Published on: November 14, 2021
ಸುದ್ಧಿ ಸಮಾಚಾರ 14 ನವೆಂಬರ್ 2021
ಸುದ್ಧಿ ಸಮಾಚಾರ 14 ನವೆಂಬರ್ 2021
- ದಕ್ಷಿಣ ಒಳನಾಡಿನ ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ನ.15ರವರೆಗೆ ‘ಯೆಲ್ಲೊ ಅಲರ್ಟ್’ ಮುಂದುವರಿಸಲಾಗಿದೆ.
- ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಕರ್ಜಾತ್ ಪುರಸಭೆಯನ್ನು ಕಸ ಮುಕ್ತ ಪಟ್ಟಣವೆಂದು ಕೇಂದ್ರ ಸರ್ಕಾರ ಘೊಷಿಸಿದೆ.
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಎರಡು ನವೀನ ಮತ್ತು ಗ್ರಾಹಕ-ಕೇಂದ್ರಿತ ಯೋಜನೆಗಳು ಹೂಡಿಕೆಯ ಮಾರ್ಗಗಳನ್ನು ಹೆಚ್ಚಿಸುವುದಲ್ಲದೆ ಬಂಡವಾಳ ಮಾರುಕಟ್ಟೆಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ದೊರಕಲು ಸಹಾಯ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಭಾರತದ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ ಸದಸ್ಯ ಪ್ರಾಧ್ಯಾಪಕ ವಿಮಲ್ ಪಟೇಲ್ ಅವರು ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
- ಚೀನಾದ ಹಾಲಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ದಾಖಲೆಯ ಮೂರನೇ ಅವಧಿಗೂ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶ ನೀಡುವ ಐತಿಹಾಸಿಕ ತೀರ್ಮಾನವನ್ನು ಆಡಳಿತಾರೂಢ ಕಮ್ಯುನಿಷ್ಟ್ ಪಕ್ಷ (ಸಿಪಿಸಿ) ಕೈಗೊಂಡಿದೆ.
- ನವೆಂಬರ್ 14 ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನ. ಈ ದಿನವನ್ನು ಮಕ್ಕಳ ದಿನಾಚರಣೆ ಎಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
- ನವೆಂಬರ್ 14. ವಿಶ್ವ ಮಧುಮೇಹ ದಿನ. ಇನ್ಸುಲಿನ್ ಕಂಡು ಹಿಡಿದ ಡಾ.ಫ್ರೆಡರಿಕ್ ಬ್ಯಾಂಟಿಂಗ್ ಜನ್ಮದಿನ. ಆತ ಚಾರ್ಲ್ಸ್ ಬೆಸ್ಟ್ ಜೊತೆಗೂಡಿ 1921-22 ರಲ್ಲಿ ಮಧುಮೇಹಕ್ಕೆ ಔಷಧಿ ಕಂಡುಹಿಡಿದ ಸುದೀರ್ಘ ಸಾಹಸಗಾಥೆಗೆ ನೂರು ವರ್ಷ ತುಂಬಿದೆ.