Published on: November 8, 2021
ಸುದ್ಧಿ ಸಮಾಚಾರ 06 ನವೆಂಬರ್ 2021
ಸುದ್ಧಿ ಸಮಾಚಾರ 06 ನವೆಂಬರ್ 2021
- ಕೋಲಾರ ಜಿಲ್ಲಾದ್ಯಂತ ಕೆಲವು ಕೆರೆಗಳಲ್ಲಿ ನಿಷೇದಿತ ಆಫ್ರಿಕನ್ ಕ್ಯಾಟ್ಪಿಷ್ ಸಾಕಾಣಿಕೆ ಮಾಡುತ್ತಿರುವ ಟೆಂಡರ್ದಾರರ ಪರವಾನಿಗೆ ರದ್ದುಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದಿಂದ ಮೀನುಗಾರಿಕೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.
- ಮುಂದಿನ ವರ್ಷ (2022) ಏಪ್ರಿಲ್ನಿಂದ ಪ್ಯಾಕೇಜಿಂಗ್ ಕುರಿತ ಹೊಸ ನಿಯಮಾವಳಿಗಳು ಜಾರಿಯಾಗಲಿದ್ದು, ದರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸಬೇಕಾಗುತ್ತದೆ.
- ನೋಟು ಅಮಾನ್ಯೀಕರಣಕ್ಕೆ 5 ವರ್ಷ ಪೂರ್ಣಗೊಂಡಿದೆ. ಆದರೆ ಜನರ ಬಳಿ ನಗದು ಪ್ರಮಾಣ ಹೆಚ್ಚುತ್ತಲೇ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ವರದಿ ಪ್ರಕಾರ 2021ರ ಅಕ್ಟೋಬರ್ 8ರಂದು ಜನರ ಬಳಿ 28.30 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳಿವೆ.
- ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಐಆರ್ಸಿಟಿಸಿ ಶ್ರೀ ರಾಮಾಯಣ ಯಾತ್ರಾ ಪ್ರವಾಸ ಸರಣಿಯನ್ನು ಆರಂಭಿಸಲು ಚಿಂತನೆ ನಡೆಸಿದೆ. ದೇಶದಲ್ಲಿ ಕೋವಿಡ್ 19 ಸನ್ನಿವೇಶದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಂತರಿಕ ಪ್ರವಾಸೋದ್ಯಮವನ್ನು ಹಂತ ಹಂತವಾಗಿ ಸ್ಥಾಪಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ.