Published on: December 3, 2021

ಸುದ್ಧಿ ಸಮಾಚಾರ 03 ಡಿಸೆಂಬರ್ 2021

ಸುದ್ಧಿ ಸಮಾಚಾರ 03 ಡಿಸೆಂಬರ್ 2021

  • ಯಲಹಂಕದ ಪುಟ್ಟೇನಹಳ್ಳಿ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈ ಕೋರ್ಟ್ ಅರಣ್ಯ ಇಲಾಖೆಗೆ ಅದರ ನಿರ್ವಹಣಾ ಮೇಲುಸ್ತುವಾರಿ ನೀಡಿದೆ.
  • ಉದಯೋನ್ಮುಖ ನಿರ್ದೇಶಕ ನಟೇಶ್ ಹೆಗ್ಡೆ ನಿರ್ದೇಶಕನದ ಕನ್ನಡ ಸಿನಿಮಾ ‘ಪೆಡ್ರೊ’, ಫ್ರಾನ್ಸ್ ನಲ್ಲಿ ನಡೆದ ಫೆಸ್ಟಿವಲ್  ಡೇಸ್  3 ಕಾಂಟಿನೆಂಟ್ಸ್  ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದುಕೊಂಡಿದೆ.
  • ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಮತ್ತು ಜಗತ್ತಿನಾದ್ಯಂತ ಎಲ್ಲಿ ಬೇಕಾದರೂ ಭಾಷೆಯನ್ನು ಕಲಿಯಲು ಬಯಸುವವರಿಗೆ ನೆರವಾಗಬಲ್ಲ ‘ಕನ್ನಡ ನುಡಿ ಕಲಿಕೆ ಪಟ’ ಎಂಬ 20 ನಿಮಿಷಗಳ ಮಾಡ್ಯೂಲ್‌ಗಳನ್ನು ಹೊರ ತಂದಿದೆ.
  • ಅಸ್ಸಾಂ ರಾಜ್ಯದಲ್ಲಿ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸಲು ನೀಡಿದ ಕೊಡುಗೆಯನ್ನು ಗಮನಿಸಿ ಟಾಟಾ ಟ್ರಸ್ಟ್ನ ಅಧ್ಯಕ್ಷ ರತನ್ ಟಾಟಾ ಅವರಿಗೆ ರಾಜ್ಯ ಸರ್ಕಾರವು ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಅಸ್ಸಾಂ ಬೈಭವ್’ವನ್ನು ಪ್ರದಾನ ಮಾಡಲಿದೆ
  • ಮತ್ತೊಂದು ಚಂಡಮಾರುತ (ಸೈಕ್ಲೋನ್) ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗ ರೂಪುಗೊಳ್ಳುತ್ತಿರುವ ಚಂಡಮಾರುತಕ್ಕೆ ‘ಜವಾದ್ ಸೈಕ್ಲೋನ್’ ಎಂದು ಹೆಸರಿಸಲಾಗಿದೆ
  • ವಿಶ್ವದ ಅತಿ ದುಬಾರಿ ನಗರ ಎನ್ನುವ ಖ್ಯಾತಿಗೆ ಇಸ್ರೇಲಿನ ಟೆಲ್ ಅವಿವ್ ನಗರ ಪಾತ್ರವಾಗಿದೆ. ಜೆರುಸಲೆಂ ಇಸ್ರೇಲಿನ ರಾಜಧಾನಿಯಾಗಿದ್ದರೂ, ದೇಶದ ಆರ್ಥಿಕ ಮತ್ತು ತಂತ್ರಜ್ನಾನ ಕೇಂದ್ರ ಟೆಲ್ ಅವಿವ್ ಆಗಿದೆ. ಎಕನಾಮಿಸ್ಟ್  ಇಂಟೆಲಿಜೆನ್ಸ್  ಯೂನಿಟ್ ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಿಂದ ಈ ಮಾಹಿತಿ ಹೊರಬಂದಿದೆ.
  • ವರ್ಲ್ಡ್ ಅಥ್ಲೆಟಿಕ್ಸ್ ಭಾರತದ ಲೆಜೆಂಡರಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ‘ವರ್ಷದ ಮಹಿಳೆ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ.
  • ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.