Published on: June 8, 2022

ಸಿಡಿಎಸ್ ನೇಮಕಾತಿ ನಿಯಮ

ಸಿಡಿಎಸ್ ನೇಮಕಾತಿ ನಿಯಮ

ಸುದ್ಧಿಯಲ್ಲಿಏಕಿದೆ?

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರ (ಡಿಸಿಎಸ್) ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮಗಳನ್ನು ಸಡಿಲಗೊಳಿಸಿದ್ದು, 62 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರು ಸೇನೆಗಳಲ್ಲಿ ಯಾವುದೇ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಮತ್ತು ವೈಸ್ ಅಡ್ಮಿರಲ್ ಸಹ ಸಿಡಿಎಸ್ ಹುದ್ದೆಗೆ ಅರ್ಹರಾಗಿರುತ್ತಾರೆ.

ಮುಖ್ಯಾಂಶಗಳು

  • ಈ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಗಳ ಪ್ರಕಾರ, ಸೇನಾಪಡೆ, ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ ಮುಖ್ಯಸ್ಥರ ಜೊತೆಗೆ ಈ ಮೂರು ಸೇನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇತರೆ ಉನ್ನತ ಅಧಿಕಾರಿಗಳನ್ನು ಸಹ ಸಿಡಿಎಸ್ ಹುದ್ದೆಗೆ ಪರಿಗಣಿಸಬಹುದು ಎಂದು ಹೇಳಿದೆ. ಈ ಮೂಲಕ ಸೇನಾ ಪಡೆ, ವಾಯು ಪಡೆ ಅಥವಾ ನೌಕಾ ಪಡೆಯಲ್ಲಿನ ಎರಡನೇ ಅತ್ಯುನ್ನತ ದರ್ಜೆಯ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಸಿಡಿಎಸ್ ಹುದ್ದೆಗೆ ಏರಲು ದಾರಿ ಮಾಡಿಕೊಡಲಾಗಿದೆ.
  • ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾಗಿರುವ ಲೆಫ್ಟಿನೆಂಟ್ ಜನರಲ್, ಏರ್ ಮಾರ್ಷಲ್ ಅಥವಾ ವೈಸ್ ಅಡ್ಮಿರಲ್ ಅವರನ್ನು ಸಿಡಿಎಸ್ ಆಗಿ ನೇಮಕ ಮಾಡಲು ಅರ್ಹರಾಗುವಂತೆ ಮಾಡಲು ಏರ್ ಫೋರ್ಸ್ ಆಕ್ಟ್, ಆರ್ಮಿ ಆಕ್ಟ್ ಮತ್ತು ನೌಕಾಪಡೆಯ ಕಾಯಿದೆಯನ್ನು ತಿದ್ದುಪಡಿ ಮಾಡಿ ಸರ್ಕಾರ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ.
  • ರಕ್ಷಣಾ ಪಡೆಗಳ ಮುಖ್ಯಸ್ಥರ ಸೇವೆಯ ಅವಧಿಯು ಗರಿಷ್ಠ 65 ವರ್ಷವಾಗಿದೆ. ಆದರೆ, ಸರ್ಕಾರ ಬಯಸಿದ್ದಲ್ಲಿ ಅದನ್ನು ವಿಸ್ತರಣೆ ಮಾಡಲು ಅವಕಾಶವಿದೆ. ಮೂರು ಸೇನೆಗಳ ಮುಖ್ಯಸ್ಥರ ಅವಧಿಯು ಮೂರು ವರ್ಷ ಅಥವಾ ಅವರಿಗೆ 62 ವರ್ಷ ತುಂಬುವವರೆಗೆ ಇರುತ್ತದೆ.

ಉದ್ದೇಶ

  • ಈ ಮೂಲಕ ಸೇನಾ ಪಡೆ, ವಾಯು ಪಡೆ ಅಥವಾ ನೌಕಾ ಪಡೆಯಲ್ಲಿನ ಎರಡನೇ ಅತ್ಯುನ್ನತ ದರ್ಜೆಯ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳನ್ನು ಹಿಂದಿಕ್ಕಿ ಸಿಡಿಎಸ್ ಹುದ್ದೆಗೆ ಏರಲು ದಾರಿ ಮಾಡಿಕೊಡಲಾಗಿದೆ.