಣದ ಪ್ರವರ್ತಕಿ ಸಾವಿತ್ರಿಬಾಯಿ ಫುಲೆ ಅವರ 174 ನೇ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಟ್ವೀ ಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ 18ನೇ ಶತಮಾನದಲ್ಲಿ ವಸಾಹತುಶಾಹಿ ಸಾಮ್ರಾಜ್ಯದ ವಿರುದ್ಧ ಹೋರಾಡಿದ ತಮಿಳುನಾಡಿನ ವೇಲು ನಾಚಿಯಾರ್ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಮುಖ್ಯಾಂಶಗಳು

  • ‘ಸಾವಿತ್ರಿಬಾಯಿ ಫುಲೆ ಅವರು ನಮ್ಮ ನಾರಿ ಶಕ್ತಿಯ ಅದಮ್ಯ ಚೈತನ್ಯ. ಅವರು ಸ್ಫೂರ್ತಿದಾಯಕರಾಗಿದ್ದಾರೆ, ಫುಲೆ ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಟ್ಟಿದ್ದರು. ಸಮಾಜ ಸುಧಾರಣೆ ಮತ್ತು ಸಮುದಾಯ ಸೇವೆಯತ್ತ ಅವರ ಗಮನ ಹೆಚ್ಚಿನದಾಗಿತ್ತು ಎಂದು ಸ್ಮರಿಸಿದ್ದಾರೆ.
  • ಜನರಿಗೆ ನ್ಯಾಯವನ್ನು ಒದಗಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ವಸಾಹತುಶಾಹಿಯನ್ನು ತೀವ್ರವಾಗಿ ವಿರೋಧಿಸಿದ ಅವರು, ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದಾರೆ’.

ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)

  • ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಎಂದೇ ಪ್ರಸಿದ್ಧರಾಗಿದ್ದಾರೆ
  • ಜನನ- ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ ‘ನೈಗಾಂನ್’ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ.
  • ವಿವಾಹ – ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು.
  • ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು.
  • ಶಿಕ್ಷಣ- ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು.
  • ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾದರು.
  • ಜೀವನ
  • ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.
  • ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.
  • ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ,‌ ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿದೆ.

ರಾಣಿ ವೇಲು ನಾಚಿಯಾರ್ (3 ಜನವರಿ 1730 – 25 ಡಿಸೆಂಬರ್ 1796)

  • ಅವರು 1780–1790 ರವರೆಗೆ ಶಿವಗಂಗಾ ಸಾಮ್ರಾಜ್ಯದ ರಾಣಿಯಾಗಿದ್ದರು.  ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಯುದ್ಧ ಮಾಡಿದ ಮೊದಲ ಭಾರತೀಯ ರಾಣಿ.
  • ಜನನ 3 ಜನವರಿ 1730 ರಾಮನಾಥಪುರಂ, ಶಿವಗಂಗಾ ಸಾಮ್ರಾಜ್ಯ (ಇಂದಿನ ತಮಿಳುನಾಡು, ಭಾರತ)
  • ಇವರು ರಾಮನಾಥಪುರದ ರಾಜಕುಮಾರಿಯಾಗಿದ್ದಳು,  ರಾಜ ಚೆಲ್ಲಮುತ್ತು ವಿಜಯರಗುನಾಥ ಸೇತುಪತಿ ಮತ್ತು ರಾಣಿ ಸಕಂಧಿಮುತ್ತತಲ್ ಅವರ ಒಬ್ಬಳೆ ಮಗಳಾಗಿದ್ದಳು .
  • ಅವಳು ಶಿವಗಂಗೈ ರಾಜನನ್ನು ಮದುವೆಯಾದಳು, 1780 ರಲ್ಲಿ ಬ್ರಿಟಿಷರೊಂದಿಗಿನ ಯುದ್ಧದಲ್ಲಿ ಅವಳ ಪತಿ ಮುತ್ತು ವಡುಗನಾಥ ಪೆರಿಯಾವುದಯ ತೇವರ್ ಕೊಲ್ಲಲ್ಪಟ್ಟಾಗ, ಅವರ ಉತ್ತಾರಾಧಿಕಾರಿಯಾಗಿ ಪಟ್ಟವೇರುತ್ತಾರೆ.
  • ಆಕೆಯನ್ನು ತಮಿಳರು ವೀರಮಂಗೈ (“ಧೈರ್ಯಶಾಲಿ”) ಎಂದು ಕರೆಯುತ್ತಾರೆ. ಹೈದರ್ ಅಲಿಯ ಸೈನ್ಯ, ಸಾಮಂತರು, ಮಾರುತು ಸಹೋದರರು, ದಲಿತ ಕಮಾಂಡರ್‌ಗಳು ಮತ್ತು ತಾಂಡವರಾಯನ್ ಪಿಳ್ಳೈ ಅವರ ಬೆಂಬಲದೊಂದಿಗೆ ಅವಳು ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಡಿದಳು.