Published on: April 7, 2023

ಸಿಎಂ ದಿ ಯೋಗಶಾಲಾ’ ಯೋಜನೆ

ಸಿಎಂ ದಿ ಯೋಗಶಾಲಾ’ ಯೋಜನೆ

ಸುದ್ಧಿಯಲ್ಲಿ ಏಕಿದೆ? ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀ ಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಪಂಜಾಬ್ನ ಪಟಿಯಾಲಾ, ಅಮೃತಸರ, ಲುಧಿಯಾನಾ ಮತ್ತು ಫಗ್ವಾರಾಗಳಲ್ಲಿ ‘ಸಿಎಂ ದಿ ಯೋಗಶಾಲಾ’ ಯೋಜನೆಗೆ ಚಾಲನೆ ನೀಡಿದ್ದಾರೆ.

ಮುಖ್ಯಾಂಶಗಳು

  • ಪಂಜಾಬ್ ಸರ್ಕಾರ ಆರಂಭಿಸಿರುವ ಈ ಯೋಜನೆಯಡಿ, ಹೆಲ್ಪ್ಲೈನ್ ಸಂಖ್ಯೆ 7669400500ಕ್ಕೆ ಮಿಸ್ಡ್ ಕಾಲ್ ಮಾಡುವ ಮೂಲಕ ಉಚಿತ ಯೋಗ ಶಿಕ್ಷಕರಿಗಾಗಿ ಮನವಿ ಸಲ್ಲಿಸಬಹುದಾಗಿದೆ.
  • ‘ಸಿಎಂ ದಿ ಯೋಗಶಾಲಾ’ ಯೋಜನೆಯಡಿ ಜನರಿಗೆ ಯೋಗ ಕಲಿಸಲು ಗುರು ರವಿದಾಸ್ ವಿಶ್ವವಿದ್ಯಾಲಯದಲ್ಲಿ 60 ಜನರಿಗೆ ತರಬೇತಿ ನೀಡಲಾಗಿದೆ. ಇದೇವೇಳೆ, ‘ಸಿಎಂ ದಿ ಯೋಗಶಾಲಾ’ ವೆಬ್ಸೈಟ್ ಸಹ ಆರಂಭಿಸಲಾಗಿದೆ.
  • ಈ ಯೋಜನೆಯನ್ನು ಮೊದಲ ಹಂತದಲ್ಲಿ ಪಟಿಯಾಲಾ, ಅಮೃತಸರ, ಲುಧಿಯಾನಾ ಮತ್ತು ಫಗ್ವಾರಾ ನಗರಗಳಲ್ಲಿ ಆರಂಭಿಸಲಾಗಿದೆ. ಬಳಿಕ, ರಾಜ್ಯದ ವಿವಿಧೆಡೆಗೂ ವಿಸ್ತರಿಸಲಾಗುವುದು.
  • ಯಾವುದೇ ಕಾಲೋನಿ ಅಥವಾ ಮೊಹಲ್ಲಾದ ಕನಿಷ್ಠ 25 ಜನರನ್ನೊಳಗೊಂಡ ಸಮೂಹವು ಯೋಗ ಕಲಿಯಲು ಇಚ್ಛಿಸಿದರೆ ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬೇಕು. ಬಳಿಕ, ಪಂಜಾಬ್ ಸರ್ಕಾರವು ಉಚಿತವಾಗಿ ಯೋಗ ಶಿಕ್ಷಕರನ್ನು ಕಳುಹಿಸಲಿದೆ. ಜನರ ಸಮಯ ಹೊಂದಾಣಿಕೆ ಮಾಡಿಕೊಂಡು ಬೆಳಿಗ್ಗೆ ಯೋಗ ಕಲಿಸಲಾಗುತ್ತದೆ