Published on: January 6, 2022

ಸುದ್ಧಿ ಸಮಾಚಾರ 06 ಜನವರಿ 2022

ಸುದ್ಧಿ ಸಮಾಚಾರ 06 ಜನವರಿ 2022

  • ಊಟ ಮತ್ತು ವಸತಿ ಸೌಲಭ್ಯಗಳನ್ನು ಕಲ್ಪಿಸುವ ವಿದ್ಯಾಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಜನವರಿ 10, 2022 ರವರೆಗೆ ಅವಧಿ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಲಾಗಿದೆ.
  • ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಗಂಭೀರವಾಗಿಯೇ ಮುಂದುವರಿದಿದೆ. 2021ರ ಡಿಸೆಂಬರ್‌ನಲ್ಲಿ ನಿರುದ್ಯೋಗದ ಪ್ರಮಾಣ ಶೇ.7.9ಕ್ಕೆ ಏರಿಕೆಯಾಗಿದೆ. ಇದು ಕಳೆದ 4 ತಿಂಗಳಿನಲ್ಲಿಯೇ ಹೆಚ್ಚು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ತಿಳಿಸಿದೆ.
  • ಖ್ಯಾತ ಪವಿತ್ರ ಯಾತ್ರಾತಾಣ ತಿರುಮಲ ತಿರುಪತಿ ದೇವಸ್ಥಾನ( ಟಿಟಿಡಿ)ಗೆ ಕೇಂದ್ರ ಸರ್ಕಾರ ಎಫ್‌ಸಿಆರ್ಎ ಪರವಾನಗಿ ನವೀಕರಿಸದೇ ವಿದೇಶಿ ದೇಣಿಗೆಯನ್ನು ರದ್ದುಮಾಡಲಾಗಿದೆ.
  • ಭಾರತ ಕಳೆದ 2014 ಮತ್ತು 2021ರ ಅವಧಿಯಲ್ಲಿ ತನ್ನ ಸೌರ ವಿದ್ಯುತ್ ಉತ್ಪಾದನೆಯನ್ನು 18 ಪಟ್ಟು ವೃದ್ಧಿಸಿದೆ ಎಂದು ಸರಕಾರ ತಿಳಿಸಿದೆ. 2.63 ಗಿಗಾವ್ಯಾಟ್‌ನಿಂದ 47.66 ಗಿಗಾವ್ಯಾಟ್‌ಗೆ ಹೆಚ್ಚಳವಾಗಿದೆ. ಇದರ ಪರಿಣಾಮ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ, ಪಳೆಯುಳಿಕೆ ರಹಿತ ಮೂಲಗಳು ಅಥವಾ ಅಸಾಂಪ್ರದಾಯಿಕ ಮೂಲಗಳಿಂದ ಪಡೆಯುವ ವಿದ್ಯುತ್ನ ಪ್ರಮಾಣವು ಶೇ.40ಕ್ಕೂ ಹೆಚ್ಚಿನ ಮಟ್ಟಕ್ಕೆ ವೃದ್ಧಿಸಿದೆ.
  • ಹಿಂದಿ ಭಾಷಿಕ ರಾಜ್ಯಗಳಲ್ಲಿ ಶೇ 30ಕ್ಕಿಂತಲೂ ಹೆಚ್ಚು ಜನರು ಬಡವರು ಎನ್ನುತ್ತದೆ ಕೇಂದ್ರ ಸರ್ಕಾರದ ‘ಬಹು ಆಯಾಮದ ಬಡತನ ಸೂಚ್ಯಂಕ ವರದಿ’. ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಈ ಸೂಚ್ಯಂಕವನ್ನು ಸಿದ್ಧಪಡಿಸಿದೆ. 2015–16ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–4ರ ವರದಿಯ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ಮಾಡಲಾಗಿದೆ. ಆ ದತ್ತಾಂಶಗಳನ್ನು 2019–20ನೇ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ–5ರ ವರದಿಯ ದತ್ತಾಂಶಗಳಿಗೆ ಹೋಲಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ
  • ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗೆ ಶೀಘ್ರದಲ್ಲೇ ಅಮೆರಿಕದ ಸಿಗ್ ಸೌರ್ ಅಸಾಲ್ಟ್ ರೈಫಲ್ ಹಾಗೂ ಪಿಸ್ತೂಲುಗಳು ಲಭ್ಯವಾಗಲಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಕೈಗೊಳ್ಳಲು ಭಾರಿ ಬಲ ಸಿಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಪೊಲೀಸರಿಗೆ ಅತ್ಯಾಧುನಿಕ ರೈಫಲ್ ಹಾಗೂ ಪಿಸ್ತೂಲುಗಳು ಸಿಕ್ಕಂತಾಗಲಿದೆ.
  • ಸಮಯಪಾಲನೆ ಕಾರ್ಯಕ್ಷಮತೆ ವಿಷಯದಲ್ಲಿ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ವರ್ಷದಲ್ಲಿ 8 ನೇ ಶ್ರೇಣಿ ಲಭಿಸಿದೆ. ಪ್ರಯಾಣ, ಹಣಕಾಸು, ಏರೋಸ್ಪೇಸ್ ಹಾಗೂ ಏವಿಯೇಷನ್ ಉದ್ಯಮಗಳಿಗೆ ಏವಿಯೇಷನ್ ಡೇಟಾ ಒದಗಿಸುವ ಸಿರಿಯಮ್ ಈ ಶ್ರೇಣಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಟಾಪ್ 10 ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಏಕೈಕ ಭಾರತೀಯ ವಿಮಾನ ನಿಲ್ದಾಣವೂ ಇದಾಗಿದ್ದು, ಅಮೆರಿಕದ ಮಿಯಾಮಿ ವಿಮಾನ ನಿಲ್ದಾಣ, ಜಪಾನ್ ನ ಫುಕುವೋಕಾ ಹಾಗೂ ಹನೆಡಾ ವಿಮಾನ ನಿಲ್ದಾಣಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.
  • ಕೋವಿಡ್ ಬಿಕ್ಕಟ್ಟಿನಿಂದ ಶ್ರೀಲಂಕಾದ ಪ್ರವಾಸೋದ್ಯಮ ಸೊರಗಿದೆ. ಸರಕಾರದ ವೆಚ್ಚ ಹೆಚ್ಚಳ, ತೆರಿಗೆ ಕಡಿತವೂ ಸೇರಿ ದ್ವೀಪ ರಾಷ್ಟ್ರದ ಆರ್ಥಿಕತೆ ಹದಗೆಟ್ಟಿದ್ದು, ದಿವಾಳಿಯತ್ತ ಸಾಗಿದೆ ಎಂದು ವರದಿಯಾಗಿದೆ.
  • ಭಾರತದ ಭೂಪಟ ನೋಡಿದಾಗ ಶ್ರೀಲಂಕಾ ಅದರಲ್ಲಿ ಕಾಣಿಸುತ್ತದೆ. ಆದರೆ, ಯಾವುದೇ ನೆರೆ ಹೊರೆಯ ದೇಶಗಳು ಕಾಣಿಸುವುದಿಲ್ಲ. ಭಾರತ ಭೂಪಟದಲ್ಲಿ ಶ್ರೀಲಂಕಾ ಕಾಣಿಸಿಕೊಂಡಿರುವುದರ ಹಿಂದೆ ಕಡಲ ಕಾನೂನು ಕಾರಣವಾಗಿದೆ.