Published on: January 8, 2022

ಸುದ್ಧಿ ಸಮಾಚಾರ 08 ಜನವರಿ 2022

ಸುದ್ಧಿ ಸಮಾಚಾರ 08 ಜನವರಿ 2022

  • ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.
  • ಪಂಜಾಬ್ನ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಆರ್ಟಿಕಲ್ 356 ಸುತ್ತ ಚರ್ಚೆ ಹುಟ್ಟುಹಾಕಿದೆ.
  • ಕೇಂದ್ರ ಜಲ ಶಕ್ತಿ ಸಚಿವಾಲಯವು 2020ನೇ ಸಾಲಿನ ರಾಷ್ಟ್ರೀಯ ಜಲ ಪ್ರಶಸ್ತಿ ಘೋಷಿಸಿದ್ದು, ಜಲ ಸಂರಕ್ಷಣೆಗಾಗಿ ಉತ್ತರ ಪ್ರದೇಶವು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.
  • ಹಸಿರು ಇಂಧನ ಕಾರಿಡಾರ್‌ನಡಿ ₹12,000 ಕೋಟಿ ವೆಚ್ಚದ ಎರಡನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
  • ಲಾಹೋರ್ ಹೈಕೋರ್ಟ್‍ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿ ಆಯ್ಕೆಮಾಡಲಾಗಿದೆ.
  • 2030ರ ವೇಳೆಗೆ ಭಾರತ ಆರ್ಥಿಕತೆಯಲ್ಲಿ ಏಷ್ಯಾದ ಎರಡನೇ ಅತಿದೊಡ್ಡ ರಾಷ್ಟ್ರದ ಪಟ್ಟ ಪಡೆದು ಜಪಾನ್ ನ್ನು ಹಿಂದಿಕ್ಕುವ ಸಾಧ್ಯತೆಯಿದೆ. ಜೆಡಿಪಿ ಕೂಡಾ ಜರ್ಮನಿ ಮತ್ತು ಯುಕೆಯನ್ನು ಮೀರಿಸಿ ವಿಶ್ವದ ನಂಬರ್ 3ನೇ ಸ್ಥಾನಕ್ಕೆ ಏರಲಿದೆ ಎಂದು ಐಎಚ್ ಎಸ್ ಮಾರ್ಕಿಟ್ ವರದಿಯಲ್ಲಿ ತಿಳಿಸಿದೆ.