Published on: November 3, 2022

ಸುದ್ಧಿ ಸಮಾಚಾರ – 02 ನವೆಂಬರ್ 2022

ಸುದ್ಧಿ ಸಮಾಚಾರ – 02 ನವೆಂಬರ್ 2022

  • ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 1 ರಂದು ಡಿಜಿಟಲ್ ರೂಪಾಯಿ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುತ್ತದೆ. ದೇಶದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಯು ಆರಂಭವಾಗಲಿದೆ. ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ರಿಟೇಲ್ ವಹಿವಾಟು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ, ಕೆಲವು ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಒಂದು ತಿಂಗಳಲ್ಲಿ ಆರಂಭವಾಗಲಿದೆ ಎಂದು ಆರ್ಬಿಐ ಹೇಳಿದೆ.
  • ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹ ಸಂಗ್ರಹ ಮತ್ತು ಅಧ್ಯಯನವನ್ನು ಉತ್ತೇಜಿಸಲು ಅಂಚೆ ಇಲಾಖೆ ಜಾರಿಗೆ ತಂದಿರುವ ದೀನ ದಯಾಳ್ ಸ್ಪರ್ಶ್ ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಒಟ್ಟು 2,237 ವಿದ್ಯಾರ್ಥಿಗಳು 40 ವಿದ್ಯಾರ್ಥಿವೇತನಕ್ಕಾಗಿ ಸ್ಪರ್ಧಿಸಿದ್ದಾರೆ.
  • ಮಂಗಳೂರಿನಲ್ಲಿ ಭಾರತದ ಮೊದಲ ಗ್ರೀನ್ ಹೈಡ್ರೋಜನ್ ಕ್ಲಸ್ಟರ್ ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ.
  • ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 2 ರಿಂದ ನವೆಂಬರ್4ರವರೆಗೆ 3 ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ 2022 ನಡೆಯಲಿದೆ.
  • ಪದ್ಮಭೂಷಣ ಪಡೆದ, ಸ್ಟೀಲ್ ಮ್ಯಾನ್ ಆಫ್ ಇಂಡಿಯಾ (ಭಾರತದ ಉಕ್ಕಿನ ಮನುಷ್ಯ) ಖ್ಯಾತಿಯ ಜಮ್ಶೆಡ್‌ ಜೆ ಇರಾನಿ ಅವರು ನಿಧನರಾದರು. ಇರಾನಿ ಅವರಿಗೆ 86 ವರ್ಷ ವಯಸ್ಸಾಗಿತ್ತು. 43 ವರ್ಷಗಳ ಕಾಲ ಕಂಪನಿಯ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಇರಾನಿ ಅವರು, 2011ರ ಜೂನ್‌ನಲ್ಲಿ ಕಂಪನಿಯ ಮಂಡಳಿಯಿಂದ ನಿವೃತ್ತರಾಗಿದ್ದರು.
  • ಟ್ವಿಟರ್ ಸಿಇಒ ಆಗಿ ಎಲಾನ್ ಮಸ್ಕ್: ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನ ಸಿಇಒ ಆಗಿ ಕಾರ್ಯನಿರ್ವಹಿಸುವುದಾಗಿ ಉದ್ಯಮಿ ಎಲಾನ್ ಮಸ್ಕ್‌ ತಿಳಿಸಿದ್ದಾರೆ. ಟ್ವಿಟರ್‌ ಕಂಪನಿಯನ್ನು ಮಸ್ಕ್‌ ಅವರು ಸುಮಾರು ರೂ. 3.62 ಲಕ್ಷ ಕೋಟಿಗೆ ಖರೀದಿಸಿದ್ದಾರೆ. ಮಸ್ಕ್‌ ಅವರು ಸದ್ಯ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ‘ಟೆಸ್ಲಾ’, ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ಸ್ಪೇಸ್‌ಎಕ್ಸ್‌’, ಕೃತಕ ಬುದ್ಧಿಮತ್ತೆ ಸಾಧನಗಳನ್ನು ಅಭಿವೃದ್ಧಿಪಡಿಸುವ ‘ನ್ಯೂರಲಿಂಕ್‌’, ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದ ‘ದಿ ಬೋರಿಂಗ್‌ ಕಂಪನಿ’ಯನ್ನು ಮುನ್ನಡೆಸುತ್ತಿದ್ದಾರೆ.
  • ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿಯಿಂದ ಹೊಸ ದಾಖಲೆ: ಅತಿ ವೇಗವಾಗಿ 1,000 ರನ್ ಗಳಿಸಿದ ವಿಶ್ವದ ಎರಡನೇ ಹಾಗೂ ದೇಶದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.  22 ಪಂದ್ಯಗಳಲ್ಲಿ 22 ಇನ್ನಿಂಗ್ಸ್ ಗಳಲ್ಲಿ 83.41 ರ ಸರಾಸರಿಯಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.  ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಮೊದಲ ಸ್ಥಾನದಲ್ಲಿದ್ದಾರೆ. ಅವರು 31 ಪಂದ್ಯಗಳಿಂದ 39.07 ಸರಾಸರಿಯಲ್ಲಿ 1,016 ರನ್ ಗಳಿಸಿದ್ದಾರೆ.
  • ಫ್ರೆಂಚ್ ಓಪನ್ (ಬ್ಯಾಡ್ಮಿಂಟನ್): ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಚೈನೀಸ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವುದರೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಬಿಡಬ್ಲ್ಯೂಎಫ್ ಸೂಪರ್ 750 ಕಿರೀಟವನ್ನು ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿ ಇದಾಗಿದೆ.