Published on: October 15, 2021

ಸುದ್ಧಿ ಸಮಾಚಾರ 15 ಅಕ್ಟೋಬರ್ 2021

ಸುದ್ಧಿ ಸಮಾಚಾರ 15 ಅಕ್ಟೋಬರ್ 2021

  • ಒಂದೇ ಸೂರಿನಡಿ ಸರ್ಕಾರದ ಸೇವೆಗಳನ್ನು ಒದಗಿಸುವ ಮಾಹಿತಿ ಕಣಜ ಪೋರ್ಟಲ್ ಅನ್ನು ವಿವಿಧ ಇಲಾಖೆಗಳಿಂದ ನವೀಕರಿಸಿದ ಮಾಹಿತಿಗಳೊಂದಿಗೆ ರಿಲಾಂಚ್ ಮಾಡಲಾಗಿದ್ದು, ಈಗ ಯಾವುದೇ ಲಾಗಿನ್ ವ್ಯವಸ್ಥೆ ಹೊಂದಿರುವುದಿಲ್ಲ ಮತ್ತು ಆರ್ ಟಿಐ ಅರ್ಜಿ ಸಲ್ಲಿಸದಯೇ ರಾಜ್ಯ ಸರ್ಕಾರದ 157 ಸೇವೆಗಳ ಮಾಹಿತಿಯನ್ನು ಪಡೆಯಬಹುದು.
  • ಕೆಲವು ವರ್ಗಗಳ ಮಹಿಳೆಯರಿಗೆ ಗರ್ಭಪಾತದ ಅವಧಿಯನ್ನು 20 ರಿಂದ 24 ವಾರಗಳಿಗೆ ಹೆಚ್ಚಿಸುವ ಹೊಸ ನಿಯಮಗಳನ್ನೊಳಗೊಂಡ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
  • ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ಭಕ್ತರು ನೀಡುವ ಚಿನ್ನದ ಸಣ್ಣ ಆಭರಣಗಳ ನಗದೀಕರಣ ಯೋಜನೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮರು ಚಾಲನೆ ನೀಡಿದರು.
  • ಬಹು ಮಾದರಿ ಸಂಪರ್ಕ ಏರ್ಪಡಿಸುವ ₹100 ಲಕ್ಷ ಕೋಟಿ ಮೌಲ್ಯದ ‘ಪಿಎಂ ಗತಿ ಶಕ್ತಿ’ ರಾಷ್ಟ್ರೀಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ಕೊಟ್ಟರು. ಸಾಗಣೆ ವೆಚ್ಚ ಕಡಿಮೆ ಮಾಡಿ, ಆರ್ಥಿಕತೆ ಉತ್ತೇಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಗುರಿಯನ್ನು ಇದು ಹೊಂದಿದೆ.
  • ಅಪೌಷ್ಟಿಕತೆ ನಿವಾರಣೆಗಾಗಿ ಶ್ರಮಿಸುತ್ತಿರುವ 116 ರಾಷ್ಟ್ರಗಳಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಂದ ಹಿಂದುಳಿದಿದೆ. •    ಜಾಗತಿಕ ಹಸಿವು ಸೂಚ್ಯಂಕ(ಜಿಎಚ್ಐ) ರಾಷ್ಟ್ರಗಳಲ್ಲಿನ ಹಸಿವಿನ ಮತ್ತು ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತದೆ. ಐರ್ಲೆಂಡ್ನ ಧನಸಹಾಯ ಹೊಂದಿರುವ ಏಜೆನ್ಸಿ ಕನ್ಸರ್ನ್ ವರ್ಲ್ಡ್ವೈಡ್ ಮತ್ತು ಜರ್ಮನಿಯ ಸಂಸ್ಥೆ ವೆಲ್ಟ್ ಹಂಗರ್ ಹೆಲ್ಪ್ ಸಹಯೋಗದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ
  • ಚೀನಾದೊಂದಿಗೆ ಗಡಿ ಸಂಬಂಧ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲೇ, ಹಿಂದೂ ಮಹಾಸಾಗರ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಒಕ್ಕೂಟದ ನೌಕಾಪಡೆಗಳ ಸಮರಾಭ್ಯಾಸ ಆರಂಭವಾಗಿದೆ.
  • ವಿಶ್ವ ಮಾನದಂಡ ದಿನದ ಅಂಗವಾಗಿ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನವದೆಹಲಿಯ ತನ್ನ ಕೇಂದ್ರ ಕಚೇರಿಯಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗಾಗಿ “ಉತ್ತಮ ಜಗತ್ತಿಗಾಗಿ ಹಂಚಿಕೆಯ ದೃಷ್ಟಿಕೋನ’ ಎಂಬ ಘೋಷವಾಕ್ಯದಡಿ ಇಡೀ ದಿನದ ಕಾರ್ಯಕ್ರಮ ಆಯೋಜಿಸಿತ್ತು. ನಿಯಂತ್ರಕರು, ಗ್ರಾಹಕರು ಮತ್ತು ಉದ್ಯಮಗಳಲ್ಲಿ ಜಾಗತಿಕ ಆರ್ಥಿಕತೆಗೆ ಪ್ರಮಾಣೀಕರಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ವಾರ್ಷಿಕವಾಗಿ ಅಕ್ಟೋಬರ್ 14 ರಂದು ವಿಶ್ವ ಗುಣಮಟ್ಟ ದಿನವನ್ನು ಆಚರಿಸಲಾಗುತ್ತದೆ.