Published on: June 28, 2023

ಸಿಂಹ ಬಾಲದ ಸಿಂಗಳಿಕಗಳು

ಸಿಂಹ ಬಾಲದ ಸಿಂಗಳಿಕಗಳು

ಸುದ್ದಿಯಲ್ಲಿ ಏಕಿದೆ? ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ.

ಮುಖ್ಯಾಂಶಗಳು

  • ಇಲ್ಲಿ 730 ಸಿಂಗಳಿಕಗಳು 32 ಗುಂಪುಗಳಲ್ಲಿ ವಾಸಿಸುತ್ತಿವೆ.
  • ಇತ್ತೀಚಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಸಿರ್ಸಿ-ಹೊನ್ನಾವರ ಮತ್ತು ಶಿವಮೊಗ್ಗ ಅರಣ್ಯ ವಿಭಾಗಗಳಲ್ಲಿ ಅಧ್ಯಯನ ನಡೆಸಲಾಗಿತ್ತು.
  • ಶಿರಸಿ ಅರಣ್ಯ ವಿಭಾಗದ ಕ್ಯಾದಗಿ ಮತ್ತು ಸಿದ್ದಾಪುರ ಅರಣ್ಯ ವ್ಯಾಪ್ತಿ ಮತ್ತು ಹೊನ್ನಾವರ ಅರಣ್ಯ ವಿಭಾಗದಲ್ಲಿ ಹೊನ್ನಾವರ, ಗೇರುಸೊಪ್ಪ, ಭಟ್ಕಳ ಮತ್ತು ಕುಮಟಾ ಅರಣ್ಯ ವ್ಯಾಪ್ತಿ ಹಾಗೂ ಶಿವಮೊಗ್ಗ ವನ್ಯಜೀವಿ ವಿಭಾಗದ ಕೊಗಾರ್ ಮತ್ತು ಕಾರ್ಗಲ್ ಅರಣ್ಯ ವ್ಯಾಪ್ತಿಯಲ್ಲಿ ಅಧ್ಯಯನ ನಡೆಸಲಾಗಿದೆ.
  • ಶರಾವತಿಯ ಉತ್ತರಕ್ಕೆ ಹೋಲಿಸಿದರೆ ಉತ್ತರ ಕನ್ನಡ  ಸಿಂಹ ಬಾಲದ ಸಿಂಗಳಿಕಗಳ ಸಂರಕ್ಷಣೆಗೆ ಮಹತ್ವದ ಮತ್ತು ಸಂಭಾವ್ಯ ತಾಣ ಎಂದು ಅಧ್ಯಯನದಿಂದ ತಿಳಿದುಬಂದಿದೆ.
  • ಕೆನರಾ ಮತ್ತು ಶಿವಮೊಗ್ಗ ಎರಡೂ ವಲಯಗಳನ್ನು ಒಳಗೊಂಡಿರುವ ಶರಾವತಿ ಕಣಿವೆ ಅಭಯಾರಣ್ಯದಲ್ಲಿ ಇದೇ ಮೊದಲ ಬಾರಿಗೆ ಸಿಂಗಳಿಕ ಕುರಿತು ಅಧ್ಯಯನ ನಡೆಸಲಾಗಿದೆ. ಈ ಹಿಂದೆ ಕೆನರಾ ಸರ್ಕಲ್ ನಲ್ಲಿ ಮಾತ್ರ ಅಧ್ಯಯನ ನಡೆಸಲಾಗಿತ್ತು.

2015 ರ  ಅಧ್ಯಯನ ಪ್ರಕಾರ

  • 600 ಸಿಂಗಳಿಕಗಳು 30 ಗುಂಪುಗಳಲ್ಲಿ ವಾಸಿಸುತ್ತಿದ್ದವು.
  • ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ವ್ಯಾಪಿಸಿರುವ ಶರಾವತಿ ಕಣಿವೆ ಪ್ರದೇಶದಲ್ಲಿ ಈ ಜಾತಿಯ ಸಿಂಗಳಿಕಗಳಿದ್ದು, ಇವುಗಳ ಸಂರಕ್ಷಣೆಗೆ ಅಧ್ಯಯನದಿಂದ ದೊಡ್ಡ ಉತ್ತೇಜನ ಸಿಕ್ಕಿದಂತಾಗಿದೆ.

ಸಿಂಹ ಬಾಲದ ಸಿಂಗಳಿಕ

  • ವಾಂಡರೂ ಎಂದೂ ಕರೆಯಲ್ಪಡುತ್ತದೆ
  • ಎಲ್ಲಿ ಕಂಡುಬರುತ್ತದೆ? ಪಕ್ಷಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುವ ಜಗತ್ತಿನ ಅತ್ಯಂತ ಹಳೆಯ ವಾನರ ಜಾತಿಯ ಪ್ರಾಣಿ. ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಲ್ಲಿ ಇದು ಕಂಡು ಬರುತ್ತದೆ.
  • ಕುಟುಂಬ: ಸೆರ್ಕೊಪಿಥೆಸಿಡೆ
  • ಜಾತಿ: ಎಂ. ಸೈಲೆನಸ್
  • ವೈಜ್ಞಾನಿಕ ಹೆಸರು: ಮಕಾಕಾ ಸೈಲೆನಸ್
  • ಗರ್ಭಾವಸ್ಥೆಯ ಅವಧಿ: 183 ದಿನಗಳು