Published on: April 18, 2023

ಸಿ ವಿಜಿಲ್ ಇನ್ವೆಸ್ಟಿಗೇಟರ್ ಅಪ್ಲಿಕೇಷನ್

ಸಿ ವಿಜಿಲ್ ಇನ್ವೆಸ್ಟಿಗೇಟರ್ ಅಪ್ಲಿಕೇಷನ್

ಸುದ್ದಿಯಲ್ಲಿ  ಏಕಿದೆ? ಚುನಾವಣಾ ಅಕ್ರಮಗಳಿಗೆ  ಸಂಬಂಧಪಟ್ಟ  1,119 ಎಫ್ಐಆರ್ ದಾಖಲಿಸಲಾಗಿದೆ ಮತ್ತು  ಸಿ-ವಿಜಿಲ್ ಆ್ಯಪ್ ಮೂಲಕ 2,389 ದೂರು ಸ್ವೀಕರಿಸಲಾಗಿದೆ.

ಮುಖ್ಯಾಂಶಗಳು

  • ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡುವಲ್ಲಿ ಬಾಗಲಕೋಟೆ ಜಿಲ್ಲೆಮೊದಲ ಸ್ಥಾನದಲ್ಲಿದೆ.
  • ಕ್ರಮವಾಗಿ ಚಿತ್ರದುರ್ಗ ಹಾಗೂ ಬೆಂಗಳೂರು ಕೇಂದ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
  • ವೀಡಿಯೋ, ಆಡಿಯೋ, ಫೋಟೋ ದಾಖಲೆ ಸಹಿತ ದೂರು ಕೊಡಲು ಅವಕಾಶವಿದೆ. 8-9 ಮಾದರಿ ದೂರು ನೀಡಬಹುದು.
  • ನೀತಿಸಂಹಿತೆ ಉಲ್ಲಂಘನೆಯ ಸ್ಯಾಕ್ಷ್ಯದ ಪುರಾವೆಗಳು ಸಿಕ್ಕ ತಕ್ಷಣ ಚುನಾವಣಾ ಯಂತ್ರವು ತಕ್ಷಣವೇ ಕಾರ್ಯಾಚರಣೆಗಿಳಿಯುತ್ತದೆ.
  • ಪ್ರತಿ ಸಿ-ವಿಜಿಲ್ ಪ್ರಕರಣದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು 100 ನಿಮಿಷಗಳ ಅವಧಿಯಲ್ಲಿ ತೆಗೆದುಕೊಂಡ ಕ್ರಮದೊಂದಿಗೆ ಪ್ರತ್ಯುತ್ತರ ನೀಡಲಾಗುತ್ತದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

  • ದೂರು ನೋಂದಾಯಿಸಿ ಮೊಬೈಲ್ ಫೋನ್ನಲ್ಲಿ ಸಿ-ವಿಜಿಲ್ ಅಪ್ಲಿಕೇಶನ್ಗೆ ಸೈನ್ ಇನ್ ಮಾಡುವ ಮೂಲಕ ಫೋಟೋ/ಆಡಿಯೊ/ ವೀಡಿಯೊ ತೆಗೆದು ಆ್ಯಪ್ನಲ್ಲಿಅಪ್ಲೋ ಡ್ ಮಾಡಬಹುದು.
  • ಅನಾಮಧೇಯ ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳು/ ಗುರುತನ್ನು ಬಹಿರಂಗಪಡಿಸದೆ ಅನಾಮಧೇಯವಾಗಿ ದೂರು ನೀಡಲು ಆ್ಯಪ್ ನಾಗರಿಕರಿಗೆ ಅವಕಾಶ ನೀಡುತ್ತದೆ.
  • ಜಿಯೋಟ್ಯಾಗ್ ಮಾಡುವಿಕೆ: ನೀತಿಸಂಹಿತೆ ಉಲ್ಲಂಘನೆಯನ್ನು ವರದಿ ಮಾಡಲು ಬಳಕೆದಾರರು ಸಿ-ವಿಜಿಲ್ನಲ್ಲಿ ತಮ್ಮ ಕ್ಯಾಮರಾ ಆನ್ ಮಾಡಿದಾಗ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಜಿಯೋ-ಟ್ಯಾಗಿಂಗ್ ವೈಶಿಷ್ಟ್ಯವನ್ನು ಸಕ್ರಿಯಗೊಳಿಸುತ್ತದೆ. ಇದು ಘಟನೆಯ ನಿಖರವಾದ ಸ್ಥಳವನ್ನು ತಿಳಿಯಲು ಸಹಾಯ ಮಾಡುತ್ತದೆ.

ಇನ್ವೆಸ್ಟಿಗೇಟರ್ ಅಪ್ಲಿಕೇಷನ್

  • ಸಿ ವಿಜಿಲ್ ಇನ್ವೆಸ್ಟಿಗೇಟರ್ ಅಪ್ಲಿಕೇಷನ್ ಅನ್ನು ಫ್ಲೆಯಿಂಗ್ ಸ್ಕ್ವಾಡ್ಗಳು ಮತ್ತು ಸ್ಥಿರ ಕಣ್ಗಾವಲು ತಂಡದಂತಹ ಕೇತ್ರ ಘಟಕಗಳಿಗಾಗಿ ಸಿ ವಿಜಿಲ್ ಪ್ರಕರಣಗಳನ್ನು ತನಿಖೆ ಮಾಡಲು ಮತ್ತು ಸೂಮೋಟೋ ಪ್ರಕರಣ ದಾಖಲಿಸಲು ಅವಕಾಶ ಮಾಡಿಕೊಡುತ್ತದೆ.
  • ಫೇಕ್ ನ್ಯೂಸ್ ಬಗ್ಗೆ ದೂರು ಸಲ್ಲಿಸಲು ಅವಕಾಶವಿದೆ. ಘಟನೆಗಳ ಮೇಲೆ ದೂರು 15 ನಿಮಿಷಗಳಲ್ಲಿತನಿಖಾ ತಂಡಕ್ಕೆ ತಲುಪುತ್ತದೆ. ತನಿಖಾ ತಂಡಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ದೂರುದಾರರಿಗೆ ವರದಿ ನೀಡುತ್ತವೆ. ಬಳಿಕ ಕ್ರಮ ಕೈಗೊಳ್ಳುತ್ತವೆ. ಕೈಗೊಂಡ ಕ್ರಮಗಳ ಬಗೆಗೂ ದೂರುದಾರರಿಗೆ ಮೊಬೈಲ್ ಮೂಲಕವೇ ಮಾಹಿತಿ ನೀಡಲಾಗುತ್ತದೆ

ಪ್ರಯೋಜನ

  • ಚುನಾವಣೆಯಲ್ಲಿ ಪಾರದರ್ಶಕತೆ ತರಲು ಮತ್ತುಚುನಾವಣಾ ಅಕ್ರಮಗಳ ಕುರಿತು ಸಾಮಾನ್ಯ ಜನರೂ ದೂರು ಸಲ್ಲಿಸಲು ಅವಕಾಶ ದೊರೆಯಲಿದೆ.
  • ಅಪ್ಲಿಕೇಶನ್ ಅಧಿಕಾರಿಗಳ ತ್ವರಿತ ಮತ್ತುಪರಿಣಾಮಕಾರಿ ಕ್ರಮಗಳಿಗೆ ಆದ್ಯತೆ ನೀಡಿದೆ.