Published on: January 12, 2022

ಸುದ್ಧಿ ಸಮಾಚಾರ 12 ಜನವರಿ 2022

ಸುದ್ಧಿ ಸಮಾಚಾರ 12 ಜನವರಿ 2022

  • ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ.
  • ಆಜಾಧಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಪೇಕ್ಷೆಯಂತೆ ದೇಶಾದ್ಯಂತ ಮಕರ ಸಂಕ್ರಾಂತಿಯ ದಿನ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
  • ಪಶ್ಚಿಮ ರೈಲ್ವೆಯು ಆರ್‌ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನು ಪ್ರಯಾಣಿಕರಿಗಾಗಿ ಜಾರಿಗೆ ತಂದಿದೆ.
  • ಭಾರತವು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ನಾನಾ ದೇಶಗಳ ಜತೆಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಿದ್ಧತೆ ನಡೆಸುತ್ತಿದೆ.
  • ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಲಾಗಿದೆ. ಅಮೆರಿಕದ ವೈದ್ಯರು 57 ವರ್ಷದ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ (Genetically Modified) ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಅಂಗಾಂಗ ದಾನದ ಕೊರತೆಯ ಸುದೀರ್ಘ ಕಾಲದ ಸಮಸ್ಯೆಗೆ ಇದರಿಂದ ಪರಿಹಾರ ದೊರಕುವ ಭರವಸೆ ಮೂಡಿದೆ.
  • ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ( DRDO) ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ಅನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.
  • ರಕ್ಷಣೆ ಮತ್ತು ಅಂತರಿಕ್ಷ ಯಾನ ತಂತ್ರಜ್ಞಾನಗಳ ಪ್ರಚಾರದ ಮೂಲಕ ಭಾರತ ಮತ್ತು ಸೌದಿ ಅರೇಬಿಯಾವನ್ನು ಹತ್ತಿರ ತರಲು ಸೌದಿ ಅರೇಬಿಯಾದ ಪವರ್ ಫಾರ್ ಡಿಫೆನ್ಸ್ ಟೆಕ್ನಾಲಜೀಸ್ ಕಂಪನಿ (ಪಿಡಿಟಿಸಿ) ಸಂಸ್ಥೆಯು ಭಾರತದ ನವರತ್ನ ಡಿಫೆನ್ಸ್ ಪಿಎಸ್‌ಯು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
  • ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಕಟವಾಗಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಜನವರಿ 1944 ರಿಂದ ನೀಡಲ್ಪಟ್ಟ ಪುರಸ್ಕಾರಗಳಾಗಿವೆ. ಇದನ್ನು ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ನ 87 ಸದಸ್ಯರು ದಯಪಾಲಿಸಿದ್ದಾರೆ. ಪ್ರಶಸ್ತಿಯು ಅಮೇರಿಕನ್ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ಮತ್ತು ದೂರದರ್ಶನದಲ್ಲಿನ ಶ್ರೇಷ್ಠತೆಯನ್ನು ಗುರುತಿಸುತ್ತದೆ.
  • 18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.