Published on: November 7, 2022
ಸುದ್ಧಿ ಸಮಾಚಾರ – 07 ನವೆಂಬರ್ 2022
ಸುದ್ಧಿ ಸಮಾಚಾರ – 07 ನವೆಂಬರ್ 2022
- ಆರು ವರ್ಷಗಳ ನಂತರ ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ-2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ(GIM) ನಡೆಯಿತು. ಜಾಗತಿಕ ಹೂಡಿಕೆ ಸಮಾವೇಶದಲ್ಲಿ ‘ಇನ್ವೆಂಟಿಂಗ್ ದಿ ಎನರ್ಜಿ ಇಕೋಸಿಸ್ಟಮ್: ಫ್ಯೂಚರ್ ಆಫ್ ಎನರ್ಜಿ ಜನರೇಷನ್ ಇನ್ ದಿ ವರ್ಲ್ಡ್’ ಕುರಿತ ಚರ್ಚೆ ನಡೆಯಿತು. ಒಟ್ಟು ಹೂಡಿಕೆ :ರೂ. 9,81,784 ಕೋಟಿ ಬಂಡವಾಳ ಹೂಡಿಕೆ ಒಪ್ಪಂದವಾಗಿದ್ದು ಈ ಪೈಕಿ ಶೇ.90ಕ್ಕೂ ಹೆಚ್ಚು ಯೋಜನೆಗಳು ಬೆಂಗಳೂರಿನ ಆಚೆ ಅನುಷ್ಠಾನಗೊಳ್ಳುತ್ತಿದೆ. ಥೀಮ್: ನಾವೀನ್ಯತೆ, ಸುಸ್ಥಿರತೆ, ಇಕ್ವಿಟಿ ಮತ್ತು ಸ್ಥಿತಿಸ್ಥಾಪಕತ್ವದ ಮೂಲಕ ಜಗತ್ತಿಗಾಗಿ ನಿರ್ಮಿಸಿ.
- ರಾಜ್ಯ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಐಕ್ಯಾಟ್(ಇಂಟರ್ನ್ಯಾಷನಲ್ ಕ್ರಿಟಿಕಲ್-ಕೇರ್ ಏರ್ ಟ್ರಾನ್ಸ್ಫರ್ ಟೀಮ್)ಫೌಂಡೇಶನ್ ರಾಜ್ಯ ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಉಚಿತವಾಗಿ ಏರ್ ಆಂಬ್ಯುಲೆನ್ಸ್ ಸೇವೆ ನೀಡಲಿದೆ.
- ಮುಂದುವರೆದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರೀಯ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನದ 103ನೇ ತಿದ್ದುಪಡಿಯನ್ನು ಮಾನ್ಯತೆಯನ್ನು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರನ್ನೊಳಗೊಂಡ ಪಂಚ ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ.
- ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮತ್ತು ಪ್ರಸ್ತುತ ಗುಜರಾತ್ನ ಆನಂದ್ ಮತ್ತು ಮೆಹ್ಸಾನಾ ಎರಡು ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ, 2019 (ಸಿಎಎ) ಅಡಿ ಪೌರತ್ವ ನೀಡಿಲ್ಲ ಬದಲಾಗಿ ಪೌರತ್ವ ಕಾಯ್ದೆ, 1955ರ ಅಡಿಯಲ್ಲಿ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
- ದೇಶದ ಮೊದಲ ಮತದಾರ 106 ವರ್ಷದ ಶ್ಯಾಮ್ ಶರಣ್ ನೇಗಿ ನಿಧನರಾಗಿದ್ದಾರೆ. ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್ 2ರಂದು 14ನೇ ವಿಧಾನಸಭೆ ಚುನಾವಣೆ ನಡೆದಿತ್ತು. ಅದರಲ್ಲಿ ಸಹ ಅವರು ಮತ ಚಲಾಯಿಸಿದ್ದು ತಮ್ಮ ಜೀವಿತಾವಧಿಯಲ್ಲಿ 34ನೇ ಬಾರಿ ಮತ ಚಲಾಯಿಸಿದ್ದಾರೆ. ಅವರು ದೇಶದಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಅಂದರೆ 1951ರ ಅಕ್ಟೋಬರ್ 23ರಂದು ಮೊದಲ ಮತ ಚಲಾಯಿಸಿದ್ದರೆಂಬುವುದು ಉಲ್ಲೇಖನೀಯ.
- ರೈಲ್ವೆಯಲ್ಲಿ ಕಾಗದರಹಿತ ಡಿಜಿಟಲ್ ವ್ಯವಸ್ಥೆ : ಭಾರತೀಯ ರೈಲ್ವೆಯಲ್ಲಿ ಕೊನೆಗೂ ಕಾಗದರಹಿತ ವ್ಯವಸ್ಥೆ ಜಾರಿಗೆ ಬಂದಿದೆ. ಅದರ ಎಲ್ಲಾ ವಿಭಾಗಗಳು ನವೆಂಬರ್ 1ರಿಂದ ಡಿಜಿಟಲ್ ಆಗಿವೆ. ಅದರ ವಿವಿಧ ಇಲಾಖೆಗಳಲ್ಲಿನ ಎಲ್ಲಾ ರೀತಿಯ ಪತ್ರವ್ಯವಹಾರಗಳನ್ನು ಸಹ ಇ-ಕಚೇರಿ ವ್ಯವಸ್ಥೆಯಲ್ಲಿ ಇ-ಫೈಲಿಂಗ್ ಮೂಲಕ ಮಾಡಲಾಗುತ್ತಿದೆ. ವಿಶೇಷ ಸ್ವಚ್ಛತಾ ಅಭಿಯಾನ-2.0ವನ್ನು ಮೊನ್ನೆ ಅಕ್ಟೋಬರ್ 31ರಂದು ನಡೆಸಲಾಗಿತ್ತು. ಈ ಅಭಿಯಾನದ ಸಮಯದಲ್ಲಿ ಸ್ಕ್ರ್ಯಾಪ್ಗಳು ಮತ್ತು ಇತರ ಅನುಪಯುಕ್ತ ಕಡತಗಳು ಮತ್ತು ಸಾಮಗ್ರಿಗಳ ವಿಲೇವಾರಿಯಿಂದ ರೈಲ್ವೆಯು 33 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ.