Published on: November 5, 2022

ಸುದ್ಧಿ ಸಮಾಚಾರ – 05 ನವೆಂಬರ್ 2022

ಸುದ್ಧಿ ಸಮಾಚಾರ – 05 ನವೆಂಬರ್ 2022

  • ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ನಾಡಪ್ರಭು ಕೆಂಪೇಗೌಡರು ಚಕ್ರವರ್ತಿ ಅಚ್ಯುತರಾಯರ ನೆರವಿನೊಂದಿಗೆ ಭವ್ಯ ಬೆಂಗಳೂರನ್ನು ಕಟ್ಟಿದರು. ಮೃತ್ತಿಕೆ (ಮಣ್ಣು) ಪ್ರಗತಿ ಪ್ರತಿಮೆ ಅನಾವರಣದ ಪ್ರಯುಕ್ತ ಈ ನೆಲದ ಪವಿತ್ರ ಮೃತ್ತಿಕೆ ಸಂಗ್ರಹಿಸಲಾಯಿತು.
  • ಸಾವಯವ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ಕೃಷಿ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ನಾಲ್ಕು ದಿನಗಳ ಕೃಷಿ ಮೇಳವು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಆರಂಭಗೊಂಡಿದೆ.
  • ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಿ, ಆ ಮಾಹಿತಿಯನ್ನು ಸಾರ್ವಜನಿಕವಾಗಿ ಮುಕ್ತವಾಗಿಸಲು ಬಯಸಿದೆ. ಸಾವಿರಾರು ಕೋಟಿ ರೂ ವ್ಯವಹಾರ ನಡೆಯುವ ಕ್ಷೇತ್ರದಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದ್ದು, ಸರ್ಕಾರ ಈಗ ‘ಬೆಸ್ಟ್ ಪ್ರಾಕ್ಟೀಸಸ್’ ಕಲ್ಪನೆಯಲ್ಲಿ ಡಿಜಿಟಲೀಕರಣಕ್ಕೆ ಮೊರೆ ಹೋಗಿದೆ.
  • ಭಾರತೀಯ ಸೇನೆಯು ಹೊಸ ವಿನ್ಯಾಸದ ಸಮವಸ್ತ್ರಕ್ಕೆ ಪೇಟೆಂಟ್ ಮಾಡಿಸಿದೆ. ಹೀಗಾಗಿ ಇನ್ನು ಮುಂದೆ ಅದೇ ಮಾದರಿಯ ಸೇನಾ ಸಮವಸ್ತ್ರದ ವಿನ್ಯಾಸವನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಹಕ್ಕು ಸ್ವಾಮ್ಯದ ಅಧಿಕಾರಕ್ಕೆ ಅದರ ಮಾಲೀಕರಿಗೆ ನೀಡುವ ವಿಶೇಷ ಅಧಿಕಾರವನ್ನು ಪೇಟೆಂಟ್ ಅಥವಾ ಭೌದ್ದಿಕ ಹಕ್ಕು ಸ್ವಾಮ್ಯ ಎನ್ನುತ್ತಾರೆ
  • ಅನಿಯಂತ್ರಿತವಾಗಿ ಭೂ ವಾತಾವರಣಕ್ಕೆ ವಾಪಸ್ಸಾದ ಭಾರತದ ನಿಷ್ಕ್ರಿಯ ಉಪಗ್ರಹ RISAT-2, ಇಂಡೋನೇಷ್ಯಾದ ಜಕಾರ್ತಾ ಸಮೀಪ ಹಿಂದೂ ಮಹಾಸಾಗರಕ್ಕೆ ಅಪ್ಪಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ–ಐಎಸ್‌ಆರ್‌ಒ) ತಿಳಿಸಿದೆ.