Published on: December 10, 2021
ಸುದ್ಧಿ ಸಮಾಚಾರ 10 ಡಿಸೆಂಬರ್ 2021
ಸುದ್ಧಿ ಸಮಾಚಾರ 10 ಡಿಸೆಂಬರ್ 2021
- ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪ್ರಾದೇಶಿಕ ಕೌಶಲ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 14 ಚಿನ್ನ ಮತ್ತು 13 ಬೆಳ್ಳಿ ಪದಕಗಳ ಸಹಿತ ಒಟ್ಟು 27 ಪದಕಗಳನ್ನು ಮಡಿಲಿಗೆ ಹಾಕಿಕೊಂಡು ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದೆ.
- ಶೀಘ್ರದಲ್ಲೆ ಕರ್ನಾಟಕದ ಇಶಾದ್ ಮಾವು, ಕುಮಟಾ ಈರುಳ್ಳಿ, ಭಟ್ಕಳ ಮಲ್ಲಿಗೆಗೆ ಭೌಗೋಳಿಕ ಸನ್ನದು (ಜಿಐ ಟ್ಯಾಗ್) ಲಭ್ಯವಾಗಲಿದೆ.
- ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ (ಇ.ವಿ.) ನೋಂದಣಿಯಲ್ಲಿ ಉತ್ತರ ಪ್ರದೇಶ, ದೆಹಲಿ ಮತ್ತು ಕರ್ನಾಟಕ ಮುಂಚೂಣಿ ಸ್ಥಾನಗಳಲ್ಲಿ ಇವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ.
- ನಾಗಾಲ್ಯಾಂಡ್ನಲ್ಲಿ ಉಗ್ರರು ಎಂದು ತಪ್ಪಾಗಿ ಭಾವಿಸಿ ಗಣಿ ಕಾರ್ಮಿಕರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಘಟನೆಯಲ್ಲಿ 14 ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಫ್ಎಸ್ಪಿಎ (AFSPA) ಕುರಿತಾದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
- ಭಾರತದ ಅತಿ ದೊಡ್ಡ ಹಾಗೂ ಹೆಸರಾಂತ ಮ್ಯೂಸಿಕ್ ಲೇಬಲ್ ಸಂಸ್ಥೆ, ಆಡಿಯೋ ಸಂಸ್ಥೆ ಹಾಗೂ ಚಿತ್ರ ನಿರ್ಮಾಣಕ್ಕೂ ಇಳಿದಿರುವ ಟಿ-ಸಿರೀಸ್ ವಿನೂತನ ವಿಶ್ವದಾಖಲೆಗೆ ಪಾತ್ರವಾಗಿದೆ. 20 ಕೋಟಿ ಚಂದಾದಾರರನ್ನು ಹೊಂದಿದ ಮೊದಲ ಯೂಟ್ಯೂಬ್ ಚಾನೆಲ್ ಎನ್ನುವ ಖ್ಯಾತಿಗೆ ಟಿ-ಸಿರೀಸ್ ಪಾತ್ರವಾಗಿದೆ.
- ಭಾರತದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ Mi-17V-5 ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕುನೂರು ಎಂಬಲ್ಲಿ ಪತನವಾಗಿದೆ.
- ಆತ್ಮಹತ್ಯೆಯ ಪ್ರಕರಣಗಳನ್ನು ತಡೆಯಲು ಅನೇಕ ದೇಶಗಳು ಶ್ರಮಿಸುತ್ತಿದ್ದರೆ, ಸುಲಭವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧನವೊಂದಕ್ಕೆ ಸ್ವಿಟ್ಜರ್ಲೆಂಡ್ ಅನುಮೋದನೆ ನೀಡಿದೆ.
- ನ್ಯೂಜಿಲ್ಯಾಂಡ್ನಲ್ಲಿ ಮುಂದಿನ ಪೀಳಿಗೆಯ ಯುವಜನರು ಸಿಗರೇಟ್ ಸೇವಿಸುವುದನ್ನು ತಡೆಯಲು ಮಹತ್ವದ ಕಾನೂನು ರೂಪಿಸಲಾಗುತ್ತಿದೆ. ಇದರಂತೆ 2027ರಿಂದ ಯುವಜನತೆ ಸಿಗರೇಟ್ ಸೇದಲು ಅವಕಾಶವಿಲ್ಲದಂತೆ ಮಾಡಲು ಮುಂದಾಗಿದೆ. ಇದು ಜಾಗತಿಕವಾಗಿ ತಂಬಾಕು ಉದ್ಯಮದ ಮೇಲಿನ ಅತ್ಯಂತ ಕಠಿಣ ನಿಯಮವಾಗಲಿದೆ. ಇದರಿಂದ 14 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಖರೀದಿಸಲು ಕಾನೂನಿನ ಅಡಿ ಅವಕಾಶವಿಲ್ಲ.
- ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ನಲ್ಲಿ ಸಿಂಧು ದಕ್ಷಿಣ ಕೊರಿಯಾದ ಆನ್ ಸೆಯೊಂಗ್ ವಿರುದ್ಧ ಸೋತರು. ಟೋಕಿಯೊ ಒಲಿಂಪಿಕ್ಸ್-2020ರಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು
- ಖ್ಯಾತ ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರು ವಾಸ್ತುಶಿಲ್ಪಕ್ಕಾಗಿ ವಿಶ್ವದ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಯಲ್ ಗೋಲ್ಡ್ ಮೆಡಲ್ 2022 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್(RIBA) ಪ್ರಕಟಿಸಿದೆ.