Published on: November 1, 2022

ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕ

ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕ

ಸುದ್ದಿಯಲ್ಲಿ ಏಕಿದೆ?

ಗುಜರಾತ್ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಮುಖ್ಯಾಂಶಗಳು

  • ಭಾರತೀಯ ವಾಯುಪಡೆಗಾಗಿ ಟಾಟಾ-ಏರ್‌ಬಸ್ ಸಿ-295 ಸಾರಿಗೆ ವಿಮಾನವನ್ನು ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
  • ಏರ್‌ಬಸ್ ಸಿ-295 ವಿಮಾನವನ್ನು ಇದೇ ಮೊದಲ ಬಾರಿಗೆ ಯುರೋಪ್ ಖಂಡದಿಂದ ಹೊರಗೆ ನಿರ್ಮಿಸಲು ಉದ್ದೇಶಿಸಲಾಗಿದೆ.
  • ದೇಶದಲ್ಲೇ ಪ್ರಥಮ ಬಾರಿಗೆ ಖಾಸಗಿ ವಲಯದಿಂದ ವಿಮಾನ ತಯಾರಿಕಾ ಘಟಕವನ್ನು ಸ್ಥಾಪಿಸಲಾಗುತ್ತಿದೆ.
  • ಈ ಸೌಲಭ್ಯದಲ್ಲಿ ತಯಾರಿಸಲಾದ ಸಿ-295 ವಿಮಾನವು ಉನ್ನತ ಸಾಮರ್ಥ್ಯ ಮತ್ತು ಜಾಗತಿಕ ಗುಣಮಟ್ಟವನ್ನು ಹೊಂದಿರುವ ಅತ್ಯಾಧುನಿಕ ವಿಮಾನವಾಗಿದೆ. ಇದು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
  • ಸಿ-295 ವಿಮಾನ ತಯಾರಿಕಾ ಸೌಲಭ್ಯವನ್ನು ಪ್ರಾರಂಭಿಸುವುದರೊಂದಿಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯದೊಂದಿಗೆ ಭಾರತವು 12ನೇ ರಾಷ್ಟ್ರವಾಗಲಿದೆ. ಪ್ರಸ್ತುತ, ಯುಎಸ್, ಜಪಾನ್, ಯುಕೆ, ರಷ್ಯಾ, ಫ್ರಾನ್ಸ್, ಇಟಲಿ, ಸ್ಪೇನ್, ಉಕ್ರೇನ್, ಬ್ರೆಜಿಲ್, ಚೀನಾ ಮತ್ತು ಜಪಾನ್ ಆ ಸಾಮರ್ಥ್ಯವನ್ನು ಹೊಂದಿವೆ.
  • ಏರ್‌ ಬಸ್ ಸಂಸ್ಥೆಯು ಸ್ಪೇನ್ ದೇಶದಲ್ಲಿ ಘಟಕ ಹೊಂದಿದ್ದು, ಈ ಘಟಕದಲ್ಲಿ ಯಾವುದೇ ಒಂದು ವಿಮಾನ ತಯಾರಿಕೆಗೆ ಬೇಕಾದ ಶೇ.96ರಷ್ಟು ಕೆಲಸಗಳು ನಡೆಯುತ್ತವೆ. ಏರ್‌ಬಸ್ ಸಿ-295 ವಿಮಾನವನ್ನು ಇದೇ ಮೊದಲ ಬಾರಿಗೆ ಯುರೋಪ್ ಖಂಡದಿಂದ ಹೊರಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಭಾರತದ ದೇಶೀಯ ವಿಮಾನಯಾನ ರಂಗದ ಅಭಿವೃದ್ದಿಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.
  • ಏರ್‌ ಬಸ್ ಸಂಸ್ಥೆಯು ಸ್ಪೇನ್ ದೇಶದಲ್ಲಿ ಘಟಕ ಹೊಂದಿದ್ದು, ಈ ಘಟಕದಲ್ಲಿ ಯಾವುದೇ ಒಂದು ವಿಮಾನ ತಯಾರಿಕೆಗೆ ಬೇಕಾದ ಶೇ. 96ರಷ್ಟು ಕೆಲಸಗಳು ನಡೆಯುತ್ತವೆ. ಸ್ಪೇನ್‌ನಲ್ಲಿ ಇರುವ ಘಟಕದ ಮಾದರಿಯಲ್ಲೇ ಭಾರತದಲ್ಲಿಯೂ ಘಟಕ ಕಾರ್ಯ ನಿರ್ವಹಣೆ ಮಾಡಲಿದ್ದು, ವಿಮಾನವು ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣ ಆಗಲಿದೆ.

ಉದ್ದೇಶ

  • ಭಾರತದ ದೇಶೀಯ ವಿಮಾನಯಾನ ರಂಗದ ಅಭಿವೃದ್ದಿಯ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಈ ವಿಮಾನ ತಯಾರಿಕಾ ಕೇಂದ್ರವು ಪ್ರಮುಖವಾಗಿ ಭಾರತೀಯ ವಾಯು ಪಡೆಗೆ ಬೇಕಾದ ವಿಮಾನಗಳನ್ನು ನಿರ್ಮಿಸಲಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ವಿಮಾನಗಳನ್ನು ರಫ್ತು ಮಾಡುವ ಉದ್ದೇಶವೂ ಇದೆ. ಭವಿಷ್ಯದಲ್ಲಿ ಭಾರತವು ವಿಶ್ವದಲ್ಲಿ ದೊಡ್ಡ ಪ್ರಯಾಣಿಕ ವಿಮಾನಗಳ ತಯಾರಕ ದೇಶವಾಗಲಿದೆ.

ಸಿ-295ಎಂಡಬ್ಲ್ಯೂ ವೈಶಿಷ್ಟ್ಯಗಳು

  • ಸಿ-295ಎಂಡಬ್ಲ್ಯೂ 5-10 ಟನ್ ಸಾಮರ್ಥ್ಯ ಮತ್ತು ಸಮಕಾಲೀನ ತಂತ್ರಜ್ಞಾನವನ್ನು ಹೊಂದಿರುವ ಸಾರಿಗೆ ವಿಮಾನವಾಗಿದೆ.
  • ಸುಮಾರು 40-45 ಪ್ಯಾರಾಟ್ರೂಪರ್‌ಗಳನ್ನು ಅಥವಾ ಸುಮಾರು 70 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ಸ್ ಮತ್ತು ಸಿದ್ಧವಿಲ್ಲದ ರನ್‌ವೇಗಳಿಂದಲೂ ಇದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
  • ತ್ವರಿತ ಪ್ರತಿಕ್ರಿಯೆಗಾಗಿ ಮತ್ತು ಪಡೆಗಳು ಮತ್ತು ಸರಕುಗಳನ್ನು ಕೆಳಗಿಳಿಸಲು ವಿಮಾನದ ಹಿಂಭಾಗದಲ್ಲಿ ರಾಂಪ್ ಬಾಗಿಲು ಇರಲಿದೆ. ಅರೆ-ಸಿದ್ಧ ಮೇಲ್ಮೈಗಳಿಂದ ಸಣ್ಣ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಅದರ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.