Published on: June 9, 2022

ಸುದ್ಧಿ ಸಮಾಚಾರ -09 ಜೂನ್ 2022

ಸುದ್ಧಿ ಸಮಾಚಾರ -09 ಜೂನ್ 2022

  • ಕೈಗಾರಿಕೆಗಳ ಬೆಳವಣಿಗೆಯಲ್ಲಿ ಮೈಸೂರು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ಬೆಂಗಳೂರು ನಂತರ ಮೈಸೂರಿಗೆ ಕೈಗಾರಿಕೋದ್ಯಮಿಗಳು ಬರುವುದಕ್ಕಾಗಿ ಕೈಗಾರಿಕಾ ಟೌನ್‌ಶಿಫ್ ಮಾಡಲು ತೀರ್ಮಾನ ಮಾಡಲಾಗಿದೆ.

  • ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಇರಾದಲ್ಲಿ ದೇಶದ ಎರಡನೆಯ ಮತ್ತು ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ ಕೇಂದ್ರವನ್ನು ಉದ್ಘಾಟಿಸಲಾಯಿತು
  • ಹಾಲಿ ಕಕ್ಷೆಯಲ್ಲಿರುವ 10 ಸಂವಹನ ಉಪಗ್ರಹಗಳನ್ನು ಸಾರ್ವಜನಿಕ ಉದ್ಯಮ ವಲಯಕ್ಕೆ ವರ್ಗಾಯಿಸಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
  • ಕಾಶ್ಮೀರದಾದ್ಯಂತ ಐದು ದೇವಾಲಯಗಳಲ್ಲಿ ಖೀರ್ ಭವಾನಿ ಮೇಳಗಳನ್ನು ಆಯೋಜಿಸಲಾಗಿದೆ.
  • ಜೂನ್ 9 ಮತ್ತು ಜೂನ್ 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ‘ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ’ ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
  • ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ. ಅತಿಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.
  • ಭಾರತ ಮತ್ತು ವಿಯೆಟ್ನಾಂ ದ್ವಿಪಕ್ಷೀಯ ಮಿಲಿಟರಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ.
  • ಕ್ಯೂಎಸ್‌ ಶ್ರೇಯಾಂಕ: ಐಐಎಸ್‌ಸಿ ಬೆಂಗಳೂರು 151ನೇ ರ‍್ಯಾಂಕಿಗೆ ಜಿಗಿತ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ)
  • ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು82 ಕ್ಕೆ ಹೆಚ್ಚಿಸಿಕೊಂಡ ಭಾರತದ ಫುಟಬಾಲ್ ಆಟಗಾರ ಸುನೀಲ  ಚೆಟ್ರಿ ಅವರು ವಿಶ್ವದ ಆಟಗಾರರಲ್ಲಿ 3 ನೇ ಸ್ಥಾನದಲ್ಲಿದ್ದರೆ ಮೊದಲನೇ ಸ್ಥಾನದಲ್ಲಿ  ಕ್ರಿಸ್ಟಿಯಾನೊ ರೊನಾಲ್ಡೊ[117ಗೋಲು] ಮತ್ತು ಎರಡನೆಯ ಸ್ಥಾನ ಲಿಯೊನೆಲ್ ಮೆಸ್ಸಿ[86ಗೋಲು] ಪಡೆದಿದ್ದಾರೆ