Published on: October 9, 2021

ಸುದ್ಧಿ ಸಮಾಚಾರ 09 ಅಕ್ಟೋಬರ್ 2021

ಸುದ್ಧಿ ಸಮಾಚಾರ 09 ಅಕ್ಟೋಬರ್ 2021

  • ಕೇಂದ್ರ ಸರಕಾರವು ಅರಣ್ಯ ಸಂರಕ್ಷಣೆ ಕಾಯಿದೆ 1980ಕ್ಕೆ ತಿದ್ದುಪಡಿ ತಂದು ಅರಣ್ಯ ಕಾನೂನನ್ನು ಉದಾರಗೊಳಿಸಲು ಮುಂದಾಗಿದೆ. ಇದರಿಂದಾಗಿ, ಮಹತ್ವದ ಯೋಜನೆಗಳಿಗೆ ಪೂರ್ವಾನುಮತಿ ಪಡೆಯದೆ ಅರಣ್ಯ ಭೂಮಿ ಬಳಕೆಗೆ ಮುಕ್ತ ಅವಕಾಶ ಸಾಧ್ಯವಾಗಲಿದೆ.
  • ಕೆಂಪೇಗೌಡ ಅಂತರಾಷ್ಟ್ರೀಯಯ ವಿಮಾನ ನಿಲ್ದಾಣವೂ ಅತಿ ಹೆಚ್ಚು ಪೆರಿಷೆಬಲ್(ಕೊಳೆಯುವ) ಪದಾರ್ಥಗಳ ಸರಕು ಸಾಗಣಿ ಮಾಡಿದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಜವಳಿ ಕ್ಷೇತ್ರವನ್ನು ಉತ್ತೇಜಿಸುವ ಮತ್ತೊಂದು ಯೋಜನೆಯಲ್ಲಿ, ಕೇಂದ್ರ ಸಚಿವ ಸಂಪುಟ 7 ಮೆಗಾ ಇಂಟಿಗ್ರೇಟೆಡ್ ಜವಳಿ ಪ್ರದೇಶ ಮತ್ತು ಉಡುಪುಗಳ ಒಟ್ಟು 4,445 ಕೋಟಿ ರೂಪಾಯಿ ವೆಚ್ಚದ ಪಿಎಂ ಮಿತ್ರಾ ಟೆಕ್ಸ್ ಟೈಲ್ ಪಾರ್ಕ್ ಯೋಜನೆಗೆ ಅನುಮೋದನೆ ನೀಡಿದೆ.
  • ಬೆಳೆ ಹಾನಿ ಮಾಡುವ ಇಲಿ, ಬಾವಲಿಗಳು ಮತ್ತು ಕಾಗೆಗಳನ್ನು ‘ಕ್ರಿಮಿ ಕೀಟಗಳು‘(ವರ್ಮಿನ್) ಎಂದು ಘೋಷಿಸಲಾಗಿದ್ದು, ಪೊಕ್ಕಲಿ ಭತ್ತದ ಮೇಲೆ ದಾಳಿ ಮಾಡಿ, ಬೆಳೆ ನಾಶಮಾಡುವ ಬೂದು ತಲೆಯ ನೀರುಕೋಳಿ ಅಥವಾ ‘ನೀಲ ಕೋಳಿ‘ಯನ್ನೂ ಆ ಪಟ್ಟಿಗೆ ಸೇರಿಸುವಂತೆ ಕೇರಳದ ಪೊಕ್ಕಲಿ ಭತ್ತದ ಕೃಷಿಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
  • ಭಾರತೀಯ ವಾಯು ಪಡೆ ಸ್ಥಾಪನೆಯಾದ 89ನೇ ವರ್ಷದ ಆಚರಣೆ 8 ಅಕ್ಟೋಬರ್ ನಡೆಯುತ್ತಿದೆ. ಎಂದಿನಂತೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಕಾರ್ಯಾಕ್ರಮ ನಡೆಯುತ್ತಿದೆ.
  • ರಷ್ಯಾ ಮತ್ತು ಫಿಲಿಪ್ಪೀನ್ಸ್ ಇಬ್ಬರು ಪತ್ರಕರ್ತರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ವಿಶ್ವಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಪ್ರಶಸ್ತಿ ಸಮಿತಿಯು, ಅದರ ರಕ್ಷಣೆಗಾಗಿ ಈ ಇಬ್ಬರೂ ಪತ್ರಕರ್ತರು ನಡೆಸಿದ ಪ್ರಯತ್ನವನ್ನು ಮನ್ನಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಫಿಲಿಪ್ಪೀನ್ಸ್ನ  ಮರಿಯಾ ರೆಸ್ಸಾ, ರಷ್ಯಾದ ಡಿಮಿಟ್ರಿ ಮುರಾಟೋವ್ ಪ್ರಶಸ್ತಿ ಪುರಸ್ಕೃತರು.
  • ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕುಸ್ತಿಪಟು ಅಂಶು ಮಲಿಕ್ ಹೊರಹೊಮ್ಮಿದ್ದಾರೆ. ನಾರ್ವೆಯ ಓಸ್ಲೋದಲ್ಲಿ ಗುರುವಾರ ನಡೆದ 57 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ 2016ರ ಒಲಿಂಪಿಕ್ ಚಾಂಪಿಯನ್  ಹೆಲೆನ್ ಲೌಸಿ ಮಾರೌಲಿ ವಿರುದ್ಧ ಸೋಲುವ ಮೂಲಕ ಅಂಶು ಮಲಿಕ್ ಬೆಳ್ಳಿ ಪದಕ ಗೆದ್ದರು
  • ಅ.9ರಂದು ಜಗತ್ತಿನಾದ್ಯಂತ ವಿಶ್ವ ಅಂಚೆ ದಿನಾಚರಣೆ ಆಚರಿಸಲಾಗುತ್ತಿದೆ. ಪ್ರಪಂಚದ ನಾನಾ ಭಾಗಗಳ ಜನತೆ, ಸಂಸ್ಥೆ, ಸರಕಾರಗಳ ನಡುವಿನ ಸಂಪರ್ಕಕ್ಕೆ ಅತ್ಯಂತ ಹಳೆಯ ಮಾನವ ಸಂವಹನ ಪ್ರಕ್ರಿಯೆಗಳಲ್ಲಿ ಪ್ರಮುಖ ಸಾಧನವಾಗಿ ಅಂಚೆ ಸೇವೆಗಳು ನಡೆದುಬಂದಿವೆ.