Published on: November 8, 2022
ಸುದ್ಧಿ ಸಮಾಚಾರ – 08 ನವೆಂಬರ್ 2022
ಸುದ್ಧಿ ಸಮಾಚಾರ – 08 ನವೆಂಬರ್ 2022
- ಎಸ್ಡಿಆರ್ಎಫ್ ಪಡೆ ನಿಯೋಜನೆ:ರಾಜ್ಯ ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಬಲಪಡಿಸಲು ನಿರ್ಧರಿಸಲಾಗಿದೆ. ಅದರಂತೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಜನರನ್ನು ರಕ್ಷಿಸಲು ಪ್ರತಿ ಮೂರು ಜಿಲ್ಲೆಗೆ ಒಂದರಂತೆ ಎಸ್ಡಿಆರ್ಎಫ್ ಪಡೆಯನ್ನು ನಿಯೋಜಿಸಲಾಗುವುದು ಎಂದರು.
- ಚೆನ್ನೈ – ಬೆಂಗಳೂರು-ಮೈಸೂರು ನಡುವಿನ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕರ ರೈಲು ಚೆನ್ನೈನ ಎಂ.ಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಾಯೋಗಿಕ ಸಂಚಾರ ಆರಂಭಿಸಿತು. ನವೆಂಬರ್ 11ಕ್ಕೆ ಪ್ರಧಾನಿಯವರು ಚಾಲನೆ ನೀಡಲಿದ್ದಾರೆ.
- ಗ್ರಾಮೀಣ ಪ್ರದೇಶದ ಬಡ ಹಾಗೂ ದುರ್ಬಲ ಕುಟುಂಬಗಳ ಮಹಿಳೆಯರ ಸಾಂಸ್ಥಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಬಡತನದ ತೀವ್ರತೆಯನ್ನು ತಗ್ಗಿಸುವ ಉದ್ದೇಶದಿಂದ ಕೃಷಿ ಪೌಷ್ಟಿಕ ತೋಟ ಎಂಬ ಯೋಜನೆಯನ್ನು ಸರ್ಕಾರ ಅನುಷ್ಠಾನಕ್ಕೆಗೊಳಿಸಿದೆ.
- ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಯ ಕೊಳಲು ವಾದಕ ಶಶಾಂಕ್ ಸುಬ್ರಹ್ಮಣ್ಯ ಅವರು ಫ್ರಾನ್ಸ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಫ್ರೆಂಚ್ ನೈಟ್ಹುಡ್ ಪ್ರಶಸ್ತಿ –2022ಗೆ (ಷೆವಲಿಯರ್ ಡಿ ಆರ್ಡರ್ ದೆಸ್ ಆರ್ಟ್ ಅಟ್ ದಿ ಲೆಟರ್ಸ್) ಪಾತ್ರರಾಗಿದ್ದಾರೆ.
- ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಅತ್ಯುತ್ತಮ ಸೇವೆಗೆ ಕೊಡುವ 2021ನೇ ಸಾಲಿನ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗಲ್ ಪ್ರಶಸ್ತಿ ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಘೋಡವಾಡಿ ಉಪ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಲಕ್ಷ್ಮಿ ಮೇತ್ರೆ ಅವರಿಗೆ ಲಭಿಸಿದೆ. ತಾಯಿ, ಮಗುವಿಗೆ ಉತ್ತಮ ಸೇವೆ ನೀಡಿದ ಹಾಗೂ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಕ್ಕಾಗಿ ಈ ಪ್ರಶಸ್ತಿಗೆ ಆಯ್ಯೆಯಾಗಿದ್ದಾರೆ.
- ದೇಶದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ‘ಭಾರತದ ಅತ್ಯುತ್ತಮ ಉದ್ಯೋಗದಾತ ಮತ್ತು ಕೆಲಸ ಮಾಡಲು ವಿಶ್ವದ 20ನೇ ಅತ್ಯುತ್ತಮ ಸಂಸ್ಥೆ’ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಫೋಬ್ಸ್ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಮೈಕ್ರೊಸಾಫ್ಟ್, ಐಬಿಎಂ, ಆಲ್ಫಾಬೆಟ್ ಮತ್ತು ಆ್ಯಪಲ್ ಕಂಪನಿಗಳು ನಂತರದ ಸ್ಥಾನ ಪಡೆದಿವೆ. ಜಗತ್ತಿನ ಅತಿದೊಡ್ಡ ಆನ್ಲೈನ್ ರಿಟೇಲ್ ಮಾರಾಟ ಕಂಪನಿ ಅಮೆಜಾನ್ 14ನೇ ಸ್ಥಾನ ಪಡೆದುಕೊಂಡಿದೆ. ಡೆಕತ್ಲಾನ್ 15ನೇ ಸ್ಥಾನದಲ್ಲಿದೆ.
- ಏಷ್ಯಾ ಸ್ಕ್ವಾಷ್ ಚಾಂಪಿಯನ್ಷಿಪ್: ಸೌರಷ್ ಘೋಷಾಲ್ ಅವರನ್ನೊಳಗೊಂಡ ಭಾರತ ಪುರುಷರ ತಂಡವು ಏಷ್ಯನ್ ಸ್ಕ್ವಾಷ್ ತಂಡ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಇದೇ ಮೊದಲ ಬಾರಿ ಈ ಸಾಧನೆ ಮಾಡಿದ ಶ್ರೇಯ ಗಳಿಸಿದೆ.