Published on: March 14, 2022

ಸುದ್ಧಿ ಸಮಾಚಾರ 14 ಮಾರ್ಚ್ 2022

ಸುದ್ಧಿ ಸಮಾಚಾರ 14 ಮಾರ್ಚ್ 2022

  • ಕರ್ನಾಟಕದಲ್ಲಿ ಏಪ್ರಿಲ್ 24 ರಿಂದ ಮೇ 3 ರವರೆಗೆ ಆಯೋಜಿಸಲಾಗಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಮಲ್ಲಗಂಬ ಮತ್ತು ಯೋಗವನ್ನು ಸೇರಿಸಲಾಗುವುದು.
  • ಬೆಂಗಳೂರು, ತಿರುವನಂತಪುರಂ, ಹೈದರಾಬಾದ್, ಅಹಮದಾಬಾದ್ ಮತ್ತು ಶಿಲ್ಲಾಂಗ್ ನಲ್ಲಿ ಇಸ್ರೋ ಯುವಿಕಾ (ಯುವ ವಿಜ್ಞಾನಿ ಕಾರ್ಯಕ್ರಮ) ಆಯೋಜಿಸಲಿದೆ.
  • ಕರ್ನಾಟಕದಲ್ಲಿ ತಾಯಂದಿರ ಮರಣ ಅನುಪಾತ (MMR) 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 92, 2017-18 ರಲ್ಲಿ ಪ್ರತಿ ಲಕ್ಷ ಶಿಶುಗಳಿಗೆ 83ಕ್ಕೆ ಇಳಿದಿದೆ. ತಾಯಂದಿರ ಮರಣ ಪ್ರಮಾಣದಲ್ಲಿ ಒಂಬತ್ತನೇ ಸ್ಥಾನದಲ್ಲಿದ ಕರ್ನಾಟಕ ಎಂಟನೇ ಸ್ಥಾನಕ್ಕೆ ಜಿಗಿದಿದೆ.
  • ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿನೂತನ ಯೋಜನೆಯಾದ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಚಾಲನೆ ನೀಡಿದರು.
  • ಪುನೀತ್ ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ.ಅವರ ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ
  • ಜನಪ್ರಿಯ ಪ್ರವಾಸಿ ತಾಣವಾಗಿರುವ ಪುದುಚೆರಿಯ ರಾಕ್ ಬೀಚ್‌ನಲ್ಲಿರುವ ಸೇತುವೆ, ಸಮುದ್ರದ ಅಲೆಗಳ ಅಬ್ಬರಕ್ಕೆ ರಾತ್ರಿ ಕುಸಿದುಬಿದ್ದಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಭಾರಿ ದೊಡ್ಡ ಅಲೆಗಳು ಉಂಟಾಗಿ ಈ ಅನಾಹುತ ಸಂಭವಿಸಿದೆ. ಈ ಸೇತುವೆ ಪುದುಚೆರಿಯ ಸುಂದರ ಬೀಚ್‌ಗಳಲ್ಲಿ ಒಂದಾದ ರಾಕ್‌ ಬೀಚ್‌ನ ಪ್ರಮುಖ ಆಕರ್ಷಣೆಯಾಗಿತ್ತು.
  • ಸೌರ ವಿದ್ಯುತ್ ಉತ್ಪಾದನೆಯ ಮೂಲಕ ಖಾಸಗಿ ಕಂಪನಿಗಳಿಂದ ಖರೀದಿಸುವ ವಿದ್ಯುತ್ನ ಪ್ರಮಾಣವನ್ನು ಕಡಿಮೆ ಮಾಡಲು, ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚಿಸಲು ತಮಿಳುನಾಡು ರಾಜ್ಯ ಸರಕಾರ ಯೋಜನೆ ರೂಪಿಸಿದೆ.
  • ಚಿಲಿ ದೇಶದ ನೂತನ ಅಧ್ಯಕ್ಷರಾಗಿ 36 ವರ್ಷದ ಗೇಬ್ರಿಯಲ್ ಬೋರಿಕ್ ಪ್ರಮಾಣವಚನ ಸ್ವೀಕರಿಸಿದ್ದಾರೆ.