Published on: September 20, 2021

ಸಿಎಜಿ ವರದಿ

ಸಿಎಜಿ ವರದಿ

ಸುದ್ಧಿಯಲ್ಲಿ ಏಕಿದೆ? ಲಿಂಗ ತಾರತಮ್ಯ ನಿವಾರಣೆಗಾಗಿ ಲಿಂಗಾಧಾರಿತ ಬಜೆಟ್‌ ಪರಿಕಲ್ಪನೆಯ ಅಡಿಯಲ್ಲಿ ಕೆಲವು ವರ್ಷಗಳಿಂದ ಈಚೆಗೆ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುದಾನ ಘೋಷಿಸಿದ್ದರೂ, ವಾಸ್ತವಿಕ ವೆಚ್ಚದಲ್ಲಿ ಕುಸಿತವಾಗಿದೆ. ಲಿಂಗಾಧಾರಿತ ಬಜೆಟ್‌ ಘೋಷಣೆಗೆ ಸೀಮಿತವಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ವರದಿಯಲ್ಲಿ ಏನಿದೆ ?

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅನುದಾನದ ಹಂಚಿಕೆ 2016–17 ರಿಂದಲೂ ಜಾಸ್ತಿಯಾಗಿತ್ತು. ಆದರೆ, 2019–20 ರಲ್ಲಿ ತುಸು ಇಳಿಕೆ ಕಂಡುಬಂದಿದೆ. ವಾಸ್ತವಿಕ ವೆಚ್ಚದಲ್ಲಿ 2015–16 ಹೊರತುಪಡಿಸಿದರೆ ಎಲ್ಲ ವರ್ಷಗಳಲ್ಲೂ ಕಡಿಮೆಯೇ ಇತ್ತು ಎಂಬುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ.
  • ಅಪ್ರಾಪ್ತ ಬಾಲಕಿಯರ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ‘ಸಬಲ’ ಯೋಜನೆಗೆ 2018–19ರಲ್ಲಿ ₹23 ಕೋಟಿ ಹಂಚಿಕೆ ಮಾಡಲಾಗಿತ್ತು. 2019–20 ರಲ್ಲಿ ಈ ಯೋಜನೆಯ ಅನುದಾನವನ್ನು ₹9 ಕೋಟಿಗೆ ಹೆಚ್ಚಿಸಿದ್ದರೂ, ವಾಸ್ತವವಾಗಿ ಮಾಡಿರುವ ವೆಚ್ಚ ₹76 ಲಕ್ಷ (ಶೇಕಡ 8.44) ಮಾತ್ರ.
  • ಹಾಲುಣಿಸುವ ತಾಯಂದಿರು ಮತ್ತು ಗರ್ಭಿಣಿಯರ ಆರೋಗ್ಯ ಸುಧಾರಣೆಗಾಗಿ ಜಾರಿಯಲ್ಲಿರುವ ‘ಮಾತೃಶ್ರೀ’ ಯೋಜನೆಗೆ 2018–19 ರಲ್ಲಿ ₹350 ಕೋಟಿ ಒದಗಿಸಲಾಗಿತ್ತು. 2019–20 ರಲ್ಲಿ ಅದನ್ನು ₹450 ಕೋಟಿಗೆ ಹೆಚ್ಚಿಸಿದ್ದರೂ, ₹24 ಕೋಟಿ (ಶೇ 16.64) ಮಾತ್ರ ವೆಚ್ಚ ಮಾಡಲಾಗಿತ್ತು ಎಂದು ಸಿಎಜಿ ತಿಳಿಸಿದೆ.
  • 2019–20ರ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಪಿಂಚಣಿ ಯೋಜನೆ, ಸುರಕ್ಷಾ ಯೋಜನೆ, ಉಜ್ವಲಾ ಯೋಜನೆ, ಕರ್ನಾಟಕ ರಾಜ್ಯ ಹಣಕಾಸು ನಿಗಮದ ಮೂಲಕ ಮಹಿಳೆಯರಿಗೆ ಬಡ್ಡಿ ಸಹಾಯಧನ ವಿತರಣೆ, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಪ್ರಧಾನಮಂತ್ರಿ ಮಾತೃವಂದನಾ ಕಾರ್ಯಕ್ರಮದ ಅನುದಾನದ ಹಂಚಿಕೆಯಲ್ಲಿ ಗಣನೀಯ ಕುಸಿತವಾಗಿದೆ ಎಂಬ ಉಲ್ಲೇಖ ವರದಿಯಲ್ಲಿದೆ.
  • ಯೋಜನೆಗಳ ಕೊರತೆ: ಕೃಷಿ, ಜವಳಿ ಮತ್ತು ಆಹಾರ ಕೈಗಾರಿಕೆಗಳು, ಪೊಲೀಸ್‌, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುತ್ತಿದ್ದರೂ ಅವರಿಗಾಗಿ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿಲ್ಲ ಎಂದು ಸಿಎಜಿ ಆಕ್ಷೇಪಿಸಿದೆ.
  • ಕೇಂದ್ರ ಸರ್ಕಾರವು 2003ರಲ್ಲಿ ರಚಿಸಿದ್ದ ತಜ್ಞರ ತಂಡವು ರಕ್ಷಣೆ, ಆರ್ಥಿಕ ಮತ್ತು ಸಾಮಾಜಿಕ ಸೇವಾ ವಲಯಗಳಿಂದ ಕ್ರಮಬದ್ಧವಾದ ಮಾಹಿತಿ ಸಂಗ್ರಹಿಸಿ ಲಿಂಗಾಧಾರಿತ ಬಜೆಟ್‌ ರೂಪಿಸುವಂತೆ ಸಲಹೆ ನೀಡಿತ್ತು. ಈ ಸಲಹೆಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ’ ಎಂದು ಹೇಳಿದೆ.

ಸಿಎಜಿ ಶಿಫಾರಸ್ಸು

  • ರಾಜ್ಯ ಸರ್ಕಾರ ಲಿಂಗಾಧಾರಿತ ಬಜೆಟ್‌ ಮತ್ತು ಮಹಿಳಾ ಉದ್ದೇಶಿತ ಯೋಜನೆಗಳ ಕುರಿತು ನಿಯಮಿತವಾಗಿ ಮೌಲ್ಯಮಾಪನ ನಡೆಸಬೇಕು. ವಿವಿಧ ಯೋಜನೆಗಳ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ಫಲಾನುಭವಿಗಳಿಗೆ ಆಗಿರುವ ಉಪಯೋಗ ಆಧರಿಸಿ ಮೌಲ್ಯಮಾಪನ ನಡೆಯಬೇಕು ಎಂದು ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ.

ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ (ಸಿಎಜಿ)

  • ಸಿಎಜಿ ಭಾರತದ ಸಂವಿಧಾನದ ಅಡಿಯಲ್ಲಿ ಸ್ವತಂತ್ರ ಪ್ರಾಧಿಕಾರವಾಗಿದೆ.
  • ಅವರು ಭಾರತೀಯ ಲೆಕ್ಕಪರಿಶೋಧನೆ ಮತ್ತು ಖಾತೆ ವಿಭಾಗದ ಮುಖ್ಯಸ್ಥರು ಮತ್ತು ಸಾರ್ವಜನಿಕ ಹಣಕಾಸಿನ ಮುಖ್ಯ ರಕ್ಷಕರಾಗಿದ್ದಾರೆ.
  • ಸರ್ಕಾರ ಮತ್ತು ಇತರ ಸಾರ್ವಜನಿಕ ಪ್ರಾಧಿಕಾರಗಳ (ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಎಲ್ಲರೂ) ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಮತ್ತು ಅವುಗಳ ಮೂಲಕ ಜನರಿಗೆ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಸಂಸ್ಥೆ ಇದು.

ಸಿಎಜಿ – ಸಾಂವಿಧಾನಿಕ ನಿಬಂಧನೆಯ ಮುಖ್ಯಾಂಶಗಳು

  • ವಿಧಿ 148 ವಿಶಾಲವಾಗಿ ಸಿಎಜಿ ನೇಮಕಾತಿ, ಪ್ರಮಾಣ ಮತ್ತು ಸೇವೆಯ ಷರತ್ತುಗಳನ್ನು ಒಳಗೊಂಡಿದೆ.
  • ವಿಧಿ 149 ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನ ಕರ್ತವ್ಯಗಳು ಮತ್ತು ಅಧಿಕಾರಗಳ ಬಗ್ಗೆ ಹೇಳುತ್ತದೆ.
  • ವಿಧಿ 150 ರ ಪ್ರಕಾರ ಒಕ್ಕೂಟ ಮತ್ತು ರಾಜ್ಯಗಳ ಖಾತೆಗಳನ್ನು ಸಿಎಜಿಯ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಸೂಚಿಸುವಂತಹ ರೂಪದಲ್ಲಿ ಇಡಬೇಕು.
  • ವಿಧಿ 151 ಯು ಭಾರತದ ಸಿಎಜಿಯ ವರದಿಯನ್ನು ಒಕ್ಕೂಟದ ಖಾತೆಗಳಿಗೆ ಸಂಬಂಧಿಸಿ ರಾಷ್ಟ್ರಪತಿಗೆ ಸಲ್ಲಿಸಬೇಕೆಂದು ಹೇಳುತ್ತದೆ, ಅವರು ಸಂಸತ್ತಿನ ಪ್ರತಿ ಸದನದ ಮುಂದೆ ಇಡಲು ಕಾರಣರಾಗುತ್ತಾರೆ.
  • 279 ನೇ ವಿಧಿ “ನಿವ್ವಳ ಆದಾಯ” ದ ಲೆಕ್ಕಾಚಾರವನ್ನು ನಿರ್ವಹಿಸುತ್ತದೆ ಮತ್ತು ಭಾರತದ ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಅವರಿಂದ ದೃಡೀಕರಿಸಲ್ಪಟ್ಟಿದೆ ಮತ್ತು ಪ್ರಮಾಣೀಕರಿಸಲ್ಪಟ್ಟಿದೆ, ಅವರ ಪ್ರಮಾಣಪತ್ರವು ಅಂತಿಮವಾಗಿದೆ.
  • ಮೂರನೇ ವೇಳಾಪಟ್ಟಿ-ಭಾರತದ ಸಂವಿಧಾನದ ಮೂರನೇ ವೇಳಾಪಟ್ಟಿಯ ಸೆಕ್ಷನ್ IV, ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಸುಪ್ರೀಂ ಕೋರ್ಟ್ ಮತ್ತು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನ್ಯಾಯಾಧೀಶರು ಪ್ರಮಾಣವಚನ ಅಥವಾ ದೃಡೀಕರಣದ ರೂಪವನ್ನು ಸೂಚಿಸಿದ್ದಾರೆ.