Published on: September 14, 2021

ಸುದ್ಧಿ ಸಮಾಚಾರ 14 ಸೆಪ್ಟೆಂಬರ್ 2021

ಸುದ್ಧಿ ಸಮಾಚಾರ 14 ಸೆಪ್ಟೆಂಬರ್ 2021

  • ಸೆಪ್ಟೆಂಬರ್ 14ರಂದು ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಹಿಂದಿ ಭಾಷೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಆಚರಿಸಲಾಗುತ್ತದೆ. ಹಿಂದಿ ಭಾಷೆ ದೇವನಾಗರಿ ಲಿಪಿಯಲ್ಲಿ ಬರೆಯಲಾದ ಸಂಸ್ಕೃತ ಭಾಷೆಯಿಂದ ತನ್ನ ಶೈಕ್ಷಣಿಕ ಪರಿಭಾಷೆಯನ್ನು ಪಡೆಯುವ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ.
  • ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಮತ್ತು ನಾಗಾಲ್ಯಾಂಡ್ನಲ್ಲಿ ಕೊರೋನಾ ಲಸಿಕೆಗಳನ್ನು ವಿಸ್ತರಿಸಲು ಡ್ರೋನ್ಗಳನ್ನು ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಗೆ ಷರತ್ತುಬದ್ಧ ಅನುಮತಿಯನ್ನು ನೀಡಲಾಗಿದೆ
  • ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯೂಜಿಸಿ) ಅಂಕಿ ಅಂಶಗಳ ಪ್ರಕಾರ ಜಗತ್ತಿನ ಚಿನ್ನದ ಗಣಿಗಳಿಂದ ಈ ತನಕ 1,97,576 ಟನ್ ಚಿನ್ನದ ನಿಕ್ಷೇಪ ಹೊರ ತೆಗೆದಿದ್ದು, ಭಾರತದಲ್ಲಿ 21,733 ಟನ್ ಚಿನ್ನವಿದೆ, ಇದು ಜಗತ್ತಿನ ಶೇ.11 ಪಾಲಾಗಿದೆ. ಹೆಣ್ಮಕ್ಕಳು ಮಾತ್ರವಲ್ಲ ಕೆಲ ಗಂಡಸರಲ್ಲೂ ಇರುವ ಚಿನ್ನದ ವ್ಯಾಮೋಹದಿಂದ ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಚಿನ್ನ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ.
  • ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಸಂಸ್ಥೆ, ಇದೇ ಮೊದಲ ಬಾರಿಗೆ ವೃತ್ತಿಪರ ಗಗನಯಾತ್ರಿಗಳಲ್ಲದ ನಾಲ್ವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇನ್ಸ್ಪಿರೇಷನ್ 4 ಎಂಬ ಹೆಸರಿನ ಈ ಯೋಜನೆಯಲ್ಲಿ ನಾಲ್ವರು ಭಿನ್ನ ಭಿನ್ನ ಕ್ಷೇತ್ರಗಳಿಂದ ಬಂದಿರುವ ಜನ ಬಾಹ್ಯಾಕಾಶ ಸೇರಲಿದ್ದಾರೆ.
  • ತಾಲಿಬಾನ್ ಆಡಳಿತದ ವಸ್ತ್ರಸಂಹಿತೆ ವಿರುದ್ಧ ಅಫ್ಗಾನಿಸ್ತಾನದ ಮಹಿಳೆಯರು #DoNotTouchMyClothes ಮತ್ತು #AfghanistanCulture ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ.