Published on: November 9, 2022

ಸುದ್ಧಿ ಸಮಾಚಾರ – 09 ನವೆಂಬರ್ 2022

ಸುದ್ಧಿ ಸಮಾಚಾರ – 09 ನವೆಂಬರ್ 2022

  • ರೈತರು, ನೇಕಾರರಾರೂ ಮತ್ತು ಮೀನುಗಾರರ ಮಕ್ಕಳಿಗೆ ಜಾರಿಗೊಳಿಸಿದ ರೈತ ವಿದ್ಯಾವಿಧಿ ಯೋಜನೆಯನ್ನು ಹಳದಿ ಬೋರ್ಡ ಹೊಂದಿದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ಈ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸ ಉತ್ತೇಜಿಸಲು ವಿದ್ಯಾನಿಧಿ ಯೋಜನೆ ಸೌಲಭ್ಯದ ಅನುಷ್ಟಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
  • 68,640 ಹೆಕ್ಟೇರ್ ಪ್ರದೇಶದ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ತಮಿಳುನಾಡು ಸರ್ಕಾರವು 17ನೇ ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಅಭಯಾರಣ್ಯವು ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿನ ಮೀಸಲು ಅರಣ್ಯ ಪ್ರದೇಶಗಳನ್ನು ಒಳಗೊಂಡಿದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 26-A ಅಡಿಯಲ್ಲಿ ಅಭಯಾರಣ್ಯವನ್ನು ಸೂಚಿಸಲಾಗಿದೆ.
  • ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ)– 2014ರ ಯೋಜನೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಜತೆಗೆ, ಪಿಂಚಣಿ ನಿಧಿಗೆ ಸೇರಲು ನಿಗದಿಪಡಿಸಿದ್ದ ಗರಿಷ್ಠ ಮಾಸಿಕ ರೂ. 15 ಸಾವಿರ ವೇತನದ ಮಿತಿಯನ್ನೂ ರದ್ದುಪಡಿಸಿದೆ.
  • ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಕೆಟ್ ವಿಕ್ರಮ್ ಎಸ್ ನವೆಂಬರ್ 12 ಮತ್ತು 16 ರ ನಡುವೆ ಉಡಾವಣೆಗೆ ಸಿದ್ಧವಾಗಿದೆ ಎಂದು ಹೈದರಾಬಾದ್ ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ಸ್ಕೈರೂಟ್ ಏರೋ ಸ್ಪೇಸ್ ಪ್ರಕಟಿಸಿದೆ. ಸ್ಕೈರೂಟ್ ಏರೋ ಸ್ಪೇಸ್ನ ಮೊದಲ ಮಿಷನ್ ‘ಪ್ರಾರಂಭ'(ಆರಂಭ) ಎಂದು ಹೆಸರಿಸಲಾಗಿದ್ದು, ಮೂರು ಗ್ರಾಹಕ ಪೇಲೋಡ್ಗಳನ್ನು ಹೊತ್ತೊಯ್ಯಲಿದೆ.